ಆರೋಗ್ಯ

ಅಳುವುದರಿಂದ ದೇಹಕ್ಕೆ ಆಗುವ ಲಾಭ ಕೇಳಿದರೆ ಶಾಕ್, ಎಷ್ಟೋ ಮಂದಿಗೆ ಅಳುವಿನ ರಹಸ್ಯ ತಿಳಿದಿಲ್ಲ.

159


ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು ನಡೆಸಿದ ಹಲವು ಸಂಶೋಧನೆಗಳು ಈ ಬಗ್ಗೆ ಸತ್ಯ ಹೇಳಿದೆ. ಹಾಗಾದರೆ ಅಳುವುದರಿಂದ ದೇಹದಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಅಳುವುದರಿಂದ ಈ ಐದು ಅರೋಗ್ಯ ಸಮಸ್ಯೆಯನ್ನು ದೂರಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ, ಸಮಾಜವು ಸಾಮಾನ್ಯವಾಗಿ ಅಳುವುದನ್ನು ದೌರ್ಬಲ್ಯದ ಸಂಕೇತವಾಗಿ ನೋಡುತ್ತದೆ ಆದರೆ ನೀವು ಅಳಬೇಕು ಎಂದು ನಿಮಗೆ ಅನಿಸಿದರೆ ನಿಮ್ಮ ಕಣ್ಣೀರನ್ನು ತಡೆಹಿಡಿಯಬೇಡಿ ಮತ್ತು ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಳುವಿನ ಈ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಹೆಚ್ಚು ಸ್ಟ್ರೆಸ್ ಅಥವಾ ಒತ್ತಡದ ಸಂದರ್ಭದಲ್ಲಿ ಅಳುವುದು ಬಹಳ ಒಳ್ಳೆಯು ಎನ್ನಬಹುದು, ಒತ್ತಡದ ಸಂದರ್ಭದಲ್ಲಿ ಕಣ್ಣೀರು ಸುರಿಸುವುದರಿಂದ ರಿಲ್ಯಾಕ್ಸ್ ಆಗಬಹುದು ಎಂದು ಸಂಶೋಧನೆ ತಿಳಿಸಿದೆ ಮತ್ತು ಆ ಕ್ಷಣಕ್ಕೆ ಇದರ ಪರಿಣಾಮ ತಿಳಿಯದಿದ್ದರೂ ಸ್ವಲ್ಪ ಸಮಯದ ನಂತರ ದೇಹ ವಿಶ್ರಾಂತಿ ಪಡೆಯಲು ಅಳು ಸಹಕಾರಿ.

ಸಂಶೋಧಕರ ಪ್ರಕಾರ ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು (ಪಿಎನ್‌ಎಸ್) ಸಕ್ರಿಯಗೊಳಿಸುತ್ತದೆ, ಸಕ್ರಿಯಗೊಳಿಸಿದಾಗ ಪಿಎನ್ಎಸ್ ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಎರಡನೆಯದಾಗಿ ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ, ಹೃದಯ ವೈಫಲ್ಯ, ಬುದ್ಧಿಮಾಂದ್ಯತೆ ಮತ್ತು ಮೂತ್ರಪಿಂಡದ ವೈಫಲ್ಯದಂತಹ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದರೆ ಒಳ್ಳೆಯ ಸುದ್ದಿ ಏನೆಂದರೆ ಹಲವಾರು ಅಧ್ಯಯನಗಳ ಪ್ರಕಾರ, ಅಳುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಳುವುದು ನಾಡಿಯನ್ನು ಸ್ಥಿರಗೊಳಿಸುತ್ತದೆ. ಮೂರನೆಯದಾಗಿ ಸಂಶೋಧನೆಗಳ ಪ್ರಕಾರ ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಕೆಲವೊಂದು ವಿಷಕಾರಿ ಅಂಶಗಳು ಇರುತ್ತದೆ ಇದರಿಂದ ಅಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.

ಇಷ್ಟೇ ಅಲ್ಲದೆ ಅಳುವಾಗ ನಿಮ್ಮ ಕಣ್ಣಿನಿಂದ ಹರಿಯುವ ಕಣ್ಣೀರು ಕಣ್ಣುಗಳಿಂದ ಹೊಗೆ ಮತ್ತು ಧೂಳಿನಂತಹ ಅಂಶಗಳನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಹಗುರವಾದ ಮನಸ್ಥಿತಿ ಉಂಟಾಗುತ್ತದೆ. ನಾಲ್ಕನೆಯದಾಗಿ ಅಳುವುದರಿಂದ ಸಿಗುವ ಮತ್ತೊಂದು ಉಪಯೋಗ ಎಂದರೆ ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಕಣ್ಣಿಗೆ ತೇವಾಂಶವನ್ನು ನೀಡುತ್ತದೆ, ಅಳುವುದರಿಂದ ಕಣ್ಣು ಒಣಗುವುದು, ಕೆಂಪಾಗುವುದು ಮತ್ತು ತುರಿಕೆಯನ್ನು ತಡೆಯುವಲ್ಲಿ ಸಹಕರಿಸುತ್ತದೆ. ಕೊನೆಯದಾಗಿ ನೋವನ್ನು ಕಡಿಮೆ ಮಾಡಲು ಅಳು ಸಹಕಾರಿ ಎಂದು ಸಂಶೋಧನೆ ಹೇಳುತ್ತದೆ, ನಾವು ದೈಹಿಕವಾಗಿ ನೋವಲ್ಲಿದ್ದಾಗ ಕೂಡ ಕೆಲವೊಮ್ಮೆ ಕಣ್ಣೀರು ಹೊರಬರುತ್ತದೆ ಮತ್ತು ನೋವು ಸಂವೇದನೆಯನ್ನು ಕಡಿಮೆ ಮಾಡುವ ದೇಹದ ವಿಧಾನ ಇದು. ಹೀಗೆ ಅಳುವುದಂದ ಕಣ್ಣೀರು ಸುರಿಸುವುದರಿಂದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ. ಇವುಗಳು ಮನಸ್ಸನ್ನು ಹಗುರಗೊಳಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ, ದಯವಿಟ್ಟು ಈ ಉತ್ಮ ವಿಷಯವನ್ನು ಎಲ್ಲರಿಗು ತಿಳಿಸುವ ಜವಾಬ್ದಾರಿ ನಿಮ್ಮದು

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ