Health

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತೀರಾ?ಹಾಗಾದರೆ ಈ ಅಭ್ಯಾಸದಿಂದ ಅಪಾಯ ತಪ್ಪಿದ್ದಲ್ಲ ಎಚ್ಚರ!

By admin

November 19, 2019

ಮೊಬೈಲ್‌ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ.  ಯಾರು ಮೆಸೇಜ್‌ ಮಾಡಿರಬಹುದು,ಯಾರು ಕಾಲ್‌ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್‌ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು.

ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್‌ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್‌ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್‌ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಮೊಬೈಲ್‌ ಇಲ್ಲದೆ ದಿನ ಕಳೆಯಲು ಕಷ್ಟವಾಗಬಹುದು.

ಹಾಗಂತ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ಮೇಲೆ ಕಣ್ಣಾಡಿಸುವ ಅಭ್ಯಾಸವಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂದು ಅಧ್ಯಯನ ವರದಿ ಹೇಳಿದೆ.ಬೆಳಗ್ಗೆ ಎದ್ದ ತಕ್ಷಣ ಇಮೇಲ್ ಚೆಕ್ ಮಾಡಲು, ನ್ಯೂಸ್‌ ಓದಲು, ಸ್ಟೇಟಸ್‌ ಚೆಕ್‌ ಮಾಡಲು ಮೊಬೈಲ್‌ ನೋಡುವ ಅಭ್ಯಾಸ ಹೆಚ್ಚಿನವರಲ್ಲಿದೆ.

ಆದರೆ ಐಡಿಸಿ(International Data Corporation)ನಡೆಸಿದ ಅಧ್ಯಯನದಲ್ಲಿ ಶೇ. 80ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಬೆಳಗ್ಗೆ ಎದ್ದು 15 ನಿಮಿಷದೊಳಗಾಗಿ ಮೊಬೈಲ್‌ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತಾರೆ. ಪ್ರತಿ 5 ಜನ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 4 ಜನರು ಮೊಬೈಲ್‌ ಬಳಸುವ ಚಟ ರೂಢಿಸಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ.