ಉಪಯುಕ್ತ ಮಾಹಿತಿ

ರುಚಿಕರವಾದ ಹಯಗ್ರೀವ ಮಾಡುವ ವಿಧಾನ ಹೇಗೆ ಗೊತ್ತಾ.?

117

ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ.
ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್‌‌‌, ತೆಂಗಿನ ತುರಿ – 1ಕಪ್‌, ಬೆಲ್ಲ – 1 ಕಪ್‌‌‌‌, ತುಪ್ಪ – 1 ಕಪ್‌‌‌
ಏಲಕ್ಕಿ ಪುಡಿ – 1/2 ಸ್ಪೂನ್, ಗಸಗಸೆ – 1/4 ಕಪ್‌‌, ಗೋಡಂಬಿ – 1/4 ಕಪ್‌‌‌, ಬಾದಾಮಿ – 1/4ಕಪ್‌‌‌
ಒಣದ್ರಾಕ್ಷಿ – 1/4 ಕಪ್‌‌‌.

ತಯಾರಿಸುವ ವಿಧಾನ

ಒಂದು ಬೌಲ್ನಲ್ಲಿ ಕಡಲೇ ಬೇಳೆಯನ್ನು ಹಾಕಿ. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್‌ಗೆ ಹಾಕಿ. ಅರ್ಧ ಕಪ್ ನೀರನ್ನು ಸೇರಿಸಿ. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಇದನ್ನು 2 ನಿಮಿಷ ಬೇಯಿಸಲು ಬಿಡಿ. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ, ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು,ನಂತರ ಲವಂಗವನ್ನು ಸೇರಿಸಿ ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

ಸಲಹೆ : ಕಡಲೇ ಬೇಳೆಯನ್ನು ನೆನೆಸಿಕೊಂಡರೆ ನುಣ್ಣಗೆ ಬೇಯುತ್ತದೆ. ಒಣಗಿದ ತೆಂಗಿನ ತುರಿ ಸೇರಿಸುವುದು ನಿಮ್ಮ ಆಯ್ಕೆ. ಗಸಗಸೆಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಕ್ಯಾಲೋರಿ – 256.9 ಕ್ಯಾಲ್ ಫ್ಯಾಟ್ – 11.4 ಗ್ರಾಂ. ಪ್ರೋಟೀನ್ – 21.1 ಗ್ರಾಂ. ಕಾರ್ಬೋಹೈಡ್ರೇಟ್ – 61 ಗ್ರಾಂ. ಸಕ್ಕರೆ – 24.8 ಗ್ರಾಂ. ಫೈಬರ್ – 6.2 ಗ್ರಾಂ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ