ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಸಂಶೋಧನೆಯೊಂದು ಕೇವಲ ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ. ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದನ್ನು ತಿಳಿಸಿದೆ.
ಪಪ್ಪಾಯಿ ಬೀಜಗಳ ಉಪಯೋಗವೇನು?
1. ಕ್ಯಾನ್ಸರ್ ಪಪ್ಪಾಯಿ ಬೀಜಗಳು ಆ್ಯಂಟಿ ಕ್ಯಾನ್ಸರ್ ಅಂಶಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಹೀಗಾಗಿ ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವ ಅಂಶವನ್ನು ಹೊಂದಿದೆ.
2. ಹೊಟ್ಟೆನೋವು ಕಡಿಮೆ ಮಾಡುತ್ತದೆ ಹೊಟ್ಟೆನೋವಿನಿಂದ ಬಳಲುತ್ತಿರುವವರು ದಿನಕ್ಕೆ 3 ಬಾರಿ ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ನೀರಿನಲ್ಲಿ ಬೆರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
3. ಮೊಡವೆ ಸಮಸ್ಯೆ ದೇಹದ ಹಾರ್ಮೊನ್ನಲ್ಲಿ ಆಗುವ ಏರುಪೇರಿನಿಂದ ಸಾಮಾನ್ಯವಾಗಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪಪ್ಪಾಯಿ ಬೀಜಗಳು ಮತ್ತು ಪಪ್ಪಾಯಿ ಎಲೆಗಳನ್ನು ಅರೆದು ಫೇಸ್ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣಿರಲ್ಲಿ ಮುಖ ತೊಳೆದರೆ ಮೊಡವೆ ಕಡಿಮೆಯಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚಾಗಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೂ ಅಪಾಯಕಾರಿ. ಹೆಚ್ಚಿನ ಪ್ರಮಾಣದಲ್ಲಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಮಿತವಾಗಿ, ಸ್ವಲ್ಪ ಪ್ರಮಾಣದಲ್ಲಿ ಪಪ್ಪಾಯಿ ಬೀಜ ಸೇವಿಸಿ ಆರೋಗ್ಯಕರ ಲಾಭ ಪಡೆಯಿರಿ.
4. ಮೂತ್ರಪಿಂಡದ ಸಮಸ್ಯೆ ಮೂತ್ರಪಿಂಡದ ಸಮಸ್ಯೆ, ಕಾಯಿಲೆ, ವೈಫಲ್ಯಗಳನ್ನು ತಡೆಗಟ್ಟುವಳ್ಳಿ ಪಪ್ಪಾಯಿ ಬೀಜ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇದ್ದವರು 3ರಿಂದ 4 ಪಪ್ಪಾಯಿ ಬೀಜವನ್ನು ಪುಡಿಮಾಡಿ ಅಥವಾ ಅರೆದು ನೀರಿನಲ್ಲಿ ಬೆರಿಸಿ ಕುಡಿದರೆ ನಿಧಾನವಾಗಿ ಸಮಸ್ಯೆಯಿಂದ ಪಾರಾಗಬಹುದು.
5. ಯಕೃತ್ತಿನ(ಲಿವರ್) ಕಾಯಿಲೆ ಪಪ್ಪಾಯಿ ಬೀಜಗಳು ಯಕೃತ್ತಿನ ಸಿರೋಸಿಸ್ ಗುಣಪಡಿಸುವ ಪೋಷಕಾಂಶಗಳನ್ನು ಹೊಂದಿದೆ. 6 ಒಣಗಿದ ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ಅಥವಾ ಜಜ್ಜಿ ಅದನ್ನು ಆಹಾರ ಅಥವಾ ನೀರು, ನಿಂಬೆ ರಸದೊಂದಿಗೆ ಬೆರಿಸಿ ಸೇವಿಸಿದರೆ ಲಿವರ್ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. 30 ದಿನಗಳ ಕಾಲ ಪ್ರತಿನಿತ್ಯ ಹೀಗೆ ಮಾಡುವುದರಿಂದ ಲಿವರ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ವಾಘಪುರ್ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ. ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ…
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ…
Bandipur National Park is regarded as one of the most beautiful and the better-managed national parks of India. Located amidst the picturesque surroundings of the towering Western Ghat Mountains on the Mysore-Ooty highway in Karnataka, Bandipur National Park covers an area of about 874.2 sq km.
ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.