ಸಿನಿಮಾ

ಡೇಟ್ ಫಿಕ್ಸ್ ಆಯ್ತು ಜೂನಿಯರ್ ರಾಕಿಂಗ್ ಸ್ಟಾರ್ ಆಗಮನಕ್ಕೆ..!

By admin

November 08, 2018

ಕನ್ನಡದ ಅದ್ದೂರಿ ಚಿತ್ರ KGF ಚಿತ್ರದ ಬಿಡುಗಡೆಗೆ ಕಾದಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಸ್ವತಃ ನಟಿ ರಾಧಿಕಾ ಪಂಡಿತ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಮದುವೆ ವಾರ್ಷಿಕೋತ್ಸವ ಒಂದಾದರೆ, ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗಲಿದೆ.

ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ ದಿನವಿದ್ದು ರಾಧಿಕಾ ಡೆಲಿವರಿ ಡೇಟ್ ಇರೋದು ಡಿಸೆಂಬರ್ ನಲ್ಲಿ ಎನ್ನುವುದನ್ನು ಯಶ್ ಈಗಾಗಲೇ ಹೇಳಿದ್ದಾರೆ. ಆದರೆ ಯಾವ ದಿನ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.ಇದೇ ದಿನದ ಆಸುಪಾಸು ರಾಧಿಕಾ ಡೆಲಿವರಿ ಡೇಟ್ ಫಿಕ್ಸ್ ಆಗಿದೆ.ರಾಕಿಂಗ್ ದಂಪತಿಗೆ ಡಬಲ್ ಖುಷಿ ಸಿಗಲಿದ್ದು, ಡಿಸೆಂಬರ್ ಮೊದಲ ವಾರದಲ್ಲೇ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ.