News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ರಾಧಾ ಹಾಗೂ ಪುತ್ರಿ. ಆಕೆ ಯಾರು ಗೊತ್ತಾ..?
ವಶೀಕರಣದ ರಹಸ್ಯ ತಿಳಿಯಬೇಕಾ! ಈ ಮಾಹಿತಿ ನೋಡಿ.
ರೈಲಿನ ಪ್ರಯಾಣದ ಮಧ್ಯೆ ಹೆರಿಗೆ ಮಾಡಿಸಿದ ಧರಣಿಗೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು.!
ಕಿಚ್ಚ ಸುದೀಪ್ ಗೆ ಪತ್ನಿಯಿಂದಲೇ ಧಮ್ಕಿ, ಪತ್ನಿಗೆ ಹೆದರಿ ಹನ್ನೊಂದು ಬಾರಿ ಒಂದೇ ಸಿನಿಮಾ ನೋಡಿದ ಕಿಚ್ಚ.!
ಚಳ್ಳೆ ಹಣ್ಣನ್ನು ತಿಂದಿದೀರಾ, ಈ ಚಳ್ಳೆಹಣ್ಣಿನ ಔಷಧಿಯ ಗುಣಗಳು ಹಲವು ಜನರಿಗೆ ತಿಳಿದಿಲ್ಲ, ಈ ಮಾಹಿತಿ ನೋಡಿ.!
8 ತಿಂಗಳ ಗರ್ಭಿಣಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ರೆಕಾರ್ಡ, ಜಾಲತಾಣದಲ್ಲಿ ವೈರಲ್.!
ಕ್ಯಾರೆಟ್ ನ ಉಪಯೋಗಗಳು ಗೊತ್ತಾದ್ರೆ ಅಚ್ಚರಿ ಪಡ್ತಿರಾ.! ಈ ಮಾಹಿತಿ ನೋಡಿ.
ಬೆಂಗಳೂರು ಪೊಲೀಸರಿಂದ ಮಹಿಳೆಯರಿಗೆ ಉಚಿತ ಸವಾರಿ ಯೋಜನೆ ಜಾರಿ. ರಾತ್ರಿ ಮನೆಯವರೆಗೂ ಡ್ರಾಪ್.!
ಮಂತ್ರಾಲಯ ಪುಣ್ಯಕ್ಷೇತ್ರ. ಓಂ ಶ್ರೀ ರಾಘವೇಂದ್ರ ನಮಃ
ಈರುಳ್ಳಿ ತಿನ್ನುವ ಅಭ್ಯಾಸ ಇದ್ರೆ ಖಂಡಿತ ನೀವು ಇದನ್ನು ತಿಳಿದುಕೊಳ್ಳಲೇಬೇಕು..!
ಸುದ್ದಿ

7 ದಿನ ಈ 7 ಪಾನೀಯ ಕುಡಿದರೆ ಸಾಕು ಮೈಬೊಜ್ಜು ಕರಗುವುದು ಖಂಡಿತ,.!

430

ತೂಕ ಇಳಿಕೆಗೆ ನೀವು ಔಷದೀಗಳಮೊರೆ ಹೋಗುವ ಬದಲು ಈಆರೋಗ್ಯಕರ ಪಾನೀಯ ಮಾಡಿ ಕುಡಿಯಿರಿ.ವಾರದಲ್ಲಿ 7 ದಿನ ಈ 7 ಬಗೆಯಪಾನೀಯ ಕುಡಿಯುವುದರಿಂದ ಮೈ ತೂಕ, ಹೊಟ್ಟೆಬೊಜ್ಜು ಕಡಿಮೆಯಾಗಿ ಆಕರ್ಷಕವಾದ ಮೈಕಟ್ಟು ಪಡೆಯುವಿರಿ. ತುಂಬಾ ತೆಳ್ಳಗೆ ಇರುವವರು ದಪ್ಪಗಾಗಲು ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ, ಅದೇ ದಪ್ಪಗಾಗಬಾರದು ಎಂದು ಯಾರು ಬಯಸುತ್ತಾರೋ ಅವರು ಫಿಟ್ನೆಸ್‌ ಕಡೆ ಸ್ವಲ್ಪ ಗಮನ ಕಮ್ಮಿಯಾದರೂ ತಿಂಗಳಿನಲ್ಲಿಯೇ ಕೆಜಿಗಟ್ಟಲೆ ತೂಕ ಹೆಚ್ಚಾಗಿರುತ್ತದೆ.ಹೆಚ್ಚಾದ ಮೈ ತೂಕ ಕರಗಿಸುವುದು ಸುಲಭದ ಕೆಲಸವಲ್ಲ. ಇನ್ನು ಹಠಮಾರಿ ಹೊಟ್ಟೆ ಬೊಜ್ಜು ಅಂತೂ ಸುಲಭದಲ್ಲಿ ಕರಗುವುದಿಲ್ಲ. ಕೆಲವರು ತಿಂಗಳುಗಟ್ಟಲೆ ಪ್ರಯತ್ನ ಪಡುತ್ತಾರೆ, ಆದರೆ ಕೆಲವು ಒಂದು ಅಥವಾ ಎರಡು ಕೆಜಿ ತೂಕವಷ್ಟೇ ಕಳೆದುಕೊಂಡಿರುತ್ತಾರೆ, ಇದರಿಂದ ತುಂಬಾ ನಿರಾಸೆಯಾಗುತ್ತದೆ.

ಇನ್ನು ಕೆಲವರು ಬೊಜ್ಜು ಮೈ ಕರಗಿಸಿ ಆಕರ್ಷಕವಾಗಿ ಕಾಣಬೇಕೆಂದು ಜಾಹೀರಾತುಗಳಲ್ಲಿ ಹೇಳಿದಂಥ ಮಾತ್ರೆಗಳು, ಪುಡಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ತೂಕ ಕಮ್ಮಿಯಾದರೂ, ನೀವು ಆರೋಗ್ಯಕರವಾಗಿ ತೂಕ ಕಡಿಮೆಯಾಗಿರುವುದಿಲ್ಲ, ಇದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗುತ್ತದೆ. ಆದ್ದರಿಂದ ತೂಕ ಇಳಿಕೆಗೆ ಪ್ರಯತ್ನ ಮಾಡುವಾಗ ಆರೋಗ್ಯವಾದ ವಿಧಾನವನ್ನೇ ಅನುಸರಿಸಿ. ಆಹಾರಕ್ರಮ ಹಾಗೂ ವ್ಯಾಯಾಮ ಹೊರತು ಪಡಿಸಿ ಯಾವುದೇ ಶಾರ್ಟ್‌ಕಟ್‌ ಇಲ್ಲ.

ತೂಕ ಇಳಿಕೆಯಲ್ಲಿ ಕೆಲವೊಂದು ಡಿಟಾಕ್ಸ್ ಪಾನೀಯಗಳು ತುಂಬಾ ಸಹಕಾರಿ. ಈ ಪಾನೀಯಗಳನ್ನು ನೀವೇ ತಯಾರಿಸುವುದರಿಂದ ಯಾವುದೇ ರಾಸಾಯನಿಕ ವಸ್ತುಗಳನ್ನು ಬೆರೆಸಿ ಇರುವುದಿಲ್ಲ ಹಾಗೂ ಈ ಪಾನೀಯಗಳು ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದರ ಜತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ. ಡಿಟಾಕ್ಸ್ ಪಾನೀಯಗಳು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ನಡೆಯುವುದು ಹಾಗೂ ತ್ವಚೆ ಕಾಂತಿ ಕೂಡ ಹೆಚ್ಚುವುದು. ಇಲ್ಲಿ ವಾರದಲ್ಲಿ 7ದಿನಕ್ಕೆ ಕುಡಿಯಲು 7 ಬಗೆಯ ಪಾನೀಯಗಳನ್ನು ಹೇಳಲಾಗಿದೆ. ಈ ಡಿಟಾಕ್ಸ್ ಪಾನೀಯಾಗಳನ್ನು ತಯಾರಿಸಿ ಬಳಸುವುದು ಹೇಗೆ ಎಂದು ನೋಡೋಣ ಬನ್ನಿ:

1. ಸೋಮವಾರ: ಕೊತ್ತಂಬರಿ ಪಾನೀಯ
ಕೊತ್ತಂಬರಿ ತಯಾರಿಸುವ ಪಾನೀಯ ರುಚಿಕರವಾಗಿರುತ್ತದೆ ಹಾಗೂ ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೊತ್ತಂಬರಿಯಲ್ಲಿ ಒಳ್ಳೆಯ ಖನಿಜಾಂಶಗಳು, ವಿಟಮಿನ್ಸ್, ಪೊಟಾಷ್ಯಿಯಂ, ಕಬ್ಬಿಣದಂಶ, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫೋಲಿಕ್ ಆಮ್ಲ, ವಿಟಮಿನ್ ಎ ಮತ್ತು ಕೆ, ಸಿ ಇರುವುದರಿಂದ ದೇಹದ ಅನೇಕ ಸಮಸ್ಯೆಗಳಿಗೆ ಉತ್ತಮ ಮನೆಮದ್ದು ಕೂಡ ಹೌದು. ದೇಹದ ಉಷ್ಣತೆ ಹೆಚ್ಚಾದಾಗ ಈ ಪಾನೀಯ ಮಾಡಿ ಕುಡಿಯುವುದು ಒಳ್ಳೆಯದು.
ಸೋಮವಾರ ಬೆಳಗ್ಗೆ 2ಚಮಚ ಕೊತ್ತಂಬರಿ ಬೀಜವನ್ನು 3 ಲೋಟ ನೀರಿನಲ್ಲಿ ಕುದಿಸಿ, ನಂತರ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಬಿಸಿ ಬಿಸಿಯಾಗಿ ಕುಡಿಯಿರಿ.
ಈ ನೀರು ಕುಡಿಯುವುದರಿಂದ ದಿನಾಪೂರ್ತಿ ಲವಲವಿಕೆಯಿಂದ ಇರುವಿರಿ.

2. ಮಂಗಳವಾರ ಮೆಂತ್ಯೆ ನೀರು
ಮಂತ್ಯೆಯಲ್ಲಿ ಹಲವರು ಔಷಧೀಯ ಗುಣಗಳಿದ್ದು ಇದನ್ನು ಮನೆಮದ್ದಾಗಿ ಬಳಸಲಾಗುವುದು. ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಇದ್ದಾಗ ಮೆಂತ್ಯೆ ನೀರು ಒಂದು ಲೋಟ ಕುಡಿದರೆ ಸಾಕು ತಕ್ಷಣ ಕಡಿಮೆಯಾಗುವುದು. ಇನ್ನು ತೂಕ ಇಳಿಕೆಯಲ್ಲಿ ಮೆಂತ್ಯೆ ತುಂಬಾ ಸಹಕಾರಿ. ಒಂದು ಚಮಚ ಮೆಂತ್ಯೆಯನ್ನು ಒಂದು ಚಮಚ ಶುದ್ಧ ನೀರಿನಲ್ಲಿ ರಾತ್ರಿ ನೆನೆಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇನ್ನು ಮಧುಮೇಹಿಗಳು ಹೀಗೆ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.
ಮೆಂತ್ಯೆ ಪಾನೀಯ ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದು ಹಾಗೂ ದೇಹದ ಆರೋಗ್ಯ ಹೆಚ್ಚಿಸುವುದು.

3. ಬುಧವಾರ: ಚಕ್ಕೆ+ನೀರು+ಜೇನು
ಚಕ್ಕೆ ತೂಕ ಇಳಿಕೆಯಲ್ಲಿ ತುಂಬಾ ಸಹಕಾರಿ ಎಂದು ನಿಮಗೆ ಗೊತ್ತು, ಇನ್ನು ಇದರ ಪಾನೀಯ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುವುದು,ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುವುದು. ಇನ್ನು ಸಾಮಾನ್ಯ ಶೀತ, ಅಲರ್ಜಿ ಸಮಸ್ಯೆ, ಬ್ಲೇಡರ್ ಸೋಂಕು ಮುಂತಾದ ಸಮಸ್ಯೆ ಇರುವವರು ಈ ನೀರನ್ನು ಕುಡಿಯುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು.
ಚಕ್ಕೆ ಪಾನೀಯ ತಯಾರಿಸುವುದು ಹೇಗೆ?
ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಚಕ್ಕೆ ಪುಡಿ ಹಾಕಿ, ನೀರು ಸ್ವಲ್ಪ ತಣ್ಣಗಾದ ನಂತರ 1ಚಮಚ ಜೇನು ಹಾಕಿ ಮಿಶ್ರ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ದಿನಾಪೂರ್ತಿ ಚಟುವಟಿಕೆಯಿಂದ ಇರುತ್ತೀರಿ, ಸುಸ್ತು ಅನಿಸುವುದಿಲ್ಲ.

4. ಗುರುವಾರ: ಜೀರಿಗೆ ನೀರು ಹಾಗೂ ನಿಂಬೆರಸ
ಜೀರಿಗೆಯನ್ನು ರಾತ್ರಿಯಲ್ಲಿ ನೆನೆಹಾಕಿ, ನಂತರ ಬೆಳಗ್ಗೆ ಜೀರಿಗೆ ಸಮೇತ ಆ ನೀರನ್ನು ಕುದಿಸಿ. ನಂತರ ಸೋಸಿ, ನೀರು ಸ್ವಲ್ಪ ತಣ್ಣಗಾದ ಮೇಲೆ ಅರ್ಧ ಚಮಚ ನಿಂಬೆರಸ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಈ ನೀರನ್ನು ಸ್ವಲ್ಪ ಅಧಿಕ ಮಾಡಿಟ್ಟು ದಿನಪೂರ್ತಿ ಕುಡಿಯಬಹುದು. ಹೊಟ್ಟೆ ಉಬ್ಬಸ ಸಮಸ್ಯೆ ಇರುವವರಿಗೆ ಈ ಪಾನೀಯ ಅತ್ಯುತ್ತಮವಾದ ಮನೆಮದ್ದು.
ಈ ಪಾನೀಯ ಕುಡಿಯುವುದರಿಂದ ಹಠಮಾರೊ ಹೊಟ್ಟೆಬೊಜ್ಜು ಕೂಡ ಕರಗುವುದು.

5. ಶುಕ್ರವಾರ: ಅಜ್ವೈನ್ ನೀರು
ಹೊಟ್ಟೆ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಅಜ್ವೈನ್ ತುಂಬಾ ಪರಿಣಾಮಕಾರಿ, ಇದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಲ್ಲಿ ಸಹಕಾರಿ.4 ಕಪ್ ನೀರಿಗೆ 1 ಚಮಚ ಅಜ್ವೈನ್ ಹಾಕಿ ಕುದಿಸಿ, ಬಿಸಿ ಬಿಸಿ ಇರುವಾಗ ಕುಡಿಯಿರಿ. ಅಜೀರ್ಣ ಸಮಸ್ಯೆ, ಹೊಟ್ಟೆ ಉಬ್ಬಸ ಮುಂತಾದ ಸಮಸ್ಯೆಯಿದ್ದರೆ ಈ ಪಾನೀಯ ಕುಡಿಯುವುದರಿಂದ ಇಲ್ಲವಾಗುವುದು, ಇನ್ನು ಮೈ ಬೊಜ್ಜು ಕರಗಿಸುತ್ತದೆ, ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುತ್ತದೆ.

6. ಲಾವಂಚದ ನೀರು
ದೇಹವನ್ನು ತಂಪಾಗಿಸುವಲ್ಲಿ ಲಾವಂಚದ ನೀರು ತುಂಬಾ ಪರಿಣಾಮಕಾರಿ. ಈ ಪಾನೀಯವನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಕುದಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯಿರಿ. ಈ ನೀರು ನರಗಳಳು ಹಾನಿಯಾಗದಂತೆ ತಡೆಯುತ್ತದೆ. ಇನ್ನು ನಿದ್ರೆ ಹೀನತೆ ಸಮಸ್ಯೆ ಇರುವವರು ಈ ನೀರು ಕುಡಿಯುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಹತ್ತುವುದು, ಇನ್ನು ತ್ವಚೆ ಹಾಗೂ ಲಿವರ್‌ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

7. ಭಾನುವಾರ: ಬಿಸಿಯಾದ ನಿಂಬೆ ಪಾನೀಯ
ಭಾನುವಾರ ನೀವು ನಿಮ್ಮ ದಿನವನ್ನು ಬಿಸಿ ಬಿಸಿಯಾದ ನಿಂಬೆ ಪಾನೀಯಾದಿಂದ ಪ್ರಾರಂಭಿಸಿ. ಇದು ತುಂಬಾ ಸುಲಭವಾದ ಹಾಗೂ ಪರಿಣಾಮಕಾರಿಯಾದ ಡಿಟಾಕ್ಸ್ ಪಾನೀಯವಾಗಿದೆ. ಬೆಳಗ್ಗೆ ನೀರನ್ನು ಕುದಿಸಿ ಆ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ. ಬೇಕಿದ್ದರೆ ಒಂದು ಚಮಚ ಜೇನು ಕೂಡ ಸೇರಿಸಬಹುದು.
ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿದರೆ ತೂಕ ಕಡಿಮೆಯಾಗುವುದು ಮಾತ್ರವಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕ್ಯಾನ್ಸರ್‌ನಂಥ ಮಾರಕ ರೋಗ ತಡೆಗಟ್ಟುತ್ತದೆ, ಜೀರ್ಣಕ್ರಿಯೆಗೆ ಸಹಕಾರಿ. ತ್ವಚೆ ಆರೋಗ್ಯ ವೃದ್ಧಿಸುವುದು.

ತೂಕ ಇಳಿಸಲು ಇಲ್ಲಿವೆ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು : ತೂಕ ಇಳಿಕೆಗೆ ಬರೀ ಡಿಟಾಕ್ಸ್ ಪಾನೀಯ ಮಾತ್ರ ಕುಡಿದರೆ ಸಾಲದು ಇದರ ಜತೆಗೆ ಆರೋಗ್ಯಕರವಾದ ಆಹಾರಕ್ರಮ ಹಾಗೂ ವ್ಯಾಯಾಮ ಮಾಡಬೇಕು. ಇದರಿಂದ ಬೇಗನೆ ತೂಕ ಕಡಿಮೆಯಾಗುವುದು.

ಹೋಟೆಲ್‌ ಅಡುಗೆ ಬದಲಿಗೆ ಮನೆಯಲ್ಲೇ ಮಾಡಿದ ಆಹಾರ ತಿನ್ನಿ, ರೆಡಿ ಟು ಕುಕ್ ಆಹಾರಗಳನ್ನು ತಿನ್ನಬೇಡಿ, ಇನ್ನು ನಿಮ್ಮ ಆಹಾರಕ್ರಮದಲ್ಲಿ ಸೊಪ್ಪು ತರಕಾರಿ ಅಧಿಕವಾಗಿರಲಿ. ತೂಕ ಕಡಿಮೆಯಾಗಬೇಕೆಂದು ಕೆಲವರು ಕೊಬ್ಬಿನಂಶವಿರುವ ಆಹಾರವನ್ನು ಮುಟ್ಟುವುದೇ ಇಲ್ಲ, ಹಾಗೇ ಮಾಡಬೇಡಿ, ದೇಹಕ್ಕೆ ಒಮೆಗಾ 3ಮುಂತಾದ ಆರೋಗ್ಯಕರ ಕೊಬ್ಬಿನಂಶ ಅವಶ್ಯಕವಾಗಿದೆ. ಮೀನು, ಚಿಕನ್, ಮೊಟ್ಟೆ ಬಳಸಬಹುದು. ಹಣ್ಣುಗಳನ್ನು ತಿನ್ನಿ. ದಿನದಲ್ಲಿ 3 ಬಗೆಯ ಹಣ್ಣುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಸ್ನ್ಯಾಕ್ಸ್ ಆಗಿ ಕರಿದ ಪದಾರ್ಥಗಳನ್ನು ತಿನ್ನುವ ಬದಲು ನಟ್ಸ್ ಹಾಗೂ ಹಣ್ಣುಗಳನ್ನು ಬಳಸಿ. ವಾಲ್‌ನಟ್‌,ಬಾದಾಮಿ, ಪಿಸ್ತಾ, ಡಾರ್ಕ್‌ ಚಾಕಲೇಟ್ ಇವೆಲ್ಲಾ ಬಾಯಿಗೂ ರುಚಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ದಿನದಲ್ಲಿ ಅರ್ಧಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಜಿಮ್‌ಗೆ ಹೋಗಲು ಸಮಯವಿಲ್ಲ ಎನ್ನುವವರು ಮನೆಯಲ್ಲೇ ವ್ಯಾಯಾಮ ಮಾಡಿ, ದಿನಾ ಅರ್ಧ ಗಂಟೆ ನಡೆಯಿರಿ. ಲಿಫ್ಟ್‌ ಬಳಕೆ ಕಡಿಮೆ ಮಾಡಿ ಮೆಟ್ಟಿಲುಗಳನ್ನು ಬಳಸಿ, ಸದಾ ಧನಾತ್ಮಕವಾಗಿ ಚಿಂತಿಸಿ. ಈ ರೀತಿ ಮಾಡುವುದರಿಂದ ಆಕರ್ಷಕ ಮೈಕಟ್ಟು ಹಾಗೂ ಆರೋಗ್ಯ ನಿಮ್ಮದಾಗುವುದು.

About the author / 

admin

Follow Us on Facebook

Categories

ಏನ್ ಸಮಾಚಾರ

 • ಉಪಯುಕ್ತ ಮಾಹಿತಿ

  ಈ ಫೋನ್ ಖರೀದಿ ಮಾಡಿದ್ರೆ ನಿಮಗೆ ಉಚಿತವಾಗಿ ಸಿಗುತ್ತೆ 100 ಜಿಬಿ ಡೇಟಾ..!ತಿಳಿಯಲು ಈ ಲೇಖನ ಓದಿ ..

  ಚೀನಾ ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಒಪೋ ತನ್ನ ಹೊಸ ಸ್ಮಾರ್ಟ್ಫೋನ್ ಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಇದಕ್ಕಾಗಿ ತನ್ನ ಪಾಲುದಾರ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದೆ.

 • ಸುದ್ದಿ

  ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 100ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ..!

  ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು. ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ….

 • ಜ್ಯೋತಿಷ್ಯ

  ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂ7ದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ.

  ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

 • ಸುದ್ದಿ

  ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..

  ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ. ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ…

 • ಜ್ಯೋತಿಷ್ಯ

  ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದೊಂದಿಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

  ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 30 ಜನವರಿ, 2019 ನಿಮ್ಮ ಪ್ರಮುಖ ಆತಂಕ ಮತ್ತು ಒತ್ತಡದ ಒಂದು ಕಾರಣವೆಂದರೆ ಕೆಲವೊಮ್ಮೆಯಾದರೂ ನೀವು…

 • ಸುದ್ದಿ

  ನೀವು ಎಂದಾದರೂ ಗೂಗಲ್ ನೀಡಿರುವ ಚಾಲೆಂಜ್ ಆಡಿದ್ದಿರಾ;ಇಲ್ಲದಿದ್ದರೆ ಒಮ್ಮೆ ಆಡಿ ನೋಡಿ ಅದರಲ್ಲಿ ಸಿಗುತ್ತೆ ಬರೋಬ್ಬರಿ 10.76 ಕೋಟಿ,!

  ಈಗಿನ ಕಾಲದಲ್ಲಿ ಗೂಗಲ್ ಬಳಸದೆ ಇರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗದು  ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗೂಗಲ್ ಸಹಾಯ ಪಡೆಯುತ್ತಾರೆ.ಆಗೆಯೇ ಗೂಗಲ್ ನಮ್ಮ ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ ಹಣವನ್ನು ಸಂಪಾದಿಸುವ ದಾರಿಯು ತೋರಿಸುತ್ತದೆ. ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.!ಹೌದು, ತನ್ನ…