ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ ಅದು ಸಹಜವಾಗಿ ಬರುತ್ತದೆ ಅದೇ ನನ್ನ ಸಕ್ಸಸ್ ಮಂತ್ರ ಎಂದು ಹೇಳಿದ್ದಾರೆ.
ಇದರ ಜೊತೆಗೆ ನಿಮ್ಮ ರೋಲ್ ಮಾಡೆಲ್ ಯಾರು ಎಂದು ಕೇಳಿದಾಗ, ನನಗೆ ಹಲವರು ಜನ ರೋಲ್ ಮಾಡೆಲ್ ಗಳು ಇದ್ದಾರೆ ಎಂದು ಯಶ್ ಉತ್ತರಿಸಿದರು. ಈ ವೇಳೆ ಅವರ ಪೈಕಿ ಮೊದಲ ಮೂರು ಜನರನ್ನು ಹೇಳಿ ಎಂದಾಗ, ನನಗೆ ನಮ್ಮ ಕನ್ನಡದ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರ ಈಗ ಬದುಕಿಲ್ಲ ಆದರೆ ಅವರ ನನಗೆ ಮಾದರಿಯಾಗಿದ್ದಾರೆ. ಕ್ರಿಕೆಟರ್ ಎಂಎಸ್ ಧೋನಿ ಅವರು ಕೂಡ ನನಗೆ ಮಾದರಿ ಅವರ ವರ್ತನೆ ನನಗೆ ತುಂಬಾ ಇಷ್ಟ. ಹಾಗೇ ನೋಡಿದರೆ ನಮ್ಮ ಪ್ರಧಾನ ಮಂತ್ರಿಯವರು ಕೂಡ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
ತಮ್ಮ ಮಂದಿನ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಭವಿಷ್ಯದ ಬಗ್ಗೆ ಹಲವು ಯೋಜನೆಗಳನ್ನು ಮಾಡಿದ್ದೇನೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಪ್ರಬುದ್ಧತೆ ಪಡೆದುಕೊಂಡ ನಟನಾಗಿ ನನ್ನ ವೃತ್ತಿಯನ್ನು ಇಂದಿಗಿಂತಲೂ ಹೆಚ್ಚು ಒಳ್ಳೆಯ ರೀತಿಯಲ್ಲಿ ನಿರ್ವಹಿಸಬೇಕು ಎಂಬುದು ನನ್ನ ಭವಿಷ್ಯದ ಯೋಜನೆ. ಜೊತೆಗೆ ನನ್ನ ಕಡೆ ಉಸಿರಿರುವರೆಗೂ ನಟನಾಗಿ ಇರಬೇಕು ಎಂಬುದು ನನ್ನ ಆಸೆ. ಸದ್ಯ ಕೆಜಿಎಫ್-2 ಮಾಡುತ್ತಿದ್ದೇನೆ ನಂತರ ಮುಂದಿನ ಚಿತ್ರದ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಮುಂಬೈನಲ್ಲಿ ಜಿಕ್ಯೂ 50ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ ಅವರ ಯೋಚನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿತು. ದಿ ಜಿಕ್ಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದೆ. 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ಕೆಯಾದ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಯಶ್ ಆಯ್ಕೆಯಾಗಿದ್ದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಐಆರ್ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದಕ್ಕೂ ಮುನ್ನ…
ಈಗಾಗಲೇ ಮಿಲನ ಪ್ರಕಾಶ್ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್’ ಚಿತ್ರದ ಶೂಟಿಂಗ್ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…
ಅಧಿಕಾರದ ಮದವನ್ನು ತುಂಬಿರುವಂತ ಎಷ್ಟೋ ಜನ ಐಎಎಸ್ ಅದಿಕಾರಿಗಳನ್ನ ಪ್ರಸ್ತುದಿನಗಳಲ್ಲಿ ಕಾಣಬಹುದು. ಆದರೆ ಕೆಲ ಐಎಎಸ್ ಅಧಿಕಾರಿಗಳು ತಮ್ಮ ರಕ್ತದಲ್ಲೇ ಸಮಾಜ ಸೇವೆ ಬೆರೆತು ಬಂದಿದೆ ಏನೋ ಅನ್ನೋ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಕೆಲ ಐಎಎಸ್ ಅಧಿಕಾರಿಗಳ ಸೇವೆಯನ್ನು ನಾವು ನೋಡಿರುವ ಹಾಗೆ ಸಮಾಜಕ್ಕೆ ಅಥವಾ ಒಂದು ಸಮುದಾಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ನೋಡಿರುತ್ತಿವೆ.
ಪತಿಯ ಎದುರೇ ಪತ್ನಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್ಪುರ್ ಜಿಲ್ಲೆಯಲ್ಲಿ ಜೂನ್ 11ರಂದು ನಾಲ್ವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದಂಪತಿ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಈಗ ಪತಿಯೊಂದಿಗೆ ಸೆಕ್ಸ್ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಪತಿಯೊಂದಿಗೆ ಬರುತ್ತಿದ್ದಾಗ ನಾಲ್ಕು ಜನರ ಗುಂಪು ನಮ್ಮನ್ನು ತಡೆಯಿತು. ಬಳಿಕ ಪತಿಯ ಮೇಲೆ ಹಲ್ಲೆ…
ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು.
ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು. ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ…