inspirational

ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

By admin

June 25, 2019

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳು ಪೆಟ್ರೋಲ್ ಎಂಜಿನ್ ಸಹಾಯದಿಂದ ಚಲಿಸುತ್ತಿರುವುದು ಎಂದು ನಮಗೆಲ್ಲಾ ತಿಳಿದೇ ಇದೆ. ಜೊತೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಎಂಜಿನ್ ಬೈಕ್‌ಗಳಿಗೆ ಟಕ್ಕರ್ ನೀಡುವುದಕ್ಕೆ ಸಜ್ಜಾಗುತ್ತಿವೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಕೋಕಾಕೋಲಾದಿಂದ ಬೈಕ್ ಚಾಲನೆ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾನೆ.

ವಾಹನಗಳ ಇಂಧನಗಳ ಬೆಲೆ ಕಡಿತಗೊಳಿಸುವುದಕ್ಕೆ ಜಗತ್ತಿನಾದ್ಯಂತ ಹಲವು ಹೊಸ ಇಂಧನ ಮಾದರಿಗಳನ್ನು ಪತ್ತೆಹಚ್ಚಲು ಹತ್ತಾರು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲೊಬ್ಬ ಯುವಕ ಮಾತ್ರ ಒಂದು ಸಾಧಾರಣ ಕೂಲ್ ಡ್ರಿಂಕ್‍ನಿಂದಲೂ ಬೈಕ್ ಚಾಲನೆ ಮಾಡಬಹುದಾ ಎನ್ನುವ ಕುರಿತು ಹೊಸ ಸಂಶೋಧನೆಗೆ ಕೈ ಹಾಕಿದ್ದಾನೆ. ಹಾಗಾದ್ರೆ ಆ ಯುವಕನ ಐಡಿಯಾ ವರ್ಕೌಟ್ ಆಯ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

ಮೊದಲಿಗೆ ಈತ ತನ್ನ ಬೈಕಿನಲ್ಲಿದ್ದ ಕೊನೆಯ ಹನಿಯವರೆಗು ಪೆಟ್ರೋಲ್ ಅನ್ನು ಹೊರತೆಗೆದು ಫ್ಯುಯೆಲ್ ಟ್ಯಾಂಕ್‍ನಲ್ಲಿಕೋಕಾಕೋಲಾ ತುಂಬಿಸಿದ್ದ. ನಂತರ ಬೈಕ್ ಸ್ಟಾರ್ಟ್ ಆಯಿತು. ಆದ್ರೆ ಕೋಕಾಕೋಲ ಬೈಕ್ ಎಂಜಿನ್‌ಗೆ ಸಹಕರಿಸುತ್ತಾ ಎನ್ನುವುದೇ ಎಲ್ಲರ ಮನದ ಪ್ರಶ್ನೆ.

ಈತ ಮಾಡಿದ ಈ ಸಂಶೋಧನೆಯಿಂದ ಬಂದ ಉತ್ತರ ಏನೆಂದರೆ, ಕೋಕಾಕೋಲಾದಿಂದ ಬೈಕ್ ಚಲಾಯಿಸಲು ಸಾಧ್ಯವೇ ಇಲ್ಲವೆಂಬುವುದು. ನೀವು ವಿಡಿಯೋ ಗಮನಿಸಿದ್ದಲ್ಲಿ ಬೈಕ್ ಶುರುವಾಗಿ ಕೆಲ ದೂರ ಮಾತ್ರವೇ ಸಾಗುತ್ತೆ. ಇದು ಹೇಗೆಂದರೆ ಪೆಟ್ರೋಲ್ ಎಲ್ಲವನ್ನು ಹೊರ ತೆಗೆದ ನಂತರ ಕಾರ್ಬೋರೆಟರ್‍‍ನಲ್ಲಿದ್ದ ಪೆಟ್ರೋಲ್‍ನ ಸಹಾಯದಿಂದ. ಆದ್ರೂ ಪೆಟ್ರೋಲ್‍‍ಗೆ ಅದರದ್ದೆ ಆದ ಕೆಲ ಗುಣಗಳನ್ನು ಹೊಂದಿರುತ್ತೆ. ಅವುಗಳ ಸ್ಥಾನವನ್ನು ಪಡೆಯಲು ಬೇರೆ ಯಾವ ಅನೀಲಕ್ಕು ಸಾಧ್ಯವಿಲ್ಲ ಎಂದು ತಿಳಿಯುತ್ತೆ.