Priti Kohal, Pilot of Jet Airways poses in cockit of their flight in Mumbai, India.

ಉಪಯುಕ್ತ ಮಾಹಿತಿ

ನಮ್ಮ ದೇಶದ ವಿಮಾನ ಚಾಲಕರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ, ನೋಡಿ.

By admin

February 13, 2020

ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ ಆದರೆ ಕೆಲವರು ಆ ಕನಸನ್ನ ನನಸು ಮಾಡಿಕೊಂಡರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಹೌದು ವಿಮಾನದಲ್ಲಿ ಪ್ರಯಾಣ ಮಾಡಲು ನಮಗೆ ತುಂಬಾ ಹಣ ಬೇಕಾಗುತ್ತದೆ, ಶ್ರೀಮಂತರ ಬಳಿ ಹಣ ಇರುತ್ತದೆ ಆದ್ದರಿಂದ ಅವರು ವಿಮಾನದಲ್ಲಿ ಯಾವಾಗಲು ಪ್ರಯಾಣ ಮಾಡುತ್ತಾರೆ ಆದರೆ ಬಡವರ ಬಳಿ ಹಣ ಇರುವುದಿಲ್ಲ ಆದ್ದರಿಂದ ಅವರಿಗೆ ವಿಮಾನದ ಪ್ರಯಾಣದ ಕನಸನ್ನ ನನಸು ಮಾಡಿಕೊಳ್ಳಲು ಆಗುವುದಿಲ್ಲ. ಇನ್ನು ಭಾರತವನ್ನ ಹೊರತುಪಡಿಸಿ ಹೊರ ದೇಶಗಳಿಗೆ ವಿಮಾನದ ಮೂಲಕ ಹೊಗಬೇಕು ಅಂದರೆ ನಮಗೆ ಪಾಸ್ ಪೋರ್ಟ್ ಅವಶ್ಯಕವಾಗಿ ಬೇಕೇ ಬೇಕು, ಪಾಸ್ ಪೋರ್ಟ್ ಇಲ್ಲವಾದರೆ ನಾವು ಹೊರ ದೇಶಕ್ಕೆ ವಿಮಾನದ ಮೂಲಕ ಹೋಗಲು ಸಾಧ್ಯವಿಲ್ಲ.

ಇನ್ನು ನೀವು ಪೈಲೆಟ್ ಆಗಬೇಕು ಅಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿಶಾಲಿಯಾಗಿರಬೇಕು, ಇನ್ನು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇಕಡಾ 55 ಅಂಕವನ್ನ ಪಡೆದುಕೊಳ್ಳಬೇಕು ಮತ್ತು ಆತನ ವಯಸ್ಸು ಕನಿಷ್ಠವಾಗಿ 17 ವರ್ಷ ಆಗಿರಲೇಬೇಕು. ಇನ್ನು ಇವೆಲ್ಲದರ ಜೊತೆಗೆ ಪೈಲೆಟ್ ಆಗಬೇಕು ಅಂದರೆ ಆ ವ್ಯಕ್ತಿಯ ದೃಷ್ಟಿ ಶಕ್ತಿ ತುಂಬಾ ಸ್ಟ್ರಾಂಗ್ ಆಗಿ ಇರಬೇಕು. ನಿಮಗೆ ಹಲವು ಪರೀಕ್ಷೆಗಳನ್ನ ಮಾಡಬೇಕಾಗುತ್ತದೆ, ಹೌದು ನೀವು ಪೈಲೆಟ್ ಆಗಬೇಕು ಅಂದರೆ ನಿಮಗೆ ಲಿಖಿತ ಪರೀಕ್ಷೆಯನ್ನ ಪಾಸ್ ಮಾಡಲೇಬೇಕು, ಇನ್ನು ಇದರ ಜೊತೆಗೆ ಮೆಡಿಕಲ್ ಪರೀಕ್ಷೆಯನ್ನ ಕೂಡ ಮಾಡಲಾಗಿರುತ್ತದೆ. ಇನ್ನು ಸಂಬಳ ವಿಚಾರಕ್ಕೆ ಬರುವುದಾದರೆ ನಮ್ಮ ಭಾರತದಲ್ಲಿ ಒಬ್ಬ ಪೈಲೆಟ್ ನ ಸಂಬಳ ಸುಮಾರು 1.5 ಲಕ್ಷದ ತನಕ ಇರುತ್ತದೆ.

ಹೌದು ಪೈಲೆಟ್ ಕೆಲಸ ಅನ್ನುವುದು ಬಹಳ ಉನ್ನತ ಮಟ್ಟದ ಕೆಲಸ ಮತ್ತು ಒಬ್ಬ ಪೈಲೆಟ್ ಕೈಯಲ್ಲಿ ಹಲವು ಜನರ ಪ್ರಾಣ ಇರುತ್ತದೆ, ಆತ ಕೆಲವೊಮ್ಮೆ ತನ್ನ ಪ್ರಾಣವನ್ನ ಪಣಕ್ಕೆ ಇಡುವ ಸನ್ನಿವೇಶಗಳು ಕೂಡ ಬರುತ್ತದೆ, ಈ ಎಲ್ಲಾ ಕಾರಣಗಳಿಂದ ನಮ್ಮ ದೇಶದಲ್ಲಿ ಒಬ್ಬ ಪೈಲೆಟ್ ಗೆ ಇಷ್ಟು ಸಂಬಳವನ್ನ ಕೊಡಲಾಗುತ್ತದೆ. ಇನ್ನು ಒಬ್ಬ ವ್ಯಕ್ತಿ ಪೈಲೆಟ್ ತರಬೇತಿ ಕೇಂದ್ರಕ್ಕೆ ಸೇರಿಕೊಳ್ಳಬೇಕು ಅಂದರೆ ಆತ ಸುಮಾರು 30-40 ಲಕ್ಷ ಹಣವನ್ನ ತನ್ನ ಶುಲ್ಕವನ್ನ ಕಟ್ಟಬೇಕಾಗುತ್ತದೆ ಮತ್ತು ಇದಕ್ಕೆ ಸೇರಲು ಅಪ್ಲಿಕೆಶನ್ ಫಾರಂ ಮೊತ್ತವೇ 6 ಸಾವಿರ ರೂಪಾಯಿ ಆಗಿದೆ.

ಇನ್ನು ಇಷ್ಟು ಹಣವನ್ನ ಕೊಟ್ಟು ಮಧ್ಯಮ ವರ್ಗದ ಮತ್ತು ಕೆಳವರ್ಗದ ಜನರಿಗೆ ಪೈಲೆಟ್ ತರಬೇತಿಯನ್ನ ಪಡೆಯಲು ತುಬಾ ಕಷ್ಟ ಆಗುತ್ತದೆ, ಇನ್ನು ಒಬ್ಬ ಇಂಟೆರ್ ನ್ಯಾಷನಲ್ ಪೈಲೆಟ್ ಆದರೆ ಆ ವ್ಯಕ್ತಿ ಒಂದು ತಿಂಗಳಿಗೆ 5-6 ಲಕ್ಷ ರೂಪಾಯಿ ಸಂಬಳವನ್ನ ಪಡೆಯಬಹುದಾಗಿದೆ. ಇನ್ನು ಹಣ ಇಲ್ಲದ ಬಡವರು ಸರ್ಕಾರ ಮಾಡುವ NDA ಪರೀಕ್ಷೆಯಲ್ಲಿ ಪಾಸ್ ಆದರೆ ನಿಮ್ಮ ತರಬೇತಿಯ ಪತಿಯೊಂದು ಖರ್ಚನ್ನ ಸರ್ಕಾರವೇ ಭರಿಸುತ್ತದೆ ಮತ್ತು ಇದರ ಮೂಲಕ ನೀವು ಭಾರತೀಯ ಏರ್ ಫೋರ್ಸ್ ಗೆ ಜಾಯಿನ್ ಕೂಡ ಆಗಬಹುದಾಗಿದೆ.