bank

ಎಟಿಎಂ ನಲ್ಲಿ ‘ನೋಟು’ ಬರದಿದ್ರೆ ಏನು ಮಾಡಬೇಕು…?

By admin

May 27, 2019

ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ.ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಎಟಿಎಂಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ಬೇರೆ ಎಟಿಎಂಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತ್ರ ಬರುವ ಸ್ಲಿಪ್ ನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ. ಕೆಲವೊಮ್ಮೆ ಹಣ ಡ್ರಾ ಮಾಡಿದ್ದು ಸ್ಲಿಪ್ ನಲ್ಲಿ ಬರುತ್ತದೆ. ಆದ್ರೆ ಎಟಿಎಂನಿಂದ ಹಣ ಬಂದಿರುವುದಿಲ್ಲ. ಆಗ ಬ್ಯಾಂಕ್ ಗೆ ಸಾಕ್ಷಿ ತೋರಿಸಲು ಇದು ಬೇಕಾಗುತ್ತದೆ.

ಬೇರೆ ಎಟಿಎಂನಲ್ಲಿ ವ್ಯವಹಾರ ಮಾಡುವಾಗ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಆಗ ನೀವು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ನೀವು ಯಾವ ಬ್ಯಾಂಕ್ ಎಟಿಎಂ ಬಳಸಿದ್ದೀರಿ, ನಿಮ್ಮ ಅಕೌಂಟ್ ಯಾವ ಬ್ಯಾಂಕ್ ನಲ್ಲಿದೆ, ನೀವು ಬಳಸಿದ ಎಟಿಎಂ ಶಾಖೆ ಯಾವುದು ಎಂಬುದರ ವಿವರವನ್ನು ಪೊಲೀಸರಿಗೆ ನೀಡಬೇಕಾಗುತ್ತದೆ.

ಬೇರೆ ಬ್ಯಾಂಕ್ ಎಟಿಎಂನಿಂದ ನಕಲಿ ನೋಟುಗಳು ಸಿಕ್ಕರೆ ತಕ್ಷಣ ಹತ್ತಿರವಿರುವ ಆ ಬ್ಯಾಂಕಿನ ಶಾಖೆಗೆ ಹೋಗಿ. ಅಲ್ಲಿ ಎಟಿಎಂನಲ್ಲಿ ಸಿಕ್ಕ ನಕಲಿ ನೋಟನ್ನು ಬದಲಾಯಿಸಿಕೊಳ್ಳಿ. ಪ್ರತಿಯೊಂದು ಬ್ಯಾಂಕ್ ಕೂಡ ನೋಟನ್ನು ಬದಲಾಯಿಸಿ ನೀಡುತ್ತದೆ.