ಸುದ್ದಿ

ಇವತ್ತಿಗೆ ನನಸಾಯ್ತು ನನ್ನ 30 ವರ್ಷಗಳ ಅರಣ್ಯದ ಕನಸು – ಸದಾಶಿವ ಮರಿಕೆ,.!

26

ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ.

ಪರಿಸರದ ಬಗ್ಗೆ ಅತಿಯಾದ ಕಾಳಜಿ ಇರುವ ಸದಾಶಿವ ಮರಿಕೆ ತಮ್ಮಿಂದ ಏನಾದರೂ ಈ ಪ್ರಕೃತಿಗೆ ಅಳಿಲು ಸೇವೆ ಮಾಡಬೇಕೆಂದು ಕಳೆದ 30 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ಇದೀಗ ನನಸಾಗಿಸಿದ್ದಾರೆ. ನಾಶವಾಗುತ್ತಿರುವ ಪರಿಸರವನ್ನು ಉಳಿಸಬೇಕು, ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಅದರಿಂದ ಸಹಕಾರಿ ಆಗಬೇಕೆಂದುಕೊಂಡ ಸದಾಶಿವರವರು ಅದಕ್ಕಾಗಿ ದಟ್ಟ ಅರಣ್ಯವನ್ನು ಮಾಡಬೇಕೆಂದು ಪಣ ತೊಟ್ಟಿದ್ದರು. ಅದರಂತೆ ತಮ್ಮ ಪೂರ್ವಜರಿಂದ ಬಂದಿರುವ ಒಟ್ಟು 25 ಎಕರೆ ಜಮೀನಿನ ಪೈಕಿ ಕೃಷಿ ರಹಿತ ಹತ್ತು ಎಕರೆ ಬರಡು ಭೂಮಿಯಲ್ಲಿ ಕಾಡು ಬೆಳೆಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಾಡಿನಲ್ಲಿರುವ ವಿವಿಧ ತಳಿಯ ಮರಗಳ ಗಿಡಗಳನ್ನು ತಂದು ಗುಡ್ಡದ ಉದ್ದಕ್ಕೂ ನೆಟ್ಟಿದ್ದರು.

30 ವರ್ಷಗಳ ಸತತ ಪರಿಶ್ರಮದ ಬಳಿಕ ಗಿಡಗಳು ಮರವಾಗಿ ಬೆಳೆದಿದ್ದು ಇದೀಗ ದಟ್ಟ ಅರಣ್ಯವಾಗಿದೆ. ತಮ್ಮ ಸ್ವಂತ ಜಮೀನಿನಲ್ಲೇ ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ನಾಚಿಸುವಂತಹ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇದರಿಂದಾಗಿ ಒಂದೆಡೆ ಸಮೃದ್ಧ ಕಾಡು, ಅದರಿಂದಾಗಿ ಜಮೀನಿನಲ್ಲಿ ನೀರಿನ ಉತ್ಪತ್ತಿಯೂ ಆಗಿದೆ. ಇದೀಗ ತಾವೇ ಬೆಳೆಸಿದ ದಟ್ಟ ಅರಣ್ಯದಲ್ಲಿ ಪ್ರತಿದಿನ ಒಂದು ಸುತ್ತು ಹೊಡೆಯುವ ಸದಾಶಿವರವರು ಅರಣ್ಯದಿಂದ ತೃಪ್ತಿ ಕಂಡಿದ್ದಾರೆ. ಕಾಡಿನಲ್ಲಿ ಹಕ್ಕಿಗಳ ಇಂಚರ, ಚಿಲಿಪಿಲಿಯ ನಾದ ಕೇಳುತ್ತಾರೆ. ಭೂಮಿಯಲ್ಲಿ ಕಾಡು, ಹಸಿರು ಇಲ್ಲದೇ ಇದ್ದರೆ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ಸದಾಶಿವ ಅವರ ಮಾತು.

ಆರಂಭದಲ್ಲಿ ಜಮೀನಿನ ಮಧ್ಯೆ ಇದ್ದ ಕೆರೆಯಿಂದಲೇ ಗಿಡಗಳಿಗೆ ನೀರುಣಿಸುತ್ತಿದ್ದರು. ಬೇಸಿಗೆಯಲ್ಲಿ ನೀರು ಪೂರೈಸುವುದು ಕಷ್ಟವೂ ಆಗಿತ್ತು. ಆದರೆ ಕಾಡು ಬೆಳೆದಂತೆ ಜಮೀನಿನಲ್ಲಿ ನೀರಿನ ಸಮಸ್ಯೆಯೂ ಇಲ್ಲದಾಗಿದೆ. ಕಾಡಿನ ಮಧ್ಯೆ ಬಿದ್ದ ಮಳೆ ನೀರು ಅಲ್ಲಿಯೇ ಇಂಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಈಗ ಒಂದೆಡೆ ಸಮೃದ್ಧ ಕಾಡು, ಇನ್ನೊಂದೆಡೆ ಯಾವ ಬರಗಾಲ ಬಂದರೂ ಕಡಿಮೆಯಾಗದಷ್ಟು ಯಥೇಚ್ಛ ನೀರು ಜಮೀನಿನಲ್ಲಿ ಸೃಷ್ಟಿಯಾಗಿದ್ದು ಕೃಷಿ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದಾರೆ. ಇವರ ದಟ್ಟ ಕಾಡಿನಿಂದಾಗಿ ಅಕ್ಕಪಕ್ಕದ ಜಮೀನುಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಕಾಡು ಕಡಿದು ನಾಶ ಮಾಡುವ ಸರ್ಕಾರ, ತಮ್ಮ ಜಮೀನುಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ಮಾರಾಟ ಮಾಡೋ ಜನಸಾಮಾನ್ಯರ ಮಧ್ಯೆ ಸದಾಶಿವ ಮರಿಕೆ ತಮ್ಮದೇ ಜಾಗದಲ್ಲಿ ದಟ್ಟಾರಣ್ಯವನ್ನೇ ಬೆಳೆಸಿ ಗಮನ ಸೆಳೆದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ಈ ಲೇಖನವನ್ನು ವಿಶೇಷವಾಗಿ ಗಂಡು ಮಕ್ಕಳು ಓದಲೇಬೇಕು..!ನಿಮಗೆ ಈ ಲೇಖನ ಇಷ್ಟ ಆದ್ರೆ ಮರೆಯದೇ ಶೇರ್ ಮಾಡಿ..

    ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು. ಮೂಲ ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು. ಮೂಲ ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ…

  • ಸುದ್ದಿ, ಸ್ಪೂರ್ತಿ

    ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿದ ರೈತರು. ಈ ಸುದ್ದಿ ನೋಡಿ.!

    ಕೆಲ  ರೈತರು ಹೊಂದಲ್ಲ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಹೊಸ ಪ್ರಯೋಗಗಳನ್ನು ಮಾಡಿ ತಮ್ಮ ಕೃಷಿಯಲ್ಲಿ ಲಾಭವನ್ನು ಗಳಿಸುತ್ತಾರೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹಕ್ಕೆ ಸಿಲುಕಿ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲೂ ಕೂಡ  ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಉತ್ತಮ ಕೃಷಿ ಮಾಡಿ ರೈತರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಎಂಬುವ ಕಾಲುವೆಯ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ಅನೇಕ  ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ…

  • ನೆಲದ ಮಾತು

    ಮೋದಿಯ ತಂತ್ರಗಾರಿಕೆಯಿಂದಾಗಿ, ತಾನು ತೋಡಿದ ಹಳ್ಳದಲ್ಲಿ ತಾನೇ ಬಿದ್ದಿದೆ ಚೀನಾ!

    ಭಾರತ ಚೀನಾಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗುವಂತೆ ಕಾಣುತ್ತಿವೆ. ಆದರೆ ಜಾಗತಿಕ ಗತಿ-ವಿಧಿಗಳನ್ನು ಅರ್ಥೈಸಿಕೊಂಡ ಯಾವನಾದರೂ ಚೀನಾದ ಇಂದಿನ ಹತಾಶ ಮನಸ್ಥಿತಿಯನ್ನು ನೋಡಿದರೆ ಚೀನಾ ಯುದ್ಧಕ್ಕೆಳೆಸಲಾರದೆಂದು ತಕ್ಷಣಕ್ಕೆ ನಿಶ್ಚಯಿಸಬಲ್ಲ. ಚೀನಾ ತನ್ನ ಹಿಡಿತದಲ್ಲಿರುವ ಪತ್ರಿಕೆಗಳ ಮೂಲಕ ಕೊಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಒಂದು ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ಕೊಡುತ್ತಿತ್ತಲ್ಲ ಅದೇ ದನಿಯಿದೆ.

  • ದೇಶ-ವಿದೇಶ

    ಪೋಷಕರೇ ಹುಷಾರ್!ಈ ಗೇಮ್ ಆಡಿದ್ರೆ ನಿಮ್ಮ ಮಕ್ಕಳು ಪ್ರಾಣ ಕಳೆದುಕೊಳ್ಳಬಹುದು!ಈ ಲೇಖನಿ ಓದಿ, ಎಲ್ಲರಿಗೂ ಶೇರ್ ಮಾಡಿ…

    ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ.

  • ವಿಚಿತ್ರ ಆದರೂ ಸತ್ಯ

    ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

    ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

  • ಆರೋಗ್ಯ

    ಅವಧಿ ಮುಗಿದ ಔಷಧಿ ಬಳಸುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ,,ಜನರ ಜೀವದಜೊತೆ ಚೆಲ್ಲಾಟ..!

    ಅವಧಿ ಮುಗಿದು ತಿಂಗಳು ಕಳೆದ ಗ್ಲೂಕೋಸ್ ಬಾಟೆಲ್ ಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ರೋಗಿಗಳ ಜೀವದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಮೂಡಲಪಾಳ್ಯ ಗ್ರಾಮದ ವೆಂಕಟಮ್ಮ ಎಂಬ ವಯೋವೃದ್ದೆ, ವಿಪರೀತ ಸುಸ್ತು ಕಂಡ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆಯಲ್ಲಿಅವಧಿ ಮೀರಿದ ಗ್ಲೂಕೋಸ್ ಬಾಟೆಲ್ ಗಳನ್ನು ಇಲ್ಲಿನ ನಸ್೯ಗಳು ನೀಡಿದ್ದಾರೆ. ಇನ್ನೂ ಈ ಸಮಸ್ಯೆಯನ್ನು ಪ್ರಶ್ನಿಸಿದರೇ ಅವಧಿ ಮುಗಿದು ಮೂರು ತಿಂಗಳುವರೆಗೂ…