ಸಿನಿಮಾ, ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ರಾಧಾ ಹಾಗೂ ಪುತ್ರಿ. ಆಕೆ ಯಾರು ಗೊತ್ತಾ..?

345

ಸೌಭಾಗ್ಯಲಕ್ಷ್ಮಿ, ಉಷಾ, ಸಾವಿರ ಸುಳ್ಳು, ದಿಗ್ವಿಜಯ ಸಿನಿಮಾಗಳಲ್ಲಿ ನಟಿಸಿರುವ ಸುಂದರ ಮೊಗದ ನಟಿ ರಾಧಾ ಕನ್ನಡ ಚಿತ್ರಪ್ರೇಮಿಗಳಿಗೆ ಚೆನ್ನಾಗಿ ಪರಿಚಯ. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಸೌಭಾಗ್ಯಲಕ್ಷ್ಮಿ ಸಿನಿಮಾ.
ರಾಧಾ ಮೊದಲ ಹೆಸರು ಉದಯಚಂದ್ರಿಕ. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿದವರು ರಾಧಾ.

1991 ರಲ್ಲಿ ರಾಧಾ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ವಿವಾಹವಾದರು.
ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕಾರ್ತಿಕ ನಾಯರ್, ತುಳಸಿ ನಾಯರ್ ಹಾಗೂ ವಿಘ್ನೇಶ್ ನಾಯರ್. ಮೊದಲ ಪುತ್ರಿ ಕಾರ್ತಿಕ ನಾಯರ್ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಕರಿಯರ್ ಆರಂಭಿಸಿದ್ದಾರೆ. ರಾಧಾ ಅಕ್ಕ ಅಂಬಿಕ ಕೂಡಾ ಖ್ಯಾತ ನಟಿ. 

ತೆಲುಗಿನ ‘ಜೋಶ್’ ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ಕಾರ್ತಿಕ ನಾಯರ್, ಕನ್ನಡದಲ್ಲಿ ದರ್ಶನ್ ಜೊತೆ ‘ಬೃಂದಾವನ’ ಚಿತ್ರದಲ್ಲಿ ನಟಿಸಿದ್ದಾರೆ. ಈಕೆ ನಟಿ ರಾಧಾ ಅವರ ಪುತ್ರಿ ಎಂದು ಎಷ್ಟೋ ಜನರಿಗೆ ತಿಳಿದಿಲ್ಲ. ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿ ಸುಮಾರು 10 ಸಿನಿಮಾಗಳಲ್ಲಿ ನಟಿಸಿರುವ ಕಾರ್ತಿಕ ನಾಯರ್, ಈಗ ಸಿನಿಮಾಗಳಿಂದ ದೂರವಿದ್ದು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನು ಕಾರ್ತಿಕ ತಂಗಿ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂಬೈ ಹಾಗೂ ಕೇರಳದಲ್ಲಿ ರಾಧಾ ಅವರ ರೆಸ್ಟೋರೆಂಟ್ ಉದ್ಯಮ ಬಹಳ ಹೆಸರಾಗಿದೆ. ಕೇರಳದ ಕೋವಲಂ ಬೀಚ್ ಬಳಿಯ ಇವರ ರೆಸ್ಟೋರೆಂಟ್ಗೆ ಬೆಸ್ಟ್ ಕೋಸ್ಟಲ್ ಬೀಚ್ ರೆಸಾರ್ಟ್ ಅವಾರ್ಡ್ ಕೂಡಾ ದೊರೆತಿದೆ. ಒಟ್ಟಿನಲ್ಲಿ ಪತಿ, ಇಬ್ಬರು ಪುತ್ರಿಯರು, ಪುತ್ರನೊಂದಿಗೆ ಚೆನ್ನೈನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ ರಾಧಾ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ಹಣ

    ನಟಿ ಕಿಮ್ ಕರ್ದಾಶಿಯನ್ ಮಗಳ ಸ್ವಾಗತಕ್ಕೆ ನೀಡುತ್ತಿರುವ ಟೆಡ್ಡಿಬೇರ್ ಬೆಲೆ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಪ್ರಸಿದ್ಧ ಟಿವಿ ರಿಯಾಲಿಟಿ ಶೋ ನಟಿ ಕಿಮ್ ಕರ್ದಾಶಿಯನ್ ಮೂರನೇ ಬಾರಿ ಅಮ್ಮನಾಗಿದ್ದಾಳೆ. ಬಾಡಿಗೆ ತಾಯಿ ಮೂಲಕ ಕಿಮ್ ಮನೆಗೆ ಸೋಮವಾರ ಮಗುವೊಂದರ ಆಗಮನವಾಗಿದೆ. ಮಗಳ ಸ್ವಾಗತಕ್ಕೆ ಕಿಮ್ ಹಾಗೂ ಆಕೆ ಪತಿ ಕೆನ್ನೆ ವೆಸ್ಟ್ ವಿಶೇಷ ತಯಾರಿ ನಡೆಸಿದ್ದಾರೆ.

  • ಸುದ್ದಿ

    ರಾಮ..ರಾಮ..ಮತ್ತೆ ಭಗವಾನ್ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಕ್ತರ ಕೆಂಗಣ್ಣಿಗೆ ಗುರಿಯಾದ ಪ್ರೊಫೆಸರ್ ಭಗವಾನ್..!

    ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್‍ರವರು…

  • ಉಪಯುಕ್ತ ಮಾಹಿತಿ

    ಹಸುವಿನ ತುಪ್ಪದಲ್ಲಿ ಅಡಗಿದೆ ಪೋಷಕಾಂಶಗಳ ಆಗರ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ!

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.. ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ…