ಆರೋಗ್ಯ

ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನಾಗುತ್ತೆ?

By admin

February 27, 2020

ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ.

ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು ಹಲವಾರು ಬಣ್ಣಗಳಲ್ಲಿ ಬರುತ್ತದೆ. ಇನ್ನು ಈ ಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಏನು ಉಪಯೋಗವಾಗುತ್ತದೆ ಎಂದರೆ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೇರಳವಾಗಿ ವಿಟಮಿನ್ಸ್, ಮಿನರಲ್ಸ್, ಫೈಬರ್ ನಿಂದ ತುಂಬಿರುವ ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ ನಿಂದ ಹೋರಾಡುತ್ತದೆ. ಇದರಲ್ಲಿ ಬೀಟಾಕೆರೋಟಿನ್ ಅಂಶ ಕ್ಯಾನ್ಸರ್ ಹಾಗೂ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ. ರಕ್ತ ಸಂಚಲನ ಸರಿಯಾಗಲು ಈ ಹಣ್ಣು ಸಹಾಯಮಾಡುತ್ತದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಈ ಹಣ್ಣು ತಿನ್ನುವುದರಿಂದ ಉಸಿರಾಟದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಹಣ್ಣು ಕರುಳಿನ ಸಂಬಂಧಿತ ತೊಂದರೆಯನ್ನ ನಿವಾರಿಸುತ್ತದೆ. ಈ ಹಣ್ಣು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.  ಹಾಗೆ ಹೆಚ್ಚು ಹಸಿವಾಗುತ್ತದೆ. ಮುಖ್ಯವಾಗಿ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗಳು ಕೂಡ ಬರುವುದಿಲ್ಲ.