ಸುದ್ದಿ

ಇಂದು ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ..ಎಲ್ಲಿ ಗೊತ್ತ ?

21

ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ.

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ

ಯುವ ದಸರಾ ವೇದಿಕೆ ಮೇಲೆ ತಮ್ಮ ಹಾಡಿನ ನಂತರ ನಿವೇದಿತಾ ಗೌಡಗೆ ಚಂದನ್ ಪ್ರಪೋಸ್ ಮಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣ ಆಗಿತ್ತು. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ವಿಷಯಕ್ಕೆ ಬಳಸಿಕೊಂಡ ಬಿಗ್ ಬಾಸ್ ಜೋಡಿ, ಮುಂದೆ ದೊಡ್ಡ ವಿರೋಧ ಎದುರಿಸಬೇಕಾಗಿ ಬಂತು. ತಿಳಿಯದೆ ಈ ರೀತಿ ಮಾಡಿದೆ ಎಂದು ಚಂದನ್ ಶೆಟ್ಟಿ ಕ್ಷಮೆ ಹೇಳಿದ್ದು, ಒಂದೆರಡು ದಿನಗಳ ನಂತರ ಆ ವಿವಾದ ತಣ್ಣಗೆ ಆಯ್ತು.

ಅಂದಹಾಗೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಆಗಿದ್ದರು. ಇಲ್ಲೇ ಮೊದಲ ಬಾರಿಗೆ ಈ ಇಬ್ಬರು ಭೇಟಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಪ್ರೇಮಿಗಳಾದರು. ಇವರ ಪ್ರೀತಿಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದ್ದು, ಇದೀಗ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಈ 5 ಕ್ರಮಗಳಿಂದ ನಿಮ್ಮ ಕೂದಲು ಉದ್ದ ಮತ್ತು ಗಟ್ಟಿಯಾಗಿ ಬೇಗ ಬೆಳೆಯುತ್ತೆ !!!

    ಬೇಗ ಕೂದಲು ಬೆಳೆದರೆ ಯಾರು ತಾನೇ ಇಷ್ಟಪಡುವುದಿಲ್ಲ? ಹೊಳೆಯುವ, ದಪ್ಪವಾದ, ಬಲವಾದ ಮತ್ತು ಉದ್ದವಾದ ಕೂದಲನ್ನು ಹೊಂದವುದು ಪ್ರತಿ ಮಹಿಳೆಯ ಕನಸಾಗಿರುತ್ತೆ.ಆದರೆ ಎಷ್ಟು ಮಂದಿ ನಿಜವಾಗಿಯೂ ಆ ಉದ್ದವಾದ ಮತ್ತು ಗಟ್ಟಿಯಾದ ಕೂದಲನ್ನು ಹೊಂದಿದ್ದಾರೆ?

  • ಸುದ್ದಿ

    ನಿಮ್ಮ ಕಿಡ್ನಿಗೆ ಅಪಾಯ ತರುವಂತಹ 10 ಸಂಗತಿಗಳು ಗಮನವಿರಲಿ…!

    ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. ಆದರೆ ನಾವು ಬೇಕಂತಲೋ ಅಥವಾ ಮರೆತೋ ಮಾಡುವ ಶೇ. 10 ಸಂಗತಿಗಳು ಕಿಡ್ನಿಗೆ ತುಂಬಾ ಅಪಾಯಕಾರಿ. ಅವು ಯಾವವು ಅನ್ನೋದನ್ನು ನೋಡೋಣ. ತುಂಬಾ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದು ಕಿಡ್ನಿಗೆ ಅಪಾಯಕಾರಿ. ಅದರಲ್ಲೂ ಮುಖ್ಯವಾಗಿ ಕೆಂಪು ಮಾಂಸ ಕಿಡ್ನಿಯನ್ನು ಡ್ಯಾಮೇಜ್ ಮಾಡುತ್ತೆ. ವಿಟಮಿನ್ ಬಿ6 ಹಾಗೂ ವಿಟಮಿನ್ ಡಿ…

  • ಉಪಯುಕ್ತ ಮಾಹಿತಿ

    ಅಟಲ್ ಪಿಂಚಣಿ ಯೋಜನೆ ಮೂಲಕ ಪ್ರತೀ ತಿಂಗಳು 5000 ಪಡೆಯಿರಿ.!ಹೆಚ್ಚಿನ ಮಾಹಿತಿಗೆ ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು  ಪ್ರೋತ್ಸಾಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ. ಏನಿದು ಅಟಲ್ ಪಿಂಚಣಿ ಯೋಜನೆ..? ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಬ್ಯಾಂಕ್ ಗೆ ಕಟ್ಟಿದರೆ.. ನಾವು ಎಷ್ಟು ಹಣ…

  • ಸಿನಿಮಾ, ಸುದ್ದಿ

    ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ, 80ರ ದಶಕದ ತಾರೆಯರ ಸಮಾಗಮ!

    ಚಿತ್ರ  ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ  ಮತ್ತು  ಚಿತ್ರರಂಗ ವಲಯದಿಂದ ಸಹ  ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ      ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ…

  • ವೀಡಿಯೊ ಗ್ಯಾಲರಿ

    ನಮ್ಮ ಮುಸಲ್ಮಾನ್ ಭಾಂದವನ ಬಾಯಲ್ಲಿ ಸುಪ್ರಭಾತದ ಅರ್ಥ ಕೇಳಿದ್ರೆ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ನೋಡಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ‘ದೇವರು ಒಂದೇ, ನಾಮ ಹಲವು’  ಅಂದರೆ ದೇವರು ಯಾವ ರೂಪದಲ್ಲಿರಲಿ, ಯಾವ ಧರ್ಮದ ದೇವರಾಗಿರಲಿ ದೇವರು ಒಂದೇ. ಇಲ್ಲಿ ನೋಡಿ ಮುಸ್ಲಿಂ ಸಹೋದರನ್ನು ಸುಪ್ರಭಾತದ ಶ್ಲೋಕವನ್ನು ಹೇಳುವುದರ ಜೊತೆಗೆ ಅದರ ಅರ್ಥವನ್ನು ಎಷ್ಟು ಚೆನ್ನಾಗಿ ತಿಳಿಸಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗ್ತೀರಾ..!

  • ಸುದ್ದಿ

    ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

    ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ…