ಕರ್ನಾಟಕ

ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಾಲಾ ಕಿಟ್ ವಿತರಣೆ

22

ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್‌ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ‍್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್ ಬಾಲಯ್ಯ ರವರು ಮಾತನಾಡಿ, ಪಾರದರ್ಶಕವಾಗಿ ಕಟ್ಟಡ ಕಾರ್ಮಿಕ ನೋಂದಾಯಿತ ಜ್ಯೇಷ್ಟತಾ ಆಧಾರದ ಮೇಲೆ ಫಲಾನುಭವಿಗಳ ಮಕ್ಕಳಿಗೆ ನೇರವಾಗಿ ಶಾಲಾ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದು, ಕೋಲಾರ ಕಾರ್ಮಿಕ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳ ಸಹಕಾರದಿಂದ ನಮ್ಮ ಸಂಘ 250ಕ್ಕೂ ಹೆಚ್ಚು ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ಮತ್ತು ಆಯುಷ್‌ಮಾನ್ ಕಾರ್ಡ್ ವಿತರಿಸಲಾಗಿದೆ ಹಾಗೂ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ನೂರಾರು ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದು. ಇದೇ ವೇಳೆ ಕೋಲಾರ ಜಿಲ್ಲಾ ಸೆಂಟ್ರ‍್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದ್ದು, ಅದರಂತೆ ಕೋಲಾರ ಜಿಲ್ಲೆಗೆ 3000 ಕಿಟ್‌ಗಳು ಸ್ವೀಕೃತವಾಗಿದ್ದು, ಇವುಗಳನ್ನು ತಾಲ್ಲೂಕುವಾರು ಅಂದರೆ, ಕೋಲಾರ-750, ಮುಳಬಾಗಿಲು ಮತ್ತು ಶ್ರೀನಿವಾಸಪುರ-750, ಬಂಗಾರಪೇಟೆ-500, ಮಾಲೂರು-500 ಮತ್ತು ಕೆಜಿಎಫ್-500 ಒಟ್ಟು 3000 ಕಿಟ್‌ಗಳು ಸ್ವೀಕೃತಿಯಾಗಿರುತ್ತವೆ. ಸದರಿ ಕಿಟ್‌ಗಳನ್ನು ಪಾರದರ್ಶಕವಾಗಿ ಹಾಗೂ ನೇರವಾಗಿ ಫಲಾನುಭವಿಗಳ ಮಕ್ಕಳಿಗೆ ವಿತರಿಸಬೇಕಾಗಿರುವುದರಿಂದ ನೋಂದಾಯಿತ ಕಾರ್ಮಿಕರಗುರುತಿನಚೀಟಿ. ಕಾರ್ಮಿಕರ ಮತ್ತು ಮಗುವಿನ ಆಧಾರ್‌ಕಾರ್ಡ್ ಪ್ರತಿ. ವಿದ್ಯಾರ್ಥಿ 01 ರಿಂದ 05ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಮೂಲ ವ್ಯಾಸಂಗ ಪ್ರಮಾಣ ಪತ್ರ ಈ ಎಲ್ಲಾ ದಾಖಲೆಗಳೊಂದಿಗೆ ಫಲಾನುಭವಿಯೇ ನೇರವಾಗಿ ಎಲ್ಲಾ ತಾಲ್ಲೂಕು ಮಟ್ಟದ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಭೇಟಿ ನೀಡಿ ಈ ಮೇಲಿನ ದಾಖಲೆಗಳನ್ನು ಸಲ್ಲಿಸಿದ ನಂತರ ಕಟ್ಟಡ ಕಾರ್ಮಿಕರ ನೋಂದಣಿಯ ಕಾರ್ಡ್ ಜೇಷ್ಠತೆಯ ಆಧಾರದ ಮೇಲೆ ಪರಿಶೀಲನೆಗೊಂಡ ನಂತರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ನೀಡಲಾಗುವುದು.

ಮುಂದುವರೆದು, 06 ತರಗತಿಯಿಂದ 08ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ನೀಡಲು ನಿರ್ದರಿಸಲಾಗಿರುತ್ತದೆ. ಕೋಲಾರ-750, ಮುಳಬಾಗಿಲು ಮತ್ತು ಶ್ರೀನಿವಾಸಪುರ-750, ಮಾಲೂರು-500, ಬಂಗಾರಪೇಟೆ-500 ಮತ್ತು ಕೆಜಿಎಫ್-500 ಒಟ್ಟು 3000 ಕಿಟ್‌ಗಳು ಸ್ವೀಕರಿಸಲಾಗುವುದು, ಈಗಾಗಲೇ ಬಂಗಾರಪೇಟೆ ತಾಲ್ಲೂಕಿಗೆ 500 ಕಿಟ್‌ಗಳು ಸ್ವೀಕೃತಿಯಾಗಿರುತ್ತವೆ. ಅದರಂತೆ, ಉಳಿದ ತಾಲ್ಲೂಕುಗಳಿಗೆ ಶಾಲಾ ಕಿಟ್‌ಗಳು ಸ್ವೀಕೃತಿಯಾದ ನಂತರ ಸದರಿ ಕಿಟ್‌ಗಳನ್ನು ಪಾರದರ್ಶಕವಾಗಿ ಹಾಗೂ ನೇರವಾಗಿ ಫಲಾನುಭವಿಗಳ ಮಕ್ಕಳಿಗೆ ವಿತರಿಸಬೇಕಾಗಿರುವುದರಿಂದ ನೋಂದಾಯಿತ ಕಾರ್ಮಿಕರ ಗುರುತಿನಚೀಟಿ. ಕಾರ್ಮಿಕರ ಮತ್ತು ಮಗುವಿನ ಆಧಾರ್‌ಕಾರ್ಡ್ ಪ್ರತಿ. ವಿದ್ಯಾರ್ಥಿ 06 ರಿಂದ 08ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಮೂಲ ವ್ಯಾಸಂಗ ಪ್ರಮಾಣ ಪತ್ರ ಈ ಎಲ್ಲಾ ದಾಖಲೆಗಳೊಂದಿಗೆ ಫಲಾನುಭವಿಯೇ ನೇರವಾಗಿ ಎಲ್ಲಾ ತಾಲ್ಲೂಕು ಮಟ್ಟದ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಭೇಟಿ ನೀಡಿ ಈ ಮೇಲಿನ ದಾಖಲೆಗಳನ್ನು ಸಲ್ಲಿಸಿದ ನಂತರ ಕಟ್ಟಡ ಕಾರ್ಮಿಕರ ನೋಂದಣಿಯ ಕಾರ್ಡ್ ಜೇಷ್ಠತೆಯ ಆಧಾರದ ಮೇಲೆ ಪರಿಶೀಲನೆಗೊಂಡ ನಂತರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ನೀಡಲಾಗುವುದು ಎಂದು ಕೋಲಾರ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ