ಸುದ್ದಿ

ಲಕ್ಷ ಲಕ್ಷ ದುಡಿಯುತ್ತಿದ್ದ ಈ ನಟ ಆ ಕೆಲಸವನ್ನು ಬಿಟ್ಟು, ಬಿಗ್ ಬಾಸ್ ಮನೆಗೆ ಹೋಗಿದ್ದು ಯಾಕೆ?

By admin

January 18, 2020

ಮಜಾ ಟಾಕೀಸ್ ಕಾಮಿಡಿ ಕಾರ್ಯಕ್ರಮದಿಂದ ಕನ್ನಡಿಗರ ಮನೆಮಾತಾದವರು ಕುರಿ ಪ್ರತಾಪ್. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೊದಲು ಕುರಿಗಳು ಸಾರ್ ಕುರಿಗಳು, ಹಾಸ್ಯಕ್ಕೊಂದು ವಿಷಯ ಹೀಗೆ ಬೇರೆ ಬೇರೆ ವಾಹಿನಿಯಲ್ಲಿ, ಹಾಸ್ಯದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ಆದರೆ ಯಾವಾಗ ಈ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡರೋ, ಅವರ ನಸೀಬೇ ಬದಲಾಯಿತು ಎನ್ನಬಹುದು. ಕಾರ್ಯಕ್ರಮದಲ್ಲಿ ಅವರ ಪಂಚಿಂಗ್ ಡೈಲಾಗ್ಸ್, ಹಾಸ್ಯ ಪ್ರಜ್ಞೆ ಮತ್ತು ಅವರ ನಟನಾ ಕೌಶಲ್ಯತೆ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬಿಟ್ಟಿತ್ತು. ಅನೇಕ ನೆಟ್ಟಿಗರು, ಕುರಿ ಇಲ್ಲವಾದರೆ ಮಜಾಟಾಕೀಸೇಯಿಲ್ಲ ಎಂದು ಮಾತನಾಡಿಕೊಳ್ಳುವಂತೆ ಮಾಡಿದರು.

ಮಜಾ ಟಾಕೀಸ್ ನಲ್ಲಿ ಸಿಕ್ಕಿದಂತಹ ಪ್ರಾಮುಖ್ಯತೆ ಅವರಿಗೆ ಸಿನಿಮಾದಲ್ಲಿ ಸಿಕ್ಕಿರಲಿಲ್ಲ, ಕನ್ನಡದಲ್ಲಿ ಸುಮಾರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು, ಪೂರ್ಣ ಪ್ರಾಮುಖ್ಯತೆ ಪಾತ್ರದಲ್ಲಿ ಕುರಿಯನ್ನು ನೋಡಬೇಕು ಎಂದು ಪ್ರೇಕ್ಷಕರು ಕಾದುಕುಳಿತ್ತದ್ದರು. ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಇಬ್ಬರೂ ಕೂಡ ಸಾಕಷ್ಟು ಬೀದಿ ನಾಟಕವನ್ನು ಒಟ್ಟಿಗೆ ಮಾಡಿದ್ದಾರೆ ಅಲ್ಲದೇ ಜೀ ವಾಹಿನಿಂಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಇವರಿಬ್ಬರು ಮಾಡುತ್ತಿದ್ದ ಕ್ವಾಟ್ಲೆಗಳನ್ನು ಜನರು ಇಂದಿಗೂ ಮರೆತಿಲ್ಲ!

ಚಿಕ್ಕಣ್ಣ ಮತ್ತು ಕುರಿ, ಜೀವನದಲ್ಲಿ ಸಾಕಷ್ಟು ಕಷ್ಟ-ನೋವುಗಳನ್ನು ದಾಟಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಅದೃಷ್ಟ ಲಕ್ಷ್ಮಿ, ಚಿಕ್ಕಣ್ಣ ಅವರಿಗೆ ಬೇಗ ಒಲಿದು ಬಂದಳು, ಕಿರಾತಕ, ರಾಜಹುಲಿ ಚಿತ್ರಗಳ ನಂತರ, ಸ್ಯಾಂಡಲ್‍ವುಡ್ ನಲ್ಲಿ ಕಾಮಿಡಿ ಕಿಂಗ್ ಆಗಿ, ಸ್ಟಾರ್ ನಟರಂತೆ ಬೆಳೆದು ವರ್ಷದಲ್ಲಿ 300 ದಿನಗಳ ಕಾಲ ಬ್ಯುಸಿಯಿರುವ ಕಾಮಿಡಿ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅದೇಕೋ ಏನೋ, ಒಳ್ಳೆಯ ಹಾಸ್ಯ ಪ್ರಜ್ಞೆ ಮತ್ತು ಹುಟ್ಟೆ ಹುಣ್ಣಾಗಿಸುವಂತೆ ನಗಿಸಿ ಅಭಿನಯಿಸಿದರು, ತೂಕದ ಪಾತ್ರ ಸಿಕ್ಕಿಲ್ಲ ಎನ್ನುವ ಕೊರಗು ಕುರಿ ಯವರಿಗೆ ಕಾಡುತ್ತಲೇ ಇದೆ.

ಇದೀಗ ಕುರಿ ಪ್ರತಾಪ್ ಅವರು ಕನ್ನಡದ ಬಿಗ್ ಬಾಸ್ ಆವೃತ್ತಿ 7 ರಲ್ಲಿ ಭಾಗಿಯಾಗಿದ್ದು, ಯಶಸ್ವಿ 90 ದಿನಗಳನ್ನು ಮುಗಿಸಿದ್ದಾರೆ.ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕುರಿ, ಎಷ್ಟು ಬಾರಿ ನಾಮಿನೇಟ್ ಆದರೂ ಸೇಫ್ ಆಗುತ್ತಲೇ ಇದ್ದಾರೆ.. ಸಾಕಷ್ಟು ಜನರ ಲೆಕ್ಕಾಚಾರದ ಪ್ರಕಾರ ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಕುರಿ ಪ್ರತಾಪ್ ಅವರೇ ಎಂದು ಹೇಳಲಾಗುತ್ತಿದೆ.. ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಅವರು ಕಿರುತೆರೆ ಕಾರ್ಯಕ್ರಮದಿಂದ ಪರಿಚಯವಾದವರು.

ಆದರೆ ವಿಜಯಲಕ್ಷ್ಮಿ ಎಂಬುದು ಚಿಕ್ಕಣ್ಣನವರಿಗೆ ಬೇಗ ಒಲೆದು ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಿದ್ದಾರೆ. ಇತ್ತ ಕುರಿ ಅವರು ತಮ್ಮ ಬಾಡಿ ಲಾಂಗ್ವೇಜ್ ಹಾಗೂ ಕಾಮಿಡಿ ಪಂಚ್ ನಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಆದರೆ ಇವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಅಷ್ಟು ಸಿಗುತ್ತಿಲ್ಲ.. ಆದುದರಿಂದ ಬಿಗ್ ಬಾಸ್ ಮನೆಗೆ ಹೋದರೆ ಸಿನಿಮಾಗಳಲ್ಲಿ ಆಫರ್ ಗಳು ಹೆಚ್ಚಾಗಿ ಸಿಗುತ್ತದೆ ಎಂದು ಅಲ್ಲಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ .. ಕುರಿ ಪ್ರತಾಪ್ ಅವರು ಈ ಬಾರಿ ಬಿಗ್ ಬಾಸ್ ಗೆಲ್ಲಬೇಕು ಎಂದುಕೊಂಡವರೆಲ್ಲ ಕಾಮೆಂಟ್ ನಲ್ಲಿ ತಿಳಿಸಿ