ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ವೆಬ್ಸೈಟ್ ಆರಂಭ….!

By admin

May 25, 2019

ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ.

ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್ ಶಶಿಕಾಂತ್ ಸೆಂತಿಲ್ ಅವರ ಕನಸಿನ ಕೂಸಾಗಿರುವ ಆನ್ ಲೈನ್ ಪೋರ್ಟಲ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಮರಳು ಮಾಫಿಯಾ ದಂಧೆಯಿಂದ ಬಚಾವ್ ಮಾಡಲಿದೆ ಎಂಬ ನಂಬಿಕೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ವ್ಯಾಪಕವಾಗಿತ್ತು. ಮರಳಿನ ಕೊರತೆಯನ್ನು ಸೃಷ್ಟಿಸಿ ಜನರಿಗೆ ಹೆಚ್ಚಿನ ದರದಲ್ಲಿ ಮರಳನ್ನು ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ವೆಬ್ ಸೈಟ್ ಆರಂಭದಿಂದ ದಂಧೆಗೆ ಕಡಿವಾಣ ಹಾಕಲಿದೆ.