ಸುದ್ದಿ

ಬೆಳಕಿನ ಹಬ್ಬ ದೀಪಾವಳಿಯ ಸೊಬಗು ಹೆಚ್ಚಿಸುವ ದೀಪಗಳ ಇಂದಿರುವ ಮಹತ್ವಗಳೇನು ಗೊತ್ತಾ..?

71

ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ ಪುಟ್ಟ ದೀಪಗಳು. ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಸ್ತಿರೋ ಬಣ್ಣ ಬಣ್ಣದ ದೀಪಗಳು. ಅದರ ಜೊತೆಗೆ ಗ್ಲಾಸ್ ದ್ವೀಪಗಳು ಹಾಗೂ ಚಂದ ಚಂದದ ವೆರೈಟಿ ಕ್ಯಾಂಡಲ್​ಗಳು.ದೀಪಗಳ ಹಬ್ಬ ದೀಪಾವಳಿ, ಕತ್ತಲೆ ಅಂಧಕಾರವನ್ನು ಓಡಿಸುವುದರ ಸೂಚಕ. ತಮ್ಮ ಮನೆಯಲ್ಲಿ ಅಂದ ಚಂದದ ದೀಪಗಳನ್ನು ಹಚ್ಚಬೇಕು. ಹಬವನ್ನು ಗ್ರಾಂಡ್​ ಆಗಿ ಸೆಲೆಬ್ರೇಟ್ ಮಾಡಬೇಕು ಅಂದುಕೊಳ್ಳೋರೆ ಜಾಸ್ತಿ ಅಂತವರಿಗಾಗಿ  ವೆರೈಟೆ ವೆರೈಟಿ ದೀಪಗಳಿದ್ದು ಗ್ರಾಹಕರನ್ನು ಮಾರುಕಟ್ಟೆಯಲ್ಲಿ ಸೆಳಿತಿವೆ.

ಇನ್ನೂ ಮಣ್ಣಿನ ದೀಪಗಳ ಮೇಲಿನ ಚಿತ್ತಾರ ಗ್ರಾಹಕರನ್ನು ಸೇಳಿತಾ ಇದ್ದು 5 ರೂ ನಿಂದ ಹಿಡಿದು 5 ಸಾವಿರ ರೂಪಾಯಿವರೆಗಿನ ಡಿಫರೆಂಟ್​ ದೀಪಗಳನ್ನು ಕಾಣಬಹುದಾಗಿದೆ. ಅದ್ರಲ್ಲೂ ಡಿಫರೆಂಟ್​ ಡಿಫರೆಂಟ್​ ಹ್ಯಾಂಗಿಂಗ್ ಲ್ಯಾಂಪ್​ಗಳಿದ್ದು ವೆರೈಟಿ ವೆರೈಟಿ ಕಲರ್​ನಿಂದ ಅಟ್ರಾಕ್ಟ್ ಮಾಡ್ತಿವೆ.

ದೀಪಾವಳಿ ಹಬ್ಬ ಅಂದರೆ ದೀಪಗಳನ್ನು ಬೆಳಗಿಸೋದು, ಹೊಸತನವನ್ನು ಸಂಭ್ರಮದಿಂದ ಆಚರಿಸೋದು . ಇನ್ನೂ ನಿಮ್ಮ ಹಬ್ಬವನ್ನು ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಸುಂದರವಾಗಿರೋ ದಿಯಾಗಳು ಮತ್ತಷ್ಟು ಹೆಚ್ಚಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ