Health

ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುವ ರುಚಿಕರ ಹಣ್ಣುಗಳು.

By admin

June 13, 2020

ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ ಮಾಡುವ ಕೊಬ್ಬು ಕರಗಿಸುವ ಹಣ್ಣುಗಳ ಮಾಹಿತಿಯನ್ನ ತಿಳಿಯೋಣ.

ಬಾಳೆಹಣ್ಣು : ಬಾಳೆಹಣ್ಣು ಹಸಿವನ್ನು ಕಡಿಮೆ ಮಾಡಿ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಪೊಟ್ಯಾಶಿಯಮ್ ನಂತಹ ಖನಿಜಗಳು ಸಮೃದ್ಧವಾಗಿವೆ. ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಪೇರಲೆಹಣ್ಣು : ತೂಕವನ್ನು ಕಡಿಮೆ ಮಾಡಿಕೊಳ್ಳಲು ರುಚಿಕರವಾದ ಈ ಹಣ್ಣು ಪೇರಲೆ ಕೂಡ ಸಹಾಯ ಮಾಡುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಈ ಪೇರಲೆ ಹಣ್ಣು ತೂಕವನ್ನು ನಷ್ಟ ಹಾಗೂ ಆರೋಗ್ಯಕರ ತಿಂಡಿ ಎನ್ನಲಾಗುತ್ತದೆ.

ಕಿತ್ತಳೆಹಣ್ಣು : ಆರೋಗ್ಯಕರವಾಗಿ ತೂಕವನ್ನು ನಷ್ಟಮಾಡಿಕೊಳ್ಳಲು ಬಯಸುವವರಿಗೆ ಕಿತ್ತಳೆ ಹಣ್ಣು ಸಹಾಯಕಾರಿ. ಇದರಲ್ಲಿ ಫೈಬರ್ ಸಮೃದ್ಧವಾಗಿ ಪೆಕ್ಟಿನ್, ಲಿಗ್ನಿನ್ ಮತ್ತು ಸೆಲ್ಯುಲೋಸ್ ಎಂಬ ಪದಾರ್ಥಗಳಿರುತ್ತವೆ. ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡಿ ಹೊಟ್ಟೆ ಹುಬ್ಬುವುದನ್ನು ಕಡಿಮೆಮಾಡುತ್ತದೆ.

ಸ್ಟ್ರಾಬೆರಿ : ವಿಟಮಿನ್ ಸಿ, ಫೈಬರ್ , ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಮ್ ನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಚಯಾಪಚಯ ಕ್ರಿಯೆಗೆ, ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.

ಪ್ಲಮ್ : ಸಿಹಿ ರುಚಿಗೆ ಹೆಸರುವಾಸಿಯಾದ ಪ್ಲಮ್ ಪೌಷ್ಠಿಕಾಂಶದಿಂದ ತುಂಬಿರುತ್ತದೆ. ಇದರಲ್ಲಿ ಹೆಚ್ಚಿನ ಮಟ್ಟದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ದೇಹವನ್ನು ಹೈಡ್ರೇಟ್ ಮಾಡಲು, ತೂಕ ಇಳಿಸಲು ಬಯಸುವವರು ಈ ಹಣ್ಣನ್ನು ಸೇವಿಸಬಹುದು.

ಅನಾನಸ್ : ತೂಕ ಇಳಿಸುವ ಹಣ್ಣುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಅನಾನಸ್. ಇದು ಫೈಬರ್ ನಿಂದ ಕೂಡಿದ್ದು, ಉತ್ತಮ ಜೀರ್ಣಕ್ರಿಯೆಗೆ, ಸುಲಭವಾಗಿ ವಿಷ ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಹಸಿವನ್ನೂ ನೀಗಿಸುತ್ತದೆ.

ಕಲ್ಲಂಗಡಿ : ಕಲ್ಲಂಗಡಿ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, 90% ನಷ್ಟು ನೀರಿನ ಅಂಶವನ್ನು ಹೊಂದಿರುತ್ತದೆ. ಇದರಲ್ಲಿ ಅಮೈನೊ ಆಸಿಡ್ ಅರ್ಜಿನೈನ್ ಎಂಬ ಏಜೆಂಟ್ ಇದ್ದು, ಪರಿಣಾಮಕಾರಿಯಾಗಿ ಕೊಬ್ಬು ಸುಡಲು ಸಹಾಯ ಮಾಡುತ್ತದೆ.

ಟೊಮೆಟೊ : ಕೊಬ್ಬನ್ನು ಕಡಿಮೆ ಮಾಡುವ ಹಣ್ಣುಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊದಲ್ಲಿ ಪ್ರಮುಖ ಅಮೈನೋ ಆಮ್ಲಗಳು, ಫೈಬರ್ ಮತ್ತು ಇತರ ಪೋಷಕಾಂಶಗಳಿದ್ದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಸಹ ಹೊಂದಿದ್ದು, ಪರಿಣಾಮಕಾರಿಯಾಗಿ ಕೊಬ್ಬನ್ನು ಸುಡುತ್ತದೆ.