News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
ಸುದ್ದಿ

ಯುವತಿ ಪ್ರೀತಿಸಿದ್ದಕ್ಕೆ ಕರೆಂಟ್​ ಶಾಕ್​ ನೀಡಿ ಯುವಕನ ಮರ್ಮಾಂಗ, ಕಿಡ್ನಿಗೆ ಹಾನಿ: ಕಾಂಗ್ರೆಸ್​ ಮುಖಂಡ ಕೈವಾಡ ಆರೋಪ…!

40

ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಕರೆಂಟ್​ ಶಾಕ್​ ನೀಡಿ, ಆತನ ಮರ್ಮಾಂಗ ಹಾಗೂ ಕಿಡ್ನಿಗೆ ಹಾನಿ ಮಾಡಿ ಕಾಂಗ್ರೆಸ್​ ಮುಖಂಡ ಅಟ್ಟಹಾಸ ಮೆರೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿರುವ ಘಟನೆ ಬೆಳಗಾವಿಯಲ್ಲಿ ಸೋಮವಾರ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಮಡಿವಾಳಿ ರಾಯಭಾಗಕರ(28) ಎಂದು ಗುರುತಿಸಲಾಗಿದ್ದು, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗನಾಗಿರುವ ಉಳವಯ್ಯ ಚಿಕ್ಕೊಪ್ಪ ಹಾಗೂ ಆತನ ಬೆಂಬಲಿಗರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಯುವಕನನ್ನು ಬೆಳಗಾವಿಯಿಂದ ಅಪಹರಿಸಿ ಕಾಲಿಗೆ ಮೊಳೆ ಹೊಡೆದು ಕರೆಂಟ್‌ ಶಾಕ್ ನೀಡಿ, ಮರ್ಮಾಂಗವನ್ನು ಜಜ್ಜಿದ್ದಾರೆ. ಉಳವಯ್ಯ ಚಿಕ್ಕೊಪ್ಪ ಎಂಬಾತನ ಮಗಳನ್ನು ಪ್ರೀತಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.ಎರಡು ವರ್ಷಗಳ ಹಿಂದೆ ಯುವಕನ ಮನೆಯವರ ಮೇಲೆ ಹಲ್ಲೆ ನಡೆಸಿ, ಆಸ್ತಿ ಬರೆಸಿಕೊಂಡು‌ ಊರು ಬಿಡಿಸಿದ್ದರು ಎಂಬ ಆರೋಪವೂ ಉಳವಯ್ಯ ಚಿಕ್ಕೊಪ್ಪ ಮೇಲಿದೆ. ಯುವಕ ಮೂಲತಃ ಧಾರವಾಡ ಸಮೀಪದ ಗರಗ ಗ್ರಾಮದವನಾಗಿದ್ದು, ಗ್ರಾಮ ಬಿಟ್ಟು ಆತನ ಕುಟುಂಬ ಸದ್ಯ ಬೆಳಗಾವಿಯಲ್ಲಿ ನೆಲೆಸಿದೆ.

ಧಾರವಾಡ ಶಾಸಕ ಅಮೃತ ದೇಸಾಯಿ ಹಾಗೂ ಬೆಳಗಾವಿ ಶಾಸಕ ಅನಿಲ ಬೆನಕೆ ಅವರು ಬೆಳಗಾವಿಗೆ ಧಾವಿಸಿ ಬಂದು ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಯುವಕ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಬೆಳಗಾವಿಯ ಮಾಳಮಾರುತಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ