ಸುದ್ದಿ

ಡಾರ್ಲಿಂಗ್ ಪ್ರಭಾಸ್ ಮನ ಕದ್ದ ಚೆಲುವೆ ಇವರೇನಾ..?

By admin

August 05, 2019

ಟಾಲಿವುಡ್ ನ ಮೋಸ್ಟ್ ಹ್ಯಾಂಡ್ ಸಮ್ ಹಾಗೂ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ದ, ಟಾಲಿವುಡ್ ಮಂದಿಗೆ ಡಾರ್ಲಿಂಗ್ ಪ್ರಭಾಸ್ ಮದುವೆ ವಿಚಾರವಾಗಿ ಸಣ್ಣದೊಂದು ಕ್ಲೂ ಸಿಕ್ಕಿದೆ ಹೌದು ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ನಟಿ ಅನುಷ್ಕಾ ಶೆಟ್ಟಿಯನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು, ಜೊತೆಗೆ ಇದಕ್ಕೆ ಪುಷ್ಠಿ ನೀಡುವಂತೆ ಈ ಬಾಹುಬಲಿ ಜೋಡಿ ಹಲವು ಸಮಾರಂಭಗಳಲ್ಲಿ, ಅಲ್ಲಿ ಇಲ್ಲಿ ಒಟ್ಟಾಗಿ ಸುತ್ತಾಡಿದ್ದರು.

 ಅಷ್ಟೇಲ್ಲದೆ ಕೆಲ ದಿನಗಳ ಹಿಂದೆ ಇವರಿಬ್ಬರು ಮತ್ತೊಮ್ಮೆ ಲಂಡನ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಈ ತಾರಾ ಜೋಡಿ ಸಪ್ತಪದಿ ತುಳಿಯುತ್ತಾರೆಯೇ. ಎಂಬ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಹುಟ್ಟುಕೊಂಡಿತ್ತು. ಇನ್ನೂ ಈ ವಿಚಾರವಾಗಿ ನಟಿ ಅನುಷ್ಕಾ ನಾವಿಬ್ಬರೂ ಉತ್ತಮ ಫ್ರೆಂಡ್ಸ್ , ಅದು ಬಿಟ್ಟರೇ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ ಎಮದು ಸ್ಪಷ್ಟಪಡಿಸಿದ್ದರು. ನಂತರ ಪ್ರಭಾಸ್ ಮದುವೆ ವಿಚಾರ ಸ್ವಲ್ಪ ತಣ್ಣಗಾಗಿತ್ತು ಆದರೀಗ ಮತ್ತೊಮ್ಮೆ ಟಾಲಿವುಡ್ ಅಂಗಳದಲ್ಲಿ ಬಾಹುಬಲಿ ಪ್ರಭಾಸ್ ಮದುವೆ ಸುದ್ದಿ ಶುರುವಾಗಿದ್ದು, ಪ್ರಭಾಸ್ ಮದುವೆ ವಿಚಾರಕ್ಕೆ ಇಷ್ಟರಲ್ಲಿಯೇ ಪುಲಿಸ್ಟಾಪ್ ಬೀಳುವ ಸಾಧ್ಯತೆಗಳಿವೆ.

ಹೌದು ನಟ ಪ್ರಭಾಸ್ ಮದುವೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ , ಅಮೆರಿಕ ಮೂಲದ ಭಾರತೀಯ ಹುಡುಗಿಯನ್ನು ವರಿಸಲಿದ್ದಾರಂತೆ ಪ್ರಭಾಸ್ . ಇನ್ನೂ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್ ಸಹೋದರಿ ಅಣ್ಣ ಅಣ್ಣನ ಮದುವೆ ಬಗ್ಗೆ ಮಾತುಕತೆಗಳು ನಡೆಯುತ್ತಿವೆ . ಅಮೆರಿಕ ಮೂಲದ ಉದ್ಯಮಿಯೊಬ್ಬರ ಮಗಳನ್ನು ಅಣ್ಣ ವಿವಾಹವಾಗಲಿದ್ದಾರೆ ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ

ಸದ್ಯ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಗಾಗಿ ಕುಟುಂಬಸ್ಥರು ಕಾಯುತ್ತಿದ್ದು , ಇದೇ ತಿಂಗಳ 30 ರಂದು ಸಾಹೋ ಚಿತ್ರ ಬಿಡುಗಡೆಯಾಗಲಿದೆ . ನಂತರ ಎರಡು ಕುಟುಂಬಗಳು ಸೇರಿ ದಿನಾಂಕ ಮತ್ತು ಇನ್ನೂ ಹಲವು ವಿಚಾರಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ . ಇನ್ನೂ ಎಲ್ಲಾ ವಿಚಾರಗಳನ್ನು ಗಮನಿಸುತ್ತಿದ್ದರೆ ವರ್ಷದ ಕೊನೆಯಲ್ಲಿ ಡಾರ್ಲಿಂಗ್ ಪ್ರಭಾಸ್ ಹಸೆಮಣೆ ಏರುವುದು ಕನ್ಫರ್ಮ್ ಎನ್ನಲಾಗುತ್ತಿದೆ .