ಸುದ್ದಿ

ಆಕಾಶದಿಂದ ಪಾತಾಳಕ್ಕೆ ಇಳಿದ ಈರುಳ್ಳಿ, ಕೇಜಿಗೆ ಈರುಳ್ಳಿ 25 ರೂಪಾಯಿ.!

By admin

December 11, 2019

ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ.

ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ಸಬ್ಸಿಡಿ ಆಧಾರದಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದು ಪ್ರಶಂಸೆಗೆ ಪಾತ್ರವಾಗಿದೆ. ದೇಶಾದ್ಯಂತ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದು, ಇದನ್ನರಿತ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ಈರುಳ್ಳಿ ಮೇಲೆ ಸಬ್ಸಿಡಿ ಘೋಷಣೆ ಮಾಡಿದೆ.