ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ‘ನಿಮ್ಮ ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ’ ನಿಮಗೆ ಸಿಗಲಿದೆ ಎಂಬ ಪ್ರಕಟಣೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಗಮನಿಸಿದ್ದಾನೆ. ನಂತರ ಆ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.
ಪ್ರಕಟಣೆ ಕೆಲವು ನಟಿಯರ ಪೈಕಿ ನಿಮ್ಮ ಕಾಜಲ್ ಅಗರ್ ವಾಲ್ ಅವರ ಫೋಟೋ ಕೂಡ ಹಾಕಲಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿದ ಯುವಕ ಮುಂದುವರೆಸುತ್ತಾ ಹೋಗಿದ್ದಾನೆ. ಆ ಪೇಜ್ ನಲ್ಲಿ ವ್ಯಕ್ತಿಗತವಾದ ಕೆಲವು ವಿವರಗಳನ್ನ ಕೇಳಲಾಗಿತ್ತು. ಕಾಜಲ್ ಭೇಟಿ ಮಾಡಬಹುದು ಎಂಬ ಆಸೆಯಿಂದ ಆ ಯುವಕ ತನಗೆ ಸಂಬಂಧಿಸಿದ ವಿವರಗಳನ್ನ ನೀಡಿದ್ದಾರೆ. ಜೊತೆಗೆ ಕೆಲವು ಫೋಟೊಗಳನ್ನು ಸಹ ಶೇರ್ ಮಾಡಿಕೊಂಡಿದ್ದಾನೆ. ಆತನ ಫೋಟೊಗಳನ್ನು ಗಮನಿಸಿದ ಸೈಬರ್ ಕಳ್ಳರು ಈತ ಶ್ರೀಮಂತ ಮನೆತನದ ಎಂಬುವುದನ್ನು ಅರಿತು ಆತನ ಫೋಟೋಗಳನ್ನು ಉಪಯೋಗಿಸಿ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾರೆ.
ವೆಬ್‍ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ವೈಯಕ್ತಿಕ ಫೋಟೋವನ್ನು ಮಾರ್ಫ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ 60 ಲಕ್ಷ ರೂ. ಕಸಿದುಕೊಂಡಿದ್ದಾರೆ. ಅಭಿಮಾನಿ 60 ಲಕ್ಷ ರೂ. ಕಳೆದುಕೊಂಡ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ.. ಬ್ಲಾಗಿಂಗ್ ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ…
ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.
ಭೂತ ಪ್ರೇತಗಳಲ್ಲಿ ನಿಮಗೆ ನಂಬಿಕೆ ಇದೆಯೇ? ಈ ಪ್ರಶ್ನೆಗೆ ಭಿನ್ನ ವ್ಯಕ್ತಿಗಳಿಂದ ಭಿನ್ನ ಉತ್ತರ ದೊರಕಬಹುದು. ಆದರೆ ವಿಜ್ಞಾನದ ಪ್ರಕಾರ ಭೂತ ಪ್ರೇತಗಳ ಇರುವಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಇವುಗಳ ಇರುವಿಕೆಯನ್ನು ಸಾಬೀತುಪಡಿಸಲು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ.
ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…
ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್…