ಉಪಯುಕ್ತ ಮಾಹಿತಿ

ನೀವು ಬಳಸುವ ಮಾತ್ರೆಗಳ ಪ್ಯಾಕ್ ನಲ್ಲಿ ಈ ಕೆಂಪು ಗೆರೆ ಏಕಿರುತ್ತದೆ ಗೊತ್ತಾ. ಯಾರಿಗೂ ತಿಳಿದಿಲ್ಲ.

157

ಔಷಧಿಗಳನ್ನು ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿ ಚೀಟಿ ತೋರಿಸಿ ಔಷಧಿಗಳನ್ನು ಪಡೆದುಕೊಳ್ಳುತ್ತೇವೆ. ಇದುಯ್ ಒಂದು ಸಾಮಾನ್ಯದ ಸಂಗತಿ ಆದರೆ ಬಹುಷಃ ನಿಮಗೆ ಗೊತ್ತಿರುವುದಿಲ್ಲ ಈ ದೇಶದಲ್ಲಿ ಅದೆಷ್ಟೋ ಮಂದಿ ಅವಿದ್ಯಾವಂತರೋ ಅಥವಾ ತಿಳುವಳಿಕೆ ಇಲ್ಲದ ಜನರು ಒಮ್ಮೊಮ್ಮೆ ಜ್ವರ ಹಾಗು ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರ ಬಳಿ ತೋರಿಸದೆ ಮೆಡಿಕಲ್ ಗಳಿಂದ ಮಾತ್ರೆಗಳನ್ನು ತಗೆದುಕೊಳ್ಳುತ್ತಾರೆ.

ಈ ರೀತಿ ಮಾಡುವುದು ಎಷ್ಟೊಂದು ದೊಡ್ಡ ತಪ್ಪು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ, ಹೌದು ಕೆಲವೊಮ್ಮೆ ನಾವು ತಗೆದುಕೊಳ್ಳುವ ಮಾತ್ರೆಗಳು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಅಥವಾ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಅಸಲಿ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನೀವು ಯಾವುದೇ ಮಾತ್ರೆಯ ಪ್ಯಾಕ್ ಗಳ ಮೇಲೆ ಕೆಂಪು ಬಣ್ಣದ ಗೆರೆ ಇರುವುದನ್ನು ನೀವು ನೋಡಿರಬಹುದು, ಇಂದು ಇದೆ ವಿಷಯದ ಕುರಿತು ನಿಮಗೆ ಮನದಟ್ಟು ಮಾಡಲಿದ್ದೇವೆ. ವೈದ್ಯಕೀಯ ಲೋಕ ಹಾಗು ಔಷದಿ ತಯಾರಿಕಾ ಕಂಪನಿಗಳು ತಾವು ತಯಾರಿಸಿ ಮಾರಾಟ ಮಾಡುವ ಕೆಲ ಉತ್ಪನ್ನಗಳಲ್ಲಿ ತನ್ನದೇ ಆದ ಕೆಲವು ಷರತ್ತುಗಳನ್ನು ಒಳಗೊಂಡಿರುತ್ತದೆ.

ಇಂದು ನಾವು ನಿಮ್ಮೊಂದಿಗೆ ಔಷಧಿಗಳ ಪ್ಯಾಕ್ ಗಳಲ್ಲಿ ಕಂಡುಬರುವ ಕೆಂಪು ರೇಖೆಗಳ ಕಾರಣವನ್ನು ಹಂಚಿಕೊಳ್ಳಲಿದ್ದೇವೆ. ಈ ಕೆಂಪುಗೆರೆಯ ಪ್ರಮುಖ ಸೂಚನೆ ಎಂದರೆ ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು ಎಂದು ಹೆಚ್ಚಾಗಿ ಹೇಳಲಾಗುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಮತ್ತು ಅವರು ಸೂಚಿಸಿದ medicines ಗಳನ್ನೂ ತೆಗೆದುಕೊಳ್ಳಿ.

ಈ ಎಚ್ಚರಿಕೆಯ ಹೊರತಾಗಿಯೂ, ಅನೇಕ ರೋಗಿಗಳು ಅಥವಾ ಅವರ ಕುಟುಂಬಗಳು ಟಿವಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ವೈದ್ಯರ ಸಲಹೆಯನ್ನು ನೋಡದೆ ನೇರವಾಗಿ ಮೆಡಿಕಲ್ ಗಳಿಂದ ನಿಯಂತ್ರಿತ ಔಷದಿ ತೆಗೆದುಕೊಳ್ಳುತ್ತಾರೆ, ಇದು ನಂತರ ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಜನರ ಈ ಅಭ್ಯಾಸವನ್ನು ನೋಡಿ, ಆರೋಗ್ಯ ಸಚಿವಾಲಯವು ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

ಅರೋಗ್ಯ ಸಚಿವಾಲಯ ಹೇಳಿರುವ ಈ ಸೂಚನೆ ಪ್ರಕಾರ ವೈದ್ಯರ ಸಲಹೆ ಇದ್ದಾಗ ಮಾತ್ರ ನೀವು ಕೆಂಪು ಗೆರೆ ಇರುವ ಕೆಲ ಮಾತ್ರೆಗಳ ಪ್ಯಾಕ್ ಗಳನ್ನೂ ಬಳಸಬಹುದು ಇಲ್ಲದಿದ್ದಲ್ಲಿ ಇದು ಬಹಳಷ್ಟು ಅಪಾಯಕಾರಿ ಎಂದು ಹೇಳಿದೆ. ವೈದ್ಯರು ಸೂಚಿಸಿದರೆ ಮಾತ್ರ ನೀವು ಈ ರೀತಿಯ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ, ಕೆಂಪು ಗೆರೆಗಳನ್ನು ಹೊಂದಿರುವ ವೈದ್ಯಕೀಯ ಮಳಿಗೆಗಳು ಸಹ ವೈದ್ಯರ ರಶೀದಿ ಅಥವಾ ಅನುಮತಿಯಿಲ್ಲದೆ ಈ ರೀತಿಯ ಮಾತ್ರೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಆದ್ದರಿಂದ ಮುಂದಿನ ಬಾರಿ ನೀವು ವೈದ್ಯರ ಸಲಹೆಯಿಲ್ಲದೆ ಕೆಂಪು ಗೆರೆ ಇರುವ ಮೆಡಿಸಿನ್ ಗಳನ್ನೂ ತೆಗೆದುಕೊಳ್ಳಬೇಡಿ. ವೈದ್ಯರು ಬರೆದುಕೊಟ್ಟ ರಶೀದಿ ಇದ್ದರೆ ಮಾತ್ರ ಪಡೆದುಕೊಳ್ಳಿ. 

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ