ಸುದ್ದಿ

99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ! ಕಾರಣ ಮಾತ್ರ ಶಾಕಿಂಗ್.

58

ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ.

ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ.

ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್ ನಲ್ಲಿರುವ ಗೂಗಲ್ ಕಚೇರಿಯ ಮುಂದೆ 99 ಮೊಬೈಲ್ ಗಳನ್ನು ಸಣ್ಣ ಗಾಡಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ. 99 ಮೊಬೈಲ್ ಗಳಲ್ಲಿ ಜಿಪಿಎಸ್ ಆನ್ ಆಗಿದ್ದ ಕಾರಣ ಸಹಜವಾಗಿ ಗೂಗಲ್ ಕಚೇರಿಯ ಮುಂದೆ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ತೋರಿಸಿದೆ.

ಸೈಮನ್ ವೆಕರ್ಟ್ ತಂತ್ರಜ್ಞಾನವನ್ನು ನಾವು ಹೇಗೆ ಮೂರ್ಖರನ್ನಾಗಿ ಮಾಡಬಹುದು ಎಂದು ತೋರಿಸಲು ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತಾನು ಸಣ್ಣ ಗಾಡಿಯಲ್ಲಿ ಮೊಬೈಲ್‍ಗಳನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ವಿಡಿಯೋಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಸೈಮನ್ ವೆಕರ್ಟ್ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು, ಬೇರೆ ಏನು ಕೆಲಸ ಇಲ್ಲದ ಈ ವ್ಯಕ್ತಿ ತುಂಬಾ ಫ್ರೀ ಇರಬೇಕು. ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ. ತಂತ್ರಜ್ಞಾನ ಇಂತವರಿಂದಲೇ ದುರುಪಯೋಗ ಆಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪಬ್‌ಜಿಗೆ ಆಡ್ತಿದ್ದ ಯುವಕ ಮಾಡಿದ್ದೇನು ಗೊತ್ತಾ..?

    ಪಬ್‌ಜಿ ಎಂಬ ಮಹಾಮಾರಿ ಗೇಮ್ ಎಷ್ಟೊಂದು ಡೇಂಜರಸ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ರೂ ಸಹ ಇಂದಿನ ಯುವ ಪೀಳಿಗೆ ಈ ಗೇಮ್‌ಗೆ ಬಲಿಯಾಗುತ್ತಿದ್ದಾರೆ. ಸಾಕಷ್ಟು ಪ್ರಾಣ ಹಾನಿಗಳು ಸಹ ಆಗಿವೆ. ಅದೇ ರೀತಿ ಪಬ್‌ಜಿ ಗೇಮ್ ದಾಸನಾಗಿದ್ದ ಹದಿಹರೆಯದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಚರಂಡಿ ನೀರಲ್ಲಿ ಬಿದ್ದು ಒದ್ದಾಡಿದ್ದಾನೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಜಯಪುರದ ಮಧ್ಯಭಾಗದಲ್ಲಿರುವ ಗಗನ್ ಮಹಲ್ ಎಂಬ ಬೃಹತ್ ಕಂದಕದಲ್ಲಿನ ಗಲೀಜು ಗಟಾರ್ ನೀರಿನಲ್ಲಿ ಬಿದ್ದು ಹೊರಳಾಡಿದ್ದಾನೆ. ಇದನ್ನು ವಿಡಿಯೋ ಮಾಡಿಕೊಂಡ ಸ್ಥಳೀಯರು…

  • ಸುದ್ದಿ

    ದಯಮಾಡಿ ಬಿಟ್ಟುಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಕೊಂಡ ನಟ ಪ್ರಕಾಶ್ ರೈ ಪತ್ನಿ..!

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ, ಖಳನಟ ಪ್ರಕಾಶ್ ರೈ ಅವರ ಪತ್ನಿ ದಯಮಾಡಿ ಬಿಟ್ಟುಬಿಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ-ನಟಿಯರನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತ್ತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೋನಿ ಪ್ರಧಾನಿಗೆ ಟ್ವೀಟ್…

  • ಸುದ್ದಿ

    ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಈತ 100 ಕಿ.ಮೀ. ದೂರದಿಂದ ಎದ್ದು ಬಂದಿದ್ದೇಗೆ ಗೊತ್ತಾ?

    ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್‌ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…

  • ಆರೋಗ್ಯ

    ಹೆಚ್ಚಾಗಿ ಲಟಿಕೆ ತೆಗೆಯುವ ಅಭ್ಯಾಸ ಇದೆಯಾ, ಹಾಗಾದರೆ ಅಪಾಯ ತಪ್ಪಿದಲ್ಲ.

    ಲಟಿಕೆ ತಗೆಯದ ವ್ಯಕ್ತಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಲಟಿಕೆ ಎಲ್ಲರೂ ತೆಗೆಯುತ್ತಾರೆ, ಇನ್ನು ಕೆಲವರು ಕೈ ಕಾಲು ಬೆರಳುಗಳ ನೋವಿನಿಂದ ಲಟಿಕೆ ತೆಗೆದರೆ ಇನ್ನು ಕೆಲವರು ಲಟಿಕೆಯ ಶಬ್ದವನ್ನ ಕೇಳಲು ಲಟಿಕೆ ತೆಗೆಯುತ್ತಾರೆ. ಇನ್ನು ಕೆಲವರಿಗೆ ಈ ಲಟಿಕೆ ತೆಗೆಯುವುದು ಒಂದು ತರಾ ಚಟ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕೆಲವು ಜನರು ಇಡೀ ಹೊತ್ತು ಕೈ ಮತ್ತು ಕಾಲುಗಳ ಲಟಿಕೆ ತೆಗೆಯುತ್ತಲೇ ಇರುತ್ತಾರೆ ಮತ್ತು…

  • ಉಪಯುಕ್ತ ಮಾಹಿತಿ

    ನಮ್ಮ ಅಡುಗೆ ಮನೆಯ ವೇಸ್ಟ್ – ನಮ್ಮ ಮಣ್ಣಿಗೆ ಬೆಸ್ಟ್

    1. ಬಳಸಿದ ನಂತರ ಬಿಸಾಡುವ ಮೊಟ್ಟೆಯ ಕವಚ ಮಣ್ಣಲ್ಲಿ ಬೆರೆತರೆ ಗಿಡದ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ತರಕಾರಿ ಬೆಳೆಗಳಿಗೆ ತಗುಲುವ ಕೊಳೆರೋಗಗಳನ್ನು ತಡೆಗಟ್ಟುವ ಕ್ಯಾಲ್ಸಿಯಂ ಆಂಶ ಸಿಗುತ್ತದೆ. 2. ಕಾಫೀ ಗಸಿಯನ್ನು ಮಣ್ಣಿಗೆ ಸೇರಿಸಿ ಮಣ್ಣಲ್ಲಿ ಖನಿಜಾಂಶ – ಸಾರಜನಕ – ವಿಟಮಿನ್ನುಗಳನ್ನು ಹೆಚ್ಚಿಸಬಹುದು 3. ಟೀ ಗಸಿಯನ್ನೂ ಸಹ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಗುಣಮಟ್ಟ ಹೆಚ್ಚಿಸಬಹುದು 4. ಬಾಳೇಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣ ಮೇಲೆ ಹಾಕಿ, ಮಣ್ಣಿಗೆ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಷ್…

  • ಉಪಯುಕ್ತ ಮಾಹಿತಿ

    “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಆದರೆ ಇದರ ಔಷಧೀಯ ಗುಣವನ್ನು ನೀವು ತಿಳಿದರೆ ಶಾಕ್ ಆಗ್ತೀರಾ..!

    ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ