ಸುದ್ದಿ

ಮಣ್ಣು ಮಾಡಲು ತೆರಳುವಾಗ ಕಣ್ಣು ಬಿಟ್ಟು ಅತ್ತ ಕಂದಮ್ಮ,.ನಂತರ ಏನಾಯ್ತು..?

32

ಆಲ್ದೂರು ಸಮೀಪದ ಹಳಿಯೂರು ಕಾಲೊನಿ ವಾಸಿ ಲೋಕೇಶ್‌, ಸರಿತಾ ಅವರ 3 ತಿಂಗಳ ಮಗು ಆರವ್‌ನನ್ನು ಜಾಂಡೀಸ್‌ ಕಾಯಿಲೆ ಕಾರಣ ಹಾಸನದ ಮಣಿ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಮಣಿ ಆಸ್ಪತ್ರೆಯವರು ಮಗುವಿನ ಪೋಷಕರಿಂದ ಹಣ ಕಟ್ಟಿಸಿಕೊಂಡು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ ಹಸ್ತಾಂತರಿಸಿಬಿಟ್ಟರು.

ಮಗುವಿನ ಅಂತ್ಯಕ್ರಿಯೆ ನಡೆಸಲು ತಾಯಿ ಸರಿತಾ ಅವರ ತವರು ಮನೆ ಮೂಡಿಗೆರೆ ಸಮೀಪದ ಭಾರತಿ ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮೂಡಿಗೆರೆ ಸಮೀಪ ಮಗು ಮೂತ್ರ ವಿಸರ್ಜಿಸಿದ್ದಲ್ಲದೇ, ಏಕಾಏಕಿ ಅಳಲು ಪ್ರಾರಂಭಿಸಿತು. ಆಶ್ಚರ್ಯಚಕಿತರಾದ ಪೋಷಕರು, ತಕ್ಷಣವೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷಿಸಿ ಮಗು ಜೀವಂತವಾಗಿರುವುದನ್ನು ದೃಢಪಡಿಸಿದರು. ವೈದ್ಯರ ಸೂಚನೆ ಮೇರೆಗೆ ತಕ್ಷಣವೇ ಮಂಗಳೂರಿನ ಫಾದರ್‌ಮುಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಗು ಆರೋಗ್ಯವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ಲೋಕೇಶ್‌,ಸರಿತಾ ದಂಪತಿಗೆ ಇದು 2ನೇ ಮಗು. ಮೊದಲ ಗಂಡು ಮಗು ಕಾಯಿಲೆಯಿಂದ ಮೃತಪಟ್ಟಿತ್ತು. 3 ವರ್ಷದ ನಂತರ 2ನೇ ಮಗುವಾಗಿದ್ದು ಹುಟ್ಟಿದಾಗ ಆರೋಗ್ಯವಾಗಿಯೇ ಇತ್ತು. ಜಾಂಡೀಸ್‌ ಕಾಯಿಲೆ ಕಂಡುಬಂದ ಕಾರಣ ಚಿಕಿತ್ಸೆ ಕೊಡಿಸಲು ಹಾಸನದ ಮಣಿ ಆಸ್ಪತ್ರೆಗೆ ಸೇರಿಸಿದ್ದರು. ಹಾಸನದ ಮಣಿ ಆಸ್ಪತ್ರೆಯ ಬಗ್ಗೆ ಇಂತಹ ಅಪಸ್ವರಗಳು ಮತ್ತೆಮತ್ತೆ ಕೇಳಿಬರುತ್ತಿದ್ದು, ಇವರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಣಿ ಆಸ್ಪತ್ರೆ ವೈದ್ಯರು ಮಗುವಿನ ಚಿಕಿತ್ಸೆಗೆ ನಮ್ಮಿಂದ 50 ಸಾವಿರ ರೂ. ಕಟ್ಟಿಸಿಕೊಂಡು 4 ದಿನ ಆಸ್ಪತ್ರೆಯಲ್ಲಿಇಟ್ಟುಕೊಂಡು ಕೊನೆಗೆ ಮಗು ಸತ್ತುಹೋಗಿದೆ ಎಂದರು. ಆದರೆ ಮಗು ಜೀವಂತವಾಗಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನಾವು ಇದ್ದ ಮಗುವನ್ನು ಕಳೆದುಕೊಳ್ಳಬೇಕಿತ್ತು– ಲೋಕೇಶ್‌, ಮಗುವಿನ ತಂದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ