ಸುದ್ದಿ

ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ಕದ್ದು ನೋಡಲು ಬಂದವ ಜೈಲು ಸೇರಿದ ಆರೋಪಿ……!

By admin

May 31, 2019

ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಧ್ಯ ರಾತ್ರಿಯೇ ಈ ಯುವಕ ಒಳ ಚರಂಡಿ ಪೈಪ್ ಲೈನ್ ಮೂಲಕ ಹಾಸ್ಟೆಲ್ ಪ್ರವೇಶಿಸಿದ್ದಾನೆ. ಅಲ್ಲಿ ಹುಡುಗಿಯರ ಬಾತ್ ರೂಂ ಬಳಿ ಕತ್ತಲಿನಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾನೆ. ಆದರೆ ರಾತ್ರಿ ಹುಡುಗಿಯೊಬ್ಬಳು ಬಾತ್ ರೂಂಗೆ ತೆರೆಳಿದಾಗ, ಕತ್ತಲ್ಲಲ್ಲಿ ಯಾರೋ ಕೂತಿರುವುದು ಕಾಣಿಸಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ಹುಡುಗಿಯರು ಹಾಗೂ ವಾರ್ಡನ್ ಅಲ್ಲಿಗೆ ಬಂದಾಗ ಯುವಕ ಸಿಕ್ಕಿಬಿದ್ದಿದ್ದಾನೆ.

ಎಲ್ಲರೂ ಸ್ಥಳಕ್ಕೆ ಬಂದಾಗ ಭಯದಲ್ಲಿ ಯುವಕ ಪೈಪ್ ಲೈನ್ ಮೂಲಕ ಕೆಳಗಿಳಿಯುವ ಪ್ರಯತ್ನ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಹುಡುಗಿಯರು ಆತನನ್ನು ಹಿಡಿದು ಸಖತ್ ಗೂಸ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿ ಆತನನ್ನು ಜೈಲಿಗಟ್ಟಿದ್ದಾರೆ.