ಸುದ್ದಿ

ತೆಲಂಗಾಣದಲ್ಲಿ 27 ವಿದ್ಯಾರ್ಥಿಗಳ ಆತ್ಮಹತ್ಯೆ,ವರದಿ ಕೇಳಿದ ರಾಷ್ಟ್ರಪತಿ., ಕಾರಣ.?

163

ಹೈದರಾಬಾದ್, ಆಗಸ್ಟ್ 14: ತೆಲಂಗಾಣದಲ್ಲಿ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೂಚಿಸಿದ್ದಾರೆ. ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಒಟ್ಟು 27 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮುಖ್ಯ ಕಾರ್ಯದರ್ಶಿ ಎಸ್‌ಕೆ ಜೋಶಿ ಅವರಿಗೆ ವರದಿ ನೀಡುವಂತೆ ತಿಳಿಸಿದ್ದಾರೆ.


ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿಮೂರು ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ.ತೆಲಂಗಾಣ ರಾಜ್ಯದ ಮಧ್ಯಂತರ ಪರೀಕ್ಷಾ ಮಂಡಳಿ(TSBIE)ಯು ಏ. 18ರಂದು ಫಲಿತಾಂಶವನ್ನುಪ್ರಕಟಿಸಿತ್ತು. ಅಚ್ಚರಿಯೆಂದರೆ ಈ ವೇಳೆ ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ದೊಡ್ಡ ಪ್ರಮಾದಕಂಡುಬಂದಿತ್ತು.

ಮೊದಲವರ್ಷದ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿಗಳು ಎರಡನೇ ವರ್ಷದಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ವಿವಿಧ ವಿಷಯಗಳಲ್ಲಿ ಕೇವಲ ಸೊನ್ನೆ, ಒಂದು ಹಾಗೂ ಎರಡುಅಂಕಗಳನ್ನು ಮಾತ್ರ ಕೊಡಲಾಗಿದೆ ಎಂದು ಸಾಕಷ್ಟು ದೂರುಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದರು.ಈರೀತಿಯ ಪ್ರಕರಣಗಳಿಂದ ಇನ್ನುಳಿದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಲ್ಲಿ ತಳಮಳ ಉಂಟುಮಾಡಿದೆ.ಪರೀಕ್ಷೆಯಲ್ಲಿ ಫೇಲ್​ ಆಗುವುದರಿಂದ ಜೀವನವೇ ಮುಗಿದುಹೋಯಿತು ಎಂಬುದಕ್ಕೆ ಅರ್ಥವಿಲ್ಲ. ಹೀಗಾಗಿವಿದ್ಯಾರ್ಥಿಗಳ ಆತ್ಮಹತ್ಯೆಯ ಯೋಚನೆ ಮಾಡಬೇಡಿ ಎಂದು ಕೆಸಿಆರ್​ ಮನವಿ ಮಾಡಿಕೊಂಡಿದ್ದಾರೆ.

ಈ ವರ್ಷ 4,09,133 ವಿದ್ಯಾರ್ಥಿಗಳು ನಿಯಮಿತ ಪದ್ದತಿಯಂತೆ ಮೊದಲ ವರ್ಷದ ಪರೀಕ್ಷೆಯನ್ನು ಎದುರಿಸಿದ್ದು, ಅದರಲ್ಲಿ 2,47,407 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ದ್ವಿತೀಯ ವರ್ಷದಲ್ಲಿ 3,82,534 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2,47,555 ವಿದ್ಯಾರ್ಥಿಗಳು ಮಾತ್ರ ಪಾಸ್​ ಆಗಿದ್ದಾರೆ. ಪರೀಕ್ಷಾ ಫಲಿತಾಂಶದಲ್ಲಿನ ಪ್ರಮಾದದ ತನಿಖೆಗಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದು, ಸಮಿತಿ ತನ್ನ ವರದಿಯನ್ನೂ ಕೂಡ ಸಲ್ಲಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ