ಸುದ್ದಿ

11 ಕಿಮೀ‌ ಪ್ರಯಾಣ ಮಾಡಿ, ಹೆಲ್ಮೆಟ್ ತೆಗೆದು ನೋಡಿ ಶಾಕ್ ಆದ ಶಿಕ್ಷಕ. ಹೆಲ್ಮೆಟ್ ನಲ್ಲಿ ಏನಿತ್ತು.

By admin

February 14, 2020

ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ ಮಾಡಲು ಆಗಮಿಸಿದ್ದಾರೆ.

ಆದರೆ ಮತ್ತೊಂದು ಶಾಲೆಯ ಬಳಿ ಹೆಲ್ಮೆಟ್ ತೆಗೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಹೌದು ಹೆಲ್ಮೆಟ್ ತೆಗೆದು ನೋಡಿದಾಗ ವಿಷಕಾರಿ ಹಾವಿನ ಬಾಲ ಮಾತ್ರ ಸಿಕ್ಕಿದೆ.. ಹಾವಿನ ತಲೆ ರಂಜಿತ್ ಅವರ ತಲೆಯಿಂದ ಅಪ್ಪಚ್ವಿಯಾಗಿದೆ. ಹೌದು ಹೆಲ್ಮೆಟ್ ಒಳಗೆ ವಿಷಕಾರಿ ಹಾವೊಂದು ಸಿಕ್ಕಿಕೊಂಡಿತ್ತು.. ಅದನ್ನು ನೋಡದೆ ರಂಜಿತ್ ಹೆಲ್ಮೆಟ್ ಹಾಕಿಕೊಂಡಿದ್ದರು.. ಆದರೆ ಅವರ ಗಮನಕ್ಕೆ ಬಾರದೆ ಹಾವಿನ ತಲೆ ರಂಜಿತ್ ಅವರ ತಲೆಯಿಂದ ಅಪ್ಪಚ್ಚಿಯಾಗಿ ಸತ್ತಿದೆ.. ಬಾಲ ಮಾತ್ರ ಉಳಿದಿದೆ.. ಹೆಲ್ಮೆಟ್ ತೆರೆದು ನೋಡಿದಾಗ ಅದು ವಿಷಕಾರಿ ಹಾವಿನ ಬಾಲ ಎಂದು ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ..

ರಂಜಿತ್ ಅವರ ದೇಹದಲ್ಲಿ ವಿಷ ಸೇರಿರಬಹುದಾ ಎಂದು ಪರೀಕ್ಷೆ ಮಾಡಿಸಿದ್ದಾರೆ.. ಆದರೆ ಅದೃಷ್ಟವಶಾತ್ ಹಾವು ಕಚ್ಚಿರಲಿಲ್ಲ.. ಬದಲಾಗಿ ಅದೇ ಅಪ್ಪಚ್ಚಿಯಾಗಿ ಸತ್ತು ಹೋಗಿದೆ.. ಆನಂತರ ಮನೆಗೆ ಬಂದ ರಂಜಿತ್ ಹೆಲ್ಮೆಟ್ ಅನ್ನು ಸುಟ್ಟು ಹಾಕಿದ್ದಾರೆ. ಆತುರಾತುರವಾಗಿ ಶೂಗಳಾಗಲಿ‌ ಹೆಲ್ಮೆಟ್ ಗಳನ್ನಾಗಲಿ ಹಾಕಿಕೊಳ್ಳುವ ಮುನ್ನ ಒಳಗೇನಿದೆ ಎಂದು ಎರಡು ಸೆಕೆಂಡ್ ಗಮನಿಸಿ ನಂತರ ಬಳಸಿದರೆ ಇಂತಹ ಅನಾಹುತಗಳು ಆಗುವುದು ತಪ್ಪುತ್ತದೆ..