ಕೋಲಾರ:-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಹಾಗೂ ಗುಂಪುಗಾರಿಕೆ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಕೆ.ಹೆಚ್.ಮುನಿಯಪ್ಪನವರು ಬೆಂಬಲಿಗರ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ನವರು ಸಿದ್ದರಾಮಯ್ಯ ನವರಿಗೆ ಕೋಲಾರಕ್ಕೆ ಸ್ವಾಗತ ಕೋರಿದೆ. ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಗೊಂದಲಕ್ಕೆ ತೆರೆ ಬೀಳಲಿದೆ. ಜನವರಿ 9ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಸಿದ್ದು ಆಪ್ತ ವಲಯ ಹಾಗೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜನವರಿ 9ರಂದು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಕೋಲಾರದಲ್ಲೇ ಘೋಷಣೆ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತ ವಲಯದ ಮಾಹಿತಿ ನೀಡಿವೆ.

ಇದೇ ತಿಂಗಳ 9ನೇ ತಾರೀಖಿನಂದು ಕೋಲಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ಹಿನ್ನೆಲೆ ತಾಲ್ಲೂಕಿನ ನರಸಾಪುರ ಹಾಗೂ ವೇಮಗಲ್ ಹೋಬಳಿಯ ಗ್ರಾಮಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ, ಸಿದ್ಧರಾಮಯ್ಯ ಕೋಲಾರಕ್ಕೆ ಆಗಮಿಸುತ್ತಿದ್ದು ಅವರಿಗೆ ಬೆಂಬಲ ನೀಡುವಂತೆ ಮಾಜಿ ಸಚಿವ ಕೃಷ್ಣಬೈರೇಗೌಡರು ಕರೆ ನೀಡಿದರು. ವಿಧಾನಸಭಾ ಕ್ಷೇತ್ರದಲ್ಲಿ ಜನರ ಮತ್ತು ಕಾರ್ಯಕರ್ತರಲ್ಲಿ ಇರುವ ಗೊಂದಲ ನಿವಾರಿಸಲು ಸಿದ್ಧರಾಮಯ್ಯನವರು ಇದೇ 9ನೇ ತಾರೀಖಿನಂದು ಕೋಲಾರಕ್ಕೆ ಆಗಮಿಸಿ ಗೊಂದಲಗಳನ್ನು ನಿವಾರಿಸಿ ಎಲ್ಲ ಕಾರ್ಯಕರ್ತರನ್ನೂ ಒಟ್ಟಿಗೆ ಕರೆಕೊಂಡು ಹೋಗಲಿದ್ದು, ಈ ಹಿಂದೆ ಕೋಲಾರ ಜಿಲ್ಲೆಗೆ 1300 ಕೋಟಿ ಅನುದಾನ ನೀಡಿ ಕೆ.ಸಿ.ವ್ಯಾಲಿ ನೀರನ್ನು ಒದಗಿಸಿ ಬರಡಾಗಿದ್ದ ಕೋಲಾರ ಈಗ ಮಲೆನಾಡಾಗಿದೆ,ಇಂತ ಹ ವ್ಯಕ್ತಿ ನಮ್ಮ ಕೋಲಾರದಿಂದ ಸ್ಪರ್ಧಿಸಿದರೆ ಜಿಲ್ಲೆಯೂ ಅಭಿವೃದ್ಧಿಯಾಗಲಿದೆ ಎಂದು ಚಂಜಿಮಲೆ ರಮೇಶ್ ಹೇಳಿದರು.