ಸುದ್ದಿ

ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್‍ಗಿಂತ ದುಬಾರಿಯಾದ ಡೀಸೆಲ್.

373

ದೆಹಲಿಯಲ್ಲಿ ಸತತ 18ನೇ ದಿನವೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪರಿಣಾಮ ಪೆಟ್ರೋಲ್ ದರ ಹಾಗೆ ಉಳಿದರೆ ಡೀಸೆಲ್ ಬೆಲೆ ದಾಖಲೆಯನ್ನು ಬರೆದಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ದೇಶದ ರಾಜಧಾನಿಯಲ್ಲಿ ಡೀಸೆಲ್‍ಗೆ ಪೆಟ್ರೋಲ್‍ಗಿಂತ ಹೆಚ್ಚಿನ ಬೆಲೆ ನಿಗದಿಯಾಗಿದೆ.

ಡೀಸೆಲ್ ಬೆಲೆಯಲ್ಲಿ ಇಂದು 48 ಪೈಸೆ ಹೆಚ್ಚಿಸಲಾಗಿದೆ. ಹೀಗಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಈಗ 79.88 ರೂ. ಇದ್ದರೆ, ಪ್ರತಿ ಲೀಟರ್ ಪೆಟ್ರೋಲ್‍ಗೆ 79.76 ರೂ. ನಿಗದಿಯಾಗಿದೆ. ಈ ಮೂಲಕ ಪೆಟ್ರೋಲ್‍ಗಿಂತ ಡೀಸೆಲ್ ಬೆಲೆ 12 ಪೈಸೆ ಹೆಚ್ಚಾಗಿದೆ.

ದೆಹಲಿಯಲ್ಲಿ ಕಳೆದ 18 ದಿನಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 8.50 ರೂ. ಹಾಗೂ ಡೀಸೆಲ್ ಬೆಲೆ 10.48 ರೂ. ಹೆಚ್ಚಳವಾಗಿದೆ. ವರದಿಗಳ ಪ್ರಕಾರ, ಹೆಚ್ಚುತ್ತಿರುವ ಅಂತರರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಗುಣವಾಗಿ ದೇಶದಲ್ಲಿ ಡೀಸೆಲ್ ದರವು ಶೀಘ್ರದಲ್ಲೇ ಲೀಟರ್‍ಗೆ 80 ರೂ. ಗಡಿ ದಾಟುವ ಸಾಧ್ಯತೆಯಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ.27ರಿಂದ 30ಕ್ಕೆ ಏರಿಸಿದರೆ, ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.16.75ರಿಂದ 30ಕ್ಕೆ ಏರಿಸಿತ್ತು. ಹೀಗಾಗಿ ಡೀಸೆಲ್ ಪೆಟ್ರೋಲ್‍ಗಿಂತ ಹೆಚ್ಚಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ