ಆರೋಗ್ಯ

ಕಿಡ್ನಿಯಲ್ಲಿ ಕಲ್ಲಿದ್ದರೆ, ಬೊಜ್ಜು ಹೆಚ್ಚಾಗಿದ್ದರೆ, ಹೆಣ್ಣುಮಕ್ಕಳ ಅರೋಗ್ಯ ಸಮಸ್ಯೆಗಳಿಗೆ ಈ ಧಾನ್ಯ ರಾಮಬಾಣ. ಈ ಅರೋಗ್ಯ ಮಾಹಿತಿ ನೋಡಿ.

By admin

December 02, 2019

ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. 

ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ. ಇನ್ನು ಸ್ತ್ರೀ ಸಂಬಂಧಿ ಸಮಸ್ಯೆಯಾದ ತಿಂಗಳ ಋತುಸ್ರಾವ. ಇದು ಸರಿಯಾಗಿ ಆಗದಿದ್ದರೆ ಪ್ರತಿ ದಿನ ಹುರಳಿಕಾಳಿನ ಸೂಪ್ ಅಥವಾ ಸಲಾಡ್ ಸೇವಿಸಿದರೆ ಋತುಸ್ರಾವ ಸರಿಯಾಗಿ ಆಗುತ್ತದೆ. ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿಕಾಳಿನ ಆ ನೀರನ್ನು ದಿನಕ್ಕೆ 3 ಬಾರಿ ಕುಡಿದರೆ ಬಿಳಿಸ್ರಾವ ಸಮಸ್ಯೆ ನಿವಾರಣೆಯಾಗುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದರೆ ಪ್ರತಿ ನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತವೆ.

ಬಿಕ್ಕಳಿಕೆ ಹೆಚ್ಚಿದ್ದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಕೆ ಬೇಗ ನಿಲ್ಲುತ್ತದೆ ಈ ಹುರುಳಿಕಾಳನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು, ಕರಿಮೆಣಸಿನ ಪುಡಿ, ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೇಯಿಸದೆ ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇನ್ನು ಇದೇ ನೆನೆಸಿದ ಹುರುಳಿಕಾಳನ್ನು ಪೇಸ್ಟ್ ಮಾಡಿ ನೋವು ಮತ್ತು ಊತ ಇರುವ ಸಂಧಿಗಳಿಗೆ ಲೇಪ ಮಾಡಿದರೆ ನೋವು ಮತ್ತು ಊತ ಬೇಗ ಕಡಿಮೆಯಾಗುತ್ತವೆ.