ಸುದ್ದಿ

ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 500 ಕೆ ಜಿ ಧಾರವಾಡ ಪೇಡಾ!

153

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು.

ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಸ್ವಾಭಿಮಾನ ಸಮಾವೇಶ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಐದು ಕ್ವಿಂಟಾಲ್ ಧಾರವಾಡ ಪೇಡಾವನ್ನು ಉದ್ಯಮಿ ನಾರಾಯಣ ಕಲಾಲ್ ರವಾನಿಸಿದ್ದಾರೆ. ಇದಕ್ಕಾಗಿ ಅವರು 2.10 ಲಕ್ಷ ರು ಹಣ ವ್ಯಯಿಸಿದ್ದಾರೆ.ಬಾಬುಸಿಂಗ್ ಠಾಕೂರ್ ಪೇಡಾ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿದ್ದು, ಈಗಾಗಲೇ ಮಂಡ್ಯ ತಲುಪಿವೆ.

ಈ ಹಿಂದೆ ಅಂಬರೀಶ್ ಅವರು ಯಶ್, ರಾಧಿಕಾ ದಂಪತಿಯ ಮಗುವಿಗೆ ಕಲಘಟಗಿ ತೊಟ್ಟಿಲು ನೀಡುವ ಸಂಬಂಧ ನಾರಾಯಣ ಕಲಾಲ್ ಅವರಿಗೆ ಫೋನ್ ಮಾಡಿದ್ದರು. ತನ್ನ ಬೇಡಿಕೆಗೆ ಅನುಗುಣವಾಗಿ ತೊಟ್ಟಿಲು ತಯಾರಿಸಿ ಕೊಡುವಂತೆ ಅಂಬಿ ಕಲಾಲ್ ಅವರಲ್ಲಿ ಕೇಳಿಕೊಂಡಿದ್ದರು. ಬಳಿಕ ನಾರಾಯಣ್ ಕಲಾಲ್ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿಸಿಕೊಟ್ಟಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಬನಶಂಕರಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ,ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಶ್ರೀ ಬಾದಾಮಿ ಬನಶಂಕರಿ ದೇವಿ9901077772 ಜ್ಯೋತಿಷ್ಯರು .ಪ್ರೀತಿಯಲ್ಲಿ ನಂಬಿ ಮೋಸ ಹೋದವರು,ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತನ್ನು ಕೇಳದೆ ಇದ್ದರೆ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ಶತ್ರುಗಳಿಂದ ತೊಂದರೆ,ಗುಪ್ತ ಸಮಸ್ಯೆಗಳಿಗೆ ಕೇರಳ ಭಗವತಿ ದೇವಿಯ ಆರಾಧಕರಾದ ದಾಮೋದರ ಭಟ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 100% ಪರಿಹಾರ ಮಾಡಿಕೊಡುತ್ತಾರೆ 9901077772 ಮೇಷ ರಾಶಿ ದಿನಭವಿಷ್ಯಈ ದಿನ ನಿಮ್ಮ ರಾಶಿಯ ವ್ಯಕ್ತಿಗಳಿಗೆ ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಳ್ಳು ಹೇಳುವಿರಿ,…

  • ಜೀವನಶೈಲಿ

    ಸುಲಭವಾಗಿ ನಿಮ್ಮ ಜೀನ್ಸ್ ಪ್ಯಾಂಟ್ ವಾಶ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ ಜೀನ್ಸ್ ಪ್ಯಾಂಟನ್ನು ತೊಳೆಯದೆ ಪದೇ ಪದೇ ಧರಿಸಬಹುದು. ಆದ್ರೆ ಈ ಜೀನ್ಸ್ ತೊಳೆಯೋದು ಮಾತ್ರ ಕಷ್ಟದ ಕೆಲಸ. ಕೆಲಮೊಮ್ಮೆ ನಾವು ಮಾಡುವ ತಪ್ಪಿನಿಂದ ಜೀನ್ಸ್ ಬಣ್ಣ ಬೇಗ ಮಾಸುತ್ತದೆ. ಹರಿದು ಹೋಗುವ ಛಾನ್ಸ್ ಕೂಡ ಇದೆ. ನಾವು ಹೇಳುವ ಉಪಾಯ ಅನುಸರಿಸಿದ್ರೆ ಜೀನ್ಸ್ ಬಣ್ಣವನ್ನು ಹಾಗೇ ಉಳಿಸಿಕೊಂಡು ಹೋಗಬಹುದು.ನೀವು…

  • ವಿಸ್ಮಯ ಜಗತ್ತು

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿದ್ದ ಈ ವೃದ್ದ ಮಹಿಳೆ,ಅದೇ ದೇವಸ್ಥಾನಕ್ಕೆ ಕೊಟ್ಟ ಹಣ ಎಷ್ಟು ಗೊತ್ತಾ?ಈ ಲೇಖನ ಓದಿ ಶಾಕ್ ಆಗ್ತೀರಾ…

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
    ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.

  • ಸುದ್ದಿ

    ಮದುವೆ ಮೆರವಣಿಗೆಗೆ ಬಂದು ಸ್ಮಶಾನಕ್ಕೆ ಸೇರಿದ್ರು…ಕಾರಣ?

    ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ…

  • ಸಿನಿಮಾ

    ಕನ್ನಡ ಚಿತ್ರಗಳ ಹಿಂದಿನ ಎಲ್ಲಾ ದಾಖಲೆಗಳು ದೂಳಿಪಟ!ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

    ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…

  • ಸುದ್ದಿ

    ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಇಲ್ಲಿದೆ ಶುಭ ಸುದ್ದಿ, ಇನ್ಮುಂದೆ ಖಾಸಗಿ ವಲಯದಲ್ಲೂ ಮೀಸಲಾತಿ…!

    ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಶುಭ ಸುದ್ದಿ ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಬಿದ್ದಿದೆ. ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರದಲ್ಲಿ ಚರ್ಚೆಗಳು ನಡೆದು ಅಧಿಸೂಚನೆ ಹೊರಡಿಸಲಾಗಿದೆ. ಅನೇಕ ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶಗಳು) ನಿಯಮ 1969 ತಿದ್ದುಪಡಿ ತರುತ್ತಿದೆ. ಇದರ…