ಸುದ್ದಿ

ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​

45

ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್​ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್​ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವೇಲ್ಸ್​ನ ಬಾರ್ಗೋಡ್​ ನಿವಾಸಿಯಾಗಿರುವ​ ಲಿಂಡಾ ಮುಂಕ್ಲೆ(65) ವೇಲ್ಸ್​ ಆನ್​ಲೈನ್​ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್​ ಶೆಫರ್ಡ್​ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಕ್ಯಾನ್ಸರ್​ ಇರುವುದು ಪತ್ತೆಯಾಗಿದೆ ಎಂದು ಲಿಂಡಾ ಹೇಳಿದ್ದಾರೆ.

ಒಂದು ದಿನ ನಾನು ಸೋಫಾ ಮೇಲೆ ಸುಮ್ಮನೇ ಕುಳಿತಿದ್ದೆ. ಬಿಯಾ ನನ್ನ ಮೇಲೆ ಜಿಗಿದು ನನ್ನ ಎದೆ ಭಾಗವನ್ನು ಗುದ್ದು, ಮೂಗಿನಿಂದ ವಾಸನೆಯನ್ನು ಗ್ರಹಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದಕ್ಕೂ ಮುಂಚೆ ಒಮ್ಮೆಯೂ ಈ ರೀತಿ ಮಾಡಿರಲಿಲ್ಲ. ಇದು ಬಹಳ ವಿಚಿತ್ರ ಎನಿಸಿತು. ಆ ಸಮಯದಲ್ಲಿ ಯೋಚಿಸದೇ ನಾನು ಸುಮ್ಮನಾದೆ ಎಂದು ತಿಳಿಸಿದ್ದಾರೆ.

ಸುಮಾರು ಎರಡು ತಿಂಗಳವರೆಗೂ ಇದೇ ರೀತಿ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದರಿಂದ ಎದೆಯ ಒಂದು ಭಾಗದಲ್ಲಿ ಊತದ ಅನುಭವವಾಯಿತು. ಇದರಿಂದ ಎಚ್ಚೆತ್ತು ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿದೆ. ವೈದ್ಯರು ವಿಶ್ಲೇಷಿಸಿದ ಬಳಿಕ ಮ್ಯಾಮ್ಮೊಗ್ರಾಮ್​(ಸ್ತನ ಕ್ಯಾನ್ಸರ್​ ಆರಂಭಿಕ ಹಂತ) ಎಂದು ಖಚಿತಪಡಿಸಿದರು. ಇದು ವೇಗವಾಗಿ ಬೆಳೆದು ಸ್ತನ ಕ್ಯಾನ್ಸರ್​ಗೆ ತಿರುಗುವುದಲ್ಲದೇ, ದುಗ್ಧರಸ ಗ್ರಂಥಿಗಳಿಗೂ ಹರಡುತ್ತಿತ್ತು ಎಂದು ಲಿಂಡಾ ವಿವರಿಸಿದ್ದಾರೆ.

ಪರೀಕ್ಷೆಗೆ ಒಳಗಾದ ಬಳಿಕ ಬಿಯಾ ಶ್ವಾನದಂತೆ ಅದರ ಮರಿ ಎನ್ಯಾ ಕೂಡ ವಿಚಿತ್ರವಾಗಿ ವರ್ತಿಸಲು ಶುರು ಮಾಡಿತು ಎಂದು ಮುಂಕ್ಲೆ ಹೇಳಿದ್ದಾರೆ.

Linda Munkley of Bargoed, South Wales, whose dogs saved her life after they detected her breast cancer. Linda pictured with Bea, aged 6.

ಸದ್ಯ ಲಿಂಡಾ ಅವರು ಚಿಕಿತ್ಸೆ ಪಡೆದುಕೊಂಡಿದ್ದು, ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಮೂರನೇ ಕೆಮೊಥೆರಪಿ ಚಿಕಿತ್ಸೆ ವೇಳೆ ತಮ್ಮ ಶ್ವಾನಗಳು ವಿಚಿತ್ರವಾಗಿ ವರ್ತಿಸುವುದನ್ನು ನಿಲ್ಲಿಸಿದವು. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ಅವರು ಕೂಡ ಅಚ್ಚರಿಗೊಂಡು, ಧನ್ಯವಾದ ಹೇಳುವಂತೆ ತಿಳಿಸಿದರು. ಆದರೆ, ಶ್ವಾನಗಳಿಗೆ ಪದಗಳಲ್ಲಿ ಹೇಗೆ ಧನ್ಯವಾದ ತಿಳಿಸಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ನನ್ನ ಜೀವನವನ್ನು ಅವುಗಳಿಗಾಗಿ ಮುಡುಪಾಗಿಟ್ಟಿರುತ್ತೇನೆ ಎಂದು ಲಿಂಡಾ ಭಾವನಾತ್ಮಕವಾಗಿ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು

    ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ. ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ…

  • ಸುದ್ದಿ

    ಸದ್ಯದಲ್ಲೇ ಪೂರ್ತಿಗೊಲ್ಲಲಿದೆ ಜಗತ್ತಿನ ಅತ್ಯಂತ ಎತ್ತರದ ಶಿವನ ಪ್ರತಿಮೆ…!

    ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ…

  • ಸುದ್ದಿ

    ವಾಟ್ಸಪ್‌ನಲ್ಲಿ ‘ಪ್ರೊಫೈಲ್‌ ಫೋಟೊ ಸೇವ್’ ಆಯ್ಕೆ ಇನ್ನಿಲ್ಲ!

    ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಪ್‌ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್‌ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್‌ಡೇಟ್‌ ವರ್ಷನ್‌ಗಳಲ್ಲಿ ನೂತನ ಫೀಚರ್‌ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್‌ನ ಫೀಚರ್ ಒಂದಕ್ಕೆ ಬ್ರೇಕ್‌ ಹಾಕಿದ್ದು, ಇದು ಐಓಎಸ್‌ ಬಳಕೆದಾರರಿಗೆ ಅಚ್ಚರಿ ತಂದಿದೆ. ಹೌದು, ವಾಟ್ಸಪ್‌ ಕಂಪನಿಯು IOS ಬೆಂಬಲಿತ ಐಫೋನ್‌ಗಳಲ್ಲಿ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ…

  • ಸುದ್ದಿ

    11 ಕಿಮೀ‌ ಪ್ರಯಾಣ ಮಾಡಿ, ಹೆಲ್ಮೆಟ್ ತೆಗೆದು ನೋಡಿ ಶಾಕ್ ಆದ ಶಿಕ್ಷಕ. ಹೆಲ್ಮೆಟ್ ನಲ್ಲಿ ಏನಿತ್ತು.

    ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ…

  • ಸಿನಿಮಾ

    ಸರಿಗಮಪ ಸೀಸನ್ 13 ರ ತೀರ್ಪಿನಲ್ಲಿ ಮೋಸ ಆಗಿದೆಯಾ!ಹಾಗಾದ್ರೆ ಈ ಲೇಖನಿ ಓದಿದ್ರೆ ನಿಜವಾದ ವಿನ್ನರ್ ಯಾರೆಂದು ತಿಳಿಯುತ್ತೆ?

    ಜೀ ಕನ್ನಡ ವಾಹಿನಿ ನಡೆಸುತ್ತಿರುವ ಕನ್ನಡ ರಿಯಾಲಿಟಿ ಶೋ ಸರಿಗಮಪ ಸೀಸನ್ 13 ರ ತೀರ್ಪು ಹೊರಬಿದ್ದಿದೆ!
    ಅಪ್ಪನ ಕನಸನ್ನು ಸಾಕಾರ ಮಾಡಿದ, ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್ ಸರಿಗಮಪ ಸೀಸನ್ 13 ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ

  • ತಂತ್ರಜ್ಞಾನ

    ಹೃದಯಾಘಾತ ಆಗಲಿದೆ ಎಂದು 6 ಗಂಟೆ ಮೊದಲೇ ತಿಳಿದುಕೊಳ್ಳಬಹುದು..!ತಿಳಿಯಲು ಈ ಲೇಖನ ಓದಿ..

    ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ.