ಸುದ್ದಿ

ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ. ಈ ಸುದ್ದಿ ನೋಡಿ..

By admin

December 02, 2019

ಕುಲ ಕುಲವೆಂದು ಬಡಿದಾಡುವ ಈ ದಿನದಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲದೇವರು ಒಂದೇ ಎಂದು ತಿಳಿದು ಅಯ್ಯಪ್ಪ ಮಾಲೆ ಧರಿಸಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಸ್ಮರಣೆ ಮಾಡುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳ ಪೂರೈಸಿ ಶಬರಿಗೆ ಹೋಗುವಾಗ ಅರಣ್ಯದ ಮಧ್ಯದಲ್ಲಿಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಳ್ಳುತ್ತಾರೆ. ಅಡವಿಯಲ್ಲಿಹೋಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಾಬರ ಸ್ವಾಮಿ ಸಹಾಯಕನಾಗುತ್ತಾನೆ ಎಂಬ ಪ್ರತೀತಿಯಿದೆ. ಇದರಿಂದ ಎಲ್ಲಧರ್ಮದವರು ಅವರ ಭಕ್ತರಾಗಲು ಸಾಧ್ಯ ಎಂದು ಅಯ್ಯಪ್ಪ ಭಕ್ತರೊಬ್ಬರು ತಿಳಿಸುತ್ತಾರೆ.

ಪ್ರಥಮ ಬಾರಿ ನಾನು ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ ತುಂಬ ಸಂತಸವಾಗುತ್ತಿದೆ. ಮೊದಲಿನಿಂದಲೂ ಅಯ್ಯಪ್ಪ ಭಕ್ತರನ್ನು ಕಂಡು ನಾನು ಮಾಲೆ ಧರಿಸಬೇಕು ಎಂದು ಯೋಚಿಸುತ್ತಿದೆ. ಈ ಸಲ ಅವಕಾಶ ಕೂಡಿ ಬಂದಿದ್ದು, ನನ್ನ ಅದೃಷ್ಟ. ಕಂಪನಿ ಮಾಲಿಕ ನರೇಂದ್ರ ರಾಠೋಡ್‌ ಪ್ರೇರಣೆಯಿಂದ ಬಾಬ್ಲು 41 ದಿನಗಳ ಅಯ್ಯಪ್ಪ ಮಾಲೆ ಪ್ರಥಮ ಬಾರಿ ಧಾರಣೆ ಮಾಡಿಕೊಂಡು ಕೊಮು ಸೌಹರ್ದತೆಗೆ ಸಾಕ್ಷಿಯಾಗಿದ್ದಾನೆ. ಮೊದಲ ದಿನವೇ ಪೂಜೆ, ಪಠಣದಲ್ಲಿನಿರತನಾಗಿ ಉಳಿದ ಎಲ್ಲಅಯ್ಯಪ್ಪ ಭಕ್ತರಿಗೆ ಬೆರಗಾಗುವಂತೆ ಮಾಡಿದ್ದಾನೆ. ಅಯ್ಯಪ್ಪ ಭಕ್ತರು ಪಾಲಿಸುವ ಎಲ್ಲನೀತಿ, ನಿಯಮ ಪೂಜೆ-ಪುನಸ್ಕಾರಗಳನ್ನು ತಪ್ಪದೇ ಪಾಲಿಸುತ್ತಿದ್ದಾನೆ.

ಅಯ್ಯಪ್ಪ ಸ್ವಾಮಿ ತತ್ವಮಸಿ ಆಗಿದ್ದು, ಜಾತಿ, ಧರ್ಮಗೆ ಸಿಮೀತವಾಗಿಲ್ಲ. ಎಲ್ಲ ಧರ್ಮದವರು ಅಯ್ಯಪ್ಪ ಭಕ್ತರಾಗಬಹುದು. ನಮ್ಮಲ್ಲಿಕೆಲಸ ಮಾಡುತ್ತಿರುವ ಲಾರಿ ಡ್ರೈವರ್‌ ಅಯ್ಯಪ್ಪ ಮಾಲೆ ಧರಿಸಲು ನಮ್ಮ ಕುಟುಂಬದ ಅನುಕರಣ ವೇ ಕಾರಣ. ದೇಶ ದಲ್ಲಿಹಿಂದು-ಮುಸ್ಲಿಂ ಐಕ್ಯತೆಗೆ ಇದು ಮಾದರಿಯಾಗಿದೆ. ದೇಶದ ಜಾತ್ಯತೀತ ಭಾವನೆಗೆ ಪ್ರೇರಣೆಯಾಗಿದೆ. ಬಾಬ್ಲುಅಯ್ಯಪ್ಪ ಮಾಲೆ ಧರಿಸಿದ್ದು ಕೇಳಿ ನಮ್ಮ ದೇಶ ಸಹಿಷ್ಣತೆಗೆ ಪ್ರಮುಖ್ಯತೆ ನೀಡುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.