ಮನರಂಜನೆ

ನಾನು ಈ ಕೆಲಸ ಮಾಡಿದ್ದರೆ ಬಿಗ್ ಬಾಸ್ ಗೆಲ್ಲುತ್ತಿದ್ದೆ ಎಂದ ರ್ಯಾಪಿಡ್ ರಶ್ಮಿ..!ರಶ್ಮಿ ಲೈವ್ ನಲ್ಲಿ ಹೇಳಿದ್ದೇನು ಗೊತ್ತಾ..?

By admin

January 30, 2019

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.ಬಿಗ್ ಬಾಸ್ ಸೀಸನ್ ಆರರ ಸ್ಪರ್ಧಿ, ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾದ ರ್‍ಯಾಪಿಡ್ ರಶ್ಮಿ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ.. 

ಇನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದ ರ್ಯಾಪಿಡ್ ರಶ್ಮಿ ಟಾಪ್ 5 ಕಂಟೆಸ್ಟಂಟಾಗಿ ಎಲಿಮಿನೇಟ್ ಆಗಿ ಹೊರಬಂದಿದ್ದು ಇದೇ ಮೊದಲ ಬಾರಿಗೆ ನಿನ್ನೆ ಫೇಸ್‍ಬುಕ್‍ ಲೈವ್‍ನಲ್ಲಿ ಬಂದಿದ್ದರು.ಈ ವೇಳೆ ಸಾಕಷ್ಟು ಜನರು ಅವರಿಗೆ ಕಮೆಂಟ್ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಇನ್ನೂ ಕೆಲವರು ಬಿಗ್ ಬಾಸ್ ವಿಜಯಿಯಾಗಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದ್ದರು.ತಮ್ಮನ್ನು ಬೆಂಬಲಿಸಿದ್ದವರಿಗೆ ನಿನ್ನೆ ಉತ್ತರಿಸಿದ ರಶ್ಮಿ ಬಿಗ್ ಬಾಸ್ ಗೆಲ್ಲಬೇಕು ಅಂದರೆ ಹೊರಗಡೆ ತುಂಬಾ ಪ್ರಚಾರ ಮಾಡಬೇಕು. ನಾನು ಅದನ್ನು ಮಾಡಿಲ್ಲ. ಪ್ರಮಾಣಿಕವಾಗಿ ಆಟವಾಡಿದ್ದೇನೆ. ಇದನ್ನು ನೋಡಿ ನೀವು ವೋಟ್ ಮಾಡಿದ್ದರ ಫಲವಾಗಿ ಅಷ್ಟು ದೂರ ಬಿಗ್ ಬಾಸ್ ಮನೆಯಲ್ಲಿದ್ದೆ ಎಂದಿದ್ದಾರೆ.

ಇದೇ ವೇಳೆ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಆ್ಯಂಡಿ ಕುರಿತು ಮಾತನಾಡಿದ ಅವರು ಆ್ಯಂಡಿದು ಖಂಡಿತವಾಗಿಯೂ ಮಗುವಿನಂತ ಮನಸ್ಸಲ್ಲ. ಅದು ಕ್ಯಾಮರಾ ಮುಂದೆ ಮಾಡಿರುವ ಕಪಿಚೇಷ್ಟೆಯಷ್ಟೇ ಎಂದು ಹೇಳಿದರು.