ಸುದ್ದಿ

ಬಾಲಿವುಡ್ನಮಹಾಭಾರತ ಕಥೆಯಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಲಿರುವ ಬೆಂಗಳೂರು ಮೂಲದ ಹುಡುಗಿ..!ಆ ನಟಿ ಯಾರು ಗೊತ್ತಾ?

23

ಬಾಲಿವುಡ್ನಲ್ಲಿ ಮಹಾಭಾರತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡ್ತಿದೆ. ನಟ ಅಮೀರ್ ಖಾನ್ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಬಹುದೊಡ್ಡ ಬಜೆಟ್ ನಲ್ಲಿ, ಐದು ಸರಣಿಯಾಗಿ ಸಿನಿಮಾ ಮಾಡಲು ಚಿಂತಿಸಿದ್ದರು.ಆದ್ರೀಗ, ಅಮೀರ್ ಖಾನ್ ಗೂ ಮೊದಲು ಮತ್ತೊಬ್ಬ ನಿರ್ಮಾಪಕ ಮಹಾಭಾರತ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನ ದ್ರೌಪದಿ ದೃಷ್ಟಿಕೋನದಲ್ಲಿ ತೋರಿಸಲಾಗುತ್ತಿದ್ದು, ಪಾಂಚಲಿ ಪಾತ್ರಕ್ಕಾಗಿ ಸ್ಟಾರ್ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಯಾರದು? ಮುಂದೆ ಓದಿ.

ಖ್ಯಾತ ನಿರ್ಮಾಪಕ ಮಧು ಮಂತೇನಾ ನಿರ್ಮಿಸಲಿರುವ ಮಹಾಭಾರತ ಚಿತ್ರದಲ್ಲಿ ಬೆಂಗಳೂರು ಮೂಲದ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರ ನಿರ್ವಹಿಸಲಿದ್ದಾರೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ದ್ರೌಪದಿಯನ್ನ ನಾಯಕಿಯನ್ನಾಗಿಸಿ ಚಿತ್ರಕಥೆ ಮಾಡಲಾಗುತ್ತದೆ.

ಮಧು ಮಂತೇನಾ ಅವರ ಜೊತೆ ದೀಪಿಕಾ ಪಡುಕೋಣೆ ಅವರು ಸಹ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇದಕ್ಕೂ ಮುಂಚೆ ಚಪಕ್ ಚಿತ್ರಕ್ಕೆ ದೀಪಿಕಾ ನಿರ್ಮಾಪಕಿಯಾಗಿದ್ದರು. ಈ ಸಿನಿಮಾ ಇನ್ನು ಚಿತ್ರೀಕರಣ ನಡೆಯುತ್ತಿದೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧರಿತ ಕಥೆ ಇದಾಗಿದೆ.

ಮಹಾಭಾರತ ಅಂದ್ಮೇಲೆ ಅಲ್ಲಿ ದ್ರೌಪದಿ ಮಾತ್ರ ಮುಖ್ಯವಲ್ಲ. ಧರ್ಮರಾಮ, ಭೀಮ, ಅರ್ಜುನ, ನಕುಲ, ಸಹದೇವ, ದುರ್ಯೋಧನ, ಕೃಷ್ಣ ಹೀಗೆ ಅನೇಕ ಪಾತ್ರಗಳು ಇರಲಿದೆ. ಇಂತಹ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಯಾವ ನಟರು ನಟಿಸಬಹುದು ಎಂಬ ಕುತೂಹಲ ಈಗ ಆರಂಭವಾಗಿದೆ.ಮಹಾಭಾರತ ಚಿತ್ರವನ್ನ ಎರಡು ಅಥವಾ ಮೂರಕ್ಕಿಂತ ಹೆಚ್ಚು ಸರಣಿ ಮಾಡುವ ನಿರೀಕ್ಷೆ ಇದೆ. ಮೊದಲ ಆವೃತ್ತಿ 2021ರ ದೀಪಾವಳಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಪ್ರಿ-ಪ್ರೊಡಕ್ಷನ್ ಮುಗಿದ್ಮೇಲೆ ಸಿನಿಮಾ ಶೂಟಿಂಗ್ ಆರಂಭಿಸುವ ಚಿಂತನೆ ಇದೆ

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     743,869 total views,  68 views today

ಏನ್ ಸಮಾಚಾರ