Cinema

ಇಷ್ಟೇನಾ ಕನ್ನಡ ಸೂಪರ್ ಸ್ಟಾರ್ ನಟರು ಓದಿರೋದು..!ಹಾಗಾದರೆ ಅವ್ರು ಓದು ನಿಲ್ಲಿಸಿದ್ದು ಏಕೆ?

By admin

October 17, 2019

ನಮ್ಮ  ನೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ನಟ ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದು  ನಿಲ್ಲಿಸಲು ಕಾರಣವೇನು ಅಂತ ಇಲ್ಲಿದೆ ನೋಡಿ….

ಡಾ.ರಾಜ್ ಕುಮಾರ್..                                                                                                              ರಾಜ್ ಕುಮಾರ್ ರವರು ಓದಿರುವುದು 3ನೇ ತರಗತಿ ಆದರೆ ಅವರ ಸಾಧನೆ ಅಪಾರ. ಎಂಟನೇ ವಯಸ್ಸಿಗೆ ರಾಜ್ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು.ಕೇವಲ 3ನೇ ತರಗತಿ ಓದಿ ಡಾಕ್ಟರೇಟ್ ಪಡೆದ ವಿದ್ವಾಂಸರು. ಅವರ ತಂದೆ ಮತ್ತು ತಾಯಿ ಇಬ್ಬರು ರಂಗಭೂಮಿ ಕಲಾವಿದರಾಗಿರುವ ಕಾರಣ ತಾವು ಕೂಡ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ನಾಟಕದ ನಂತರ ಸಿನಿಮಾ ಪ್ರಯಾಣ ಪ್ರಾರಂಭ ಆಯಿತು.ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದ ಅವರು ಡಾಕ್ಟರೇಟ್ ಪಡೆದರು.

ಸಾಹಸ ಸಿಂಹ ವಿಷ್ಣುವರ್ಧನ್                                                                                              ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದರು. ನಂತರ ಬೆಂಗಳೂರಿಗೆ ಬಂದ ಮೇಲೆ ಪ್ರೌಢ ಶಿಕ್ಷಣ ಮುಗಿಸಿದರು. 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದರು. ‘ವಂಶವೃಕ್ಷ’ ಅವರ ಮೊದಲ ಸಿನಿಮಾ. ಆದಾದ ನಂತರ ‘ನಾಗರಹಾವು’ ಸಿನಿಮಾ ಬಂತು. ಆ ಚಿತ್ರದಿಂದ ವಿಷ್ಣು ಪ್ರಭಾವ ಶುರುವಾಯ್ತು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್                                                                                    ಸುದೀಪ್ ರವರು  ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಿದ್ದಾರೆ. ನಟನ ತರಬೇತಿಗಾಗಿ ಮುಂಬೈಗೆ ಹೋದ ಸುದೀಪ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಚಾಲೆಂಜಿಂಗ್ ಸ್ಟಾರ್ ದರ್ಶನ್                                                                                               ಮೈಸೂರಿನಲ್ಲಿ ದರ್ಶನ್ ಪಿಯುಸಿ ವರೆಗಿನ ಶಿಕ್ಷಣವನ್ನು ಮುಗಿಸಿದರು. 1995-96 ರಲ್ಲಿ ದರ್ಶನ್ ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅಪ್ಪ ದೊಡ್ಡ ಕಲಾವಿದ ಆಗಿದ್ದ ಕಾರಣವೋ ಏನೋ, ನಟ ದರ್ಶನ್ ಗೆ ಸಿನಿಮಾ ನಟನೆಯ ಮೇಲೆ ಆಸೆ ಇತ್ತು. ದರ್ಶನ್ ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ ನಂತರ ನೀನಾಸಂ ಗೆ ಸೇರಿ ರಂಗ ಶಿಕ್ಷಣಪಡೆದರು.

ರಮೇಶ್ ಅರವಿಂದ್                                                                                                            ನಟ, ನಿರ್ದೇಶಕ ರಮೇಶ್ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ.ಬೆಂಗಳೂರಿನ UVCE ಕಾಲೇಜ್ ನಲ್ಲಿ ರಮೇಶ್ ತಮ್ಮ ವಿದ್ಯಾಬ್ಯಾಸ ಪಡೆದರು. ಕಾಲೇಜು ದಿನದಲ್ಲಿ ಸಿನಿಮಾ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದರು. ನಂತರ ಟಿವಿ ಕಾರ್ಯಕ್ರಮಗಳ ನಿರೂಪಣೆ, ಸಿನಿಮಾ ನಟನೆ ಪ್ರಾರಂಭಆಯ್ತು. ಅಲ್ಲಿಂದ ಇಂಜಿನಿಯರ್ ಆಕ್ಟರ್, ಡೈರೆಕ್ಟರ್ ಆಗಿ ಬದಲಾದರು.

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್                                                                                        ನಟ ಶಿವರಾಜ್ ಕುಮಾರ್ ಹುಟ್ಟಿದ್ದು ಮದ್ರಾಸ್ ನಲ್ಲಿ. ಹೀಗಾಗಿ ಅಲ್ಲಿಯೇ ಅವರ ಓದು ಕೂಡ ಶುರುವಾಯ್ತು. ತಮಿಳಿನಾಡಿನ ನ್ಯೂ ಕಾಲೇಜ್ ನಲ್ಲಿ ಶಿಕ್ಷಣ ಪಡೆದರು. ಬ್ಯಾಚುಲರ್ ಆಫ್ ಸೈನ್ಸ್ ಮುಗಿಸಿದರು. ಕಮಲ್ ಹಾಸನ್ ಅಭಿಮಾನಿಯಾಗಿದ್ದ ಶಿವಣ್ಣ, ಕಾಲೇಜಿನಲ್ಲಿ ಹೆಚ್ಚು ಹೆಚ್ಚು ಸಿನಿಮಾ ನೋಡುತ್ತಿದ್ದರು. ಕಾಲೇಜು ಮುಗಿಯುತ್ತಿದ್ದ ಹಾಗೆ ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಬಂದರು.

 ರಿಯಲ್ ಸ್ಟಾರ್ ಉಪೇಂದ್ರ                                                                                        ಬೆಂಗಳೂರಿನ ಎಪಿಎಸ್ ಕಾಲೇಜ್ ನಲ್ಲಿ ಉಪೇಂದ್ರ ಬಿ ಕಾಂ ಓದಿದರು. ಕಾಲೇಜಿನಲ್ಲಿ ಇದ್ದಾಗಲೇ ನಾಟಕ ಹಾಗೂ ಬರವಣಿಗೆ ಬಗ್ಗೆ ಹೆಚ್ಚು ಉಪ್ಪಿ ಆಸಕ್ತಿ ಇತ್ತು. ಕಾಲೇಜಿಗೆ ಹೊಗುವುದರ ಜೊತೆ ಜೊತೆಗೆ ಕೆಲ ಸಿನಿಮಾಗಳಿಗೆ ಸಂಭಾಷಣೆ ಬರೆದರು. ಅದೇ ವೇಳೆಗೆ ಕಾಶೀನಾಥ್ ಜೊತೆಗೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್                                                                                      ಅವರೇ ಹೇಳುವ ಹಾಗೆ ಪುನೀತ್ ರಾಜ್ ಕುಮಾರ್ ಗೆ ಓದಿನಲ್ಲಿ ಆಸಕ್ತಿ ಕಡಿಮೆ. ಪುನೀತ್ ಶಾಲೆಗೆ ಅಂತ ಹೋಗಿದ್ದು ಕೇವಲ ಒಂದೆರಡು ವರ್ಷ ಮಾತ್ರ. ಆರು ತಿಂಗಳ ಮಗು ಇದ್ದಗಲೇ ತೆರೆ ಮೇಲೆ ಕಾಣಿಸಿಕೊಂಡ ಅಪ್ಪು ಸ್ಕೂಲ್ ಗಿಂತ ಶೂಟಿಂಗ್ ಸೆಟ್ ನಲ್ಲಿಯೇ ಇರುತ್ತಿದ್ದರು. ನಂತರ ಮನೆಯಲ್ಲಿಯೇ ಟ್ಯೂಷನ್ ಮೂಲಕ ಓದಿ ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್