ಸುದ್ದಿ

ತಮ್ಮ ನಾಯಕ ಚುನಾವಣೆಯಲ್ಲಿ ಗೆಲ್ಲಲೆಂದು ತನ್ನ ನಾಲಿಗೆ ಸೀಳಿ ದೇವಸ್ಥಾನದ ಹುಂಡಿಗೆ ಹಾಕಿದ ಹುಚ್ಚು ಅಭಿಮಾನಿ..!

142

ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದಾಗ ತಮ್ಮ ನಾಯಕರು ಗೆಲ್ಲಲೆಂದು ಅಭಿಮಾನಿಗಳು ಎನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.

ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತುಂಡರಿಸಿದ ನಾಲಿಗೆಯನ್ನು ಹೈದ್ರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾನೆ.

ಈ ಸಂದರ್ಭದಲ್ಲಿ ಆತ ಪತ್ರವೊಂದನ್ನು ಬರೆದಿಟ್ಟಿದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲಿಯೂ ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಬೇಕು ಎಂದು ಆತ ಬರೆದಿಟ್ಟಿರುವುದಾಗಿ ಬಂಜಾರ ಹಿಲ್ಸ್ ಇನ್ಸ್ ಪೆಕ್ಟರ್ ಗೋವಿಂದ ರೆಡ್ಡಿ ಹೇಳಿದ್ದಾರೆ.

ಶ್ರೀನಗರ ಕಾಲೋನಿಯ ವೆಂಕಟೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನಂತರ ಮಹೇಶ್ ಓಸ್ಮಾನಿಯಾ ಆಸ್ಪತ್ರೆಗೆ ದೌಡಾಯಿಸಿದ್ದು, ಚಿಕಿತ್ಸೆ ಪಡೆದಿದ್ದಾನೆ. ಆತನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

2009ರ ಚುನಾವಣೆ ಸಂದರ್ಭದಲ್ಲೂ ನಾಗೇಶ್ ಇದೇ ರೀತಿ ಮಾಡಿದ್ದ ಎನ್ನಲಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್ . ರಾಜಶೇಖರ ರೆಡ್ಡಿ ಅವರ ನಿಷ್ಠಾವಂತ ಅಭಿಮಾನಿಯಾಗಿದ್ದು, ಅವರ ಗೆಲುವಿಗಾಗಿ ತುಂಡಿಸಿದ ನಾಲಿಗೆಯನ್ನು ತ್ಯಾಗ ಮಾಡಿರುವುದಾಗಿ ಹೇಳಿಕೆ ನೀಡಿದ್ದ. 2004ರ ಚುನಾವಣೆ ಸಂದರ್ಭದಲ್ಲೂ ಆತ ಇದೇ ರೀತಿಯಲ್ಲಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.ತೆಲಂಗಾಣದಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈ ಮನೆಮದ್ದು ಉಪಯೋಗಿಸಿ, ಒಂದೇ ದಿನದಲ್ಲಿ ಮೊದವೆಗೆ ಗುಡ್ ಬೈ ಹೇಳಿ..!

    ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. ಆದ್ರೆ ಪಾರ್ಟಿಗೆ ಹೋಗಬೇಕೆಂದಾಗ, ಯಾವುದೋ ಬಹುಮುಖ್ಯ ಸಮಾರಂಭವಿದ್ದಾಗಲೇ ಮುಖದ ಮೇಲೆ ಮೊಡವೆ ಎದ್ದು ಬಿಡುತ್ತದೆ. ಇದು ನಮ್ಮ ಸಂತೋಷಕ್ಕೆ ಕಪ್ಪು ಚುಕ್ಕಿಯಾಗ್ಬಿಡುತ್ತದೆ. ಮೊಡವೆ ಹೋಗಲಾಡಿಸಲು ಕೆಲವೊಂದು ಮನೆ ಮದ್ದುಗಳಿವೆ. 24 ಗಂಟೆಯೊಳಗೆ ನಿಮ್ಮ ಮುಖದ ಮೇಲಿದ್ದ ಮೊಡವೆಗಳು ಮಾಯವಾಗ್ಬಿಡ್ತವೆ. ಅಂತ ಔಷಧಿಗಳನ್ನು ನಾವು ಹೇಳ್ತೇವೆ ಕೇಳಿ. ಜೇನು ತುಪ್ಪ : ಸಾಕಷ್ಟು ಸೌಂದರ್ಯದ ಗುಣಹೊಂದಿರುವ ಜೇನು ತುಪ್ಪ ಮೊಡವೆ ಹೋಗಲಾಡಿಸಲು ಸಹಕಾರಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿರುತ್ತದೆ. ರಾತ್ರಿ ಮೊಡವೆಯಾದ ಜಾಗಕ್ಕೆ ಸ್ವಲ್ಪ…

  • ಸುದ್ದಿ

    ಸರ್ಕಾರಿ ನೌಕರರಿಗೊಂದು ಬಂಪರ್ ಆಪರ್ ,5 ದಿನ ಮೊದಲೇ ಸಿಗಲಿದೆ ಸಂಬಳ….!

    ನೌಕರರು, ಉದ್ಯೋಗಿಗಳ ವಲಯಕ್ಕೆ ಶುಭ ಸುದ್ದಿ ಇಲ್ಲಿದೆ. ಸೆಪ್ಟಂಬರ್ 26, 27 ರಂದು ಬ್ಯಾಂಕ್  ಮುಷ್ಕರವಿದ್ದು, ಸತತವಾಗಿ 5 ದಿನ ರಜೆ ಇರುವುದರಿಂದ 5 ದಿನ ಮೊದಲೇ ವೇತನ ನೀಡಲು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. 28 ರಂದು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. 29 ರಂದು ಭಾನುವಾರ ಕೂಡ ರಜೆ ಇರುತ್ತದೆ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ವಹಿವಾಟು…

  • ಉಪಯುಕ್ತ ಮಾಹಿತಿ

    ದಿನಕ್ಕೆ ಎರಡು ರೂಪಾಯಿ ಉಳಿಸಿದ್ರೆ, ಕೇವಲ ಒಂದೇ ವರ್ಷಕ್ಕೆ ಲಕ್ಷಾಧಿಪತಿಯಾಗುತ್ತೀರಾ..!ಹೇಗೆಂದು ತಿಳಿಯಲು ಮುಂದೆ ನೋಡಿ…

    ಉಳಿತಾಯ ಖಾತೆ ತೆರೆಯಲು ಇಷ್ಟಪಡವವರಿಗೆ ಈ ವಿಧಾನ ತುಂಬಾನೇ ಸರಳ ಹಾಗು ಸೂಕ್ತ ಅನಿಸುತ್ತೆ. ಇತ್ತೀಚಿನ ದಿನಗಳಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಹೆಚ್ಚು ಮಂದಿ ಬಯಸುತ್ತಾರೆ. ಬಡವರು ಮಧ್ಯಮ ವರ್ಗದವರಿಗೆ ಇದು ತುಂಬಾನೇ ಅವಶ್ಯಕ. ಈ ವಿಧಾನ ಮನೆಯ ಹೆಣ್ಣು ಮಕ್ಕಳಿಗೆ ತುಂಬಾನೇ ಸಹಕಾರಿಯಾಗಿದೆ. ಈ ರೀತಿಯಲ್ಲಿ ಉಳಿತಾಯ ಮಾಡುತ್ತ ಹೋದರೆ ವರ್ಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ನೀವು ಸಂಪಾದಿಸಬಹುದು. ಇದರಿಂದ ನಿಮ್ಮ ಮನೆಯ ಕೆಲಸಕ್ಕೆ ಬಳಸಿ ಕೊಳ್ಳಬಹುದು. ಪ್ರತಿ ದಿನ ಯಾವ ರೀತಿಯಲ್ಲಿ ಉಳಿತಾಯ…

  • ಸುದ್ದಿ

    ಕೇವಲ ತಬ್ಬಿಕೊಂಡ ಮಾತ್ರಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜುನಿಂದಲೇ ತೆಗೆದುಹಾಕಿದ್ರು..!

    ವಿದ್ಯಾರ್ಥಿನಿಯೊಬ್ಬಳು ಯುವಕನೊಬ್ಬನನ್ನು ತಬ್ಬಿಕೊಂಡ ಕಾರಣ ಯೂನಿವರ್ಸಿಟಿ, ಅವಳನ್ನು ಕಾಲೇಜಿನಿಂದ ಉಚ್ಚಾಟಿಸಿದ್ದು, ಇದೀಗ ಅಪ್ಪುಗೆಯೇ ಆಕೆಯ ವಿದ್ಯಾರ್ಥಿ ಜೀವನಕ್ಕೆ ಸಂಚಕಾರ ತಂದಿದೆ. ಈಜಿಪ್ಟ್ ನ ಅಲ್-ಅಝರ್ ಯೂನಿವರ್ಸಿಟಿ, ವಿದ್ಯಾರ್ಥಿನಿಯ ಈ ವರ್ತನೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ ಈ ಕ್ರಮಕೈಗೊಂಡಿದೆ. ಅಲ್-ಅಝರ್ ಯೂನಿವರ್ಸಿಟಿಯ ಮನ್ಸೌರಾದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟಿದ್ದು, ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು. ಇದರ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಯೂನಿವರ್ಸಿಟಿಯ ಆಡಳಿತ ಮಂಡಳಿಯವರೆಗೂ ತಲುಪಿತ್ತು. ಅವಿವಾಹಿತ ಮಹಿಳೆ-ಪುರುಷ…

  • ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು

    24 ಗಂಟೆ ಇನ್ಮುಂದೆ ವಿದ್ಯುತ್ ಪೂರೈಕೆ, ಪವರ್ ಕಟ್ ಮಾಡಿದರೆ ವಿತರಕರಿಗೆ ದಂಡ..!ತಿಳಿಯಲು ಈ ಲೇಖನ ಓದಿ..

    ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.

  • ಜ್ಯೋತಿಷ್ಯ

    ಶನಿ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…