ಸುದ್ದಿ

ಭಾರತೀಯ ಸೇನೆಗಾಗಿ ವಿಶೇಷವಾಗಿ ತಯಾರಾದ ಈ ಬೈಕ್ ವಿಶೇಷತೆ ಏನು ಗೊತ್ತಾ?

By admin

June 25, 2019

ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಚತ್ತೀಸ್‍ಗಢ್‍ನಲ್ಲಿನ ರಾಯ್‍ಪುರ್ ನಿವಾಸಿಯಾದ ವೈಭವ್ ಭಾಜ್‍ಪೇ ಎಂಬ ಯುವಕ ಮಾರುತಿ ಆಲ್ಟೋ ಕಾರಿನಲ್ಲಿರುವ 800ಸಿಸಿಯನ್ನು ಎಂಜಿನ್ ಬಳಸಿ ಹೊಸ ಬೈಕ್ ಒಂದನ್ನು ತಯಾರು ಮಾಡಿದ್ದಾನೆ. ಇಂದಿನ ಲೇಖನದಲ್ಲಿ ಈ ಬೈಕಿನ ಕುರಿತಾಗಾಗಿ ಹೆಚ್ಚು ಮಾಹಿತಿಯನ್ನು ತಿಳಿಯಿರಿ. ಸುಮಾರು 18 ತಿಂಗಳ ಕಾಲ ಪ್ರಯತ್ನದ ಫಲವಾಗಿ ವೈಭವ್ ಭಾಜ್‍ಪೇ ಎಂಬ ಯುವಕ ಭಾರತೀಯ ಸೇನೆಗಾಗಿ ವಿಶೇಷವಾದ ಬೈಕ್ ಒಂದನ್ನು ತಯಾರು ಮಾಡಲಾಗಿದ್ದು, ಈ ಬೈಕ್‍ಗೆ ಅಮರ್ ಜವಾನ್ ಎಂದು ಆತ ಹೆಸರಿಟ್ಟಿದ್ದಾನೆ.

ಈ ಅಮರ್ ಜವಾನ್ ಬೈಕ್ ನೋಡಲು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಬೈಕಿನ ಮುಂಭಾಗದಲ್ಲಿ ಸೈನಿಕನ ಮುಖದ ವಿನ್ಯಾಸದ ಮಾದರಿಯಲ್ಲಿ ಹೆಡ್‍ಲ್ಯಾಂಪ್‍ಗಳು ಮತ್ತು ಸಣ್ಣದಾದ ವಿಂಡ್‍ಶೀಲ್ಡ್ ನ ಮೇಲೆ ‘ಅಮರ್ ಜವಾನ್’ ಎಂಬ ಹೆಸರನ್ನು ಅಳವಡಿಸಲಾಗಿದೆ. ಸುಮಾರು 24 ರಿಂದ 27 ಲೀಟರ್ ಪೆಟ್ರೋಲ್ ಅನ್ನು ತುಂಬಲಾಗುವ ಈ ಬೈಕ್‍ನಲ್ಲಿ 800ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಪ್ರತಿ ಕಿಲೋಮೀಟರ್‍‍ಗೆ 22 ರಿಂದ 27 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಈ ಬೈಕ್ ಅನ್ನು ತಯಾರು ಮಾಡಿದ್ದಾನೆ.

ಬೈಕ್‍ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೇ, ಹಿಂಭಾಗದಲ್ಲಿ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಕೂಡಾ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಫಾರ್ವಡ್ 4 ಗೇರ್‍‍ಗಳು ಮತ್ತು 4 ರಿವರ್ಸ್‍ ಗೇರ್ ಅಂದರೆ ಒಟ್ಟಾರೆಯಾಗಿ 8 ಗೇರ್‍‍ಗಳನ್ನು ಬದಲಾಯಿಸಬಹುದಾಗಿದೆ. ಅಮರ್ ಜವಾನ್ ಬೈಕಿನಲ್ಲಿ ಬಹುತೇಕ ವಾಹನಗಳಲ್ಲಿ ಕಾಣಬಹುದಾದ ಹಳದಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಈ ಬೈಕಿಗೆ ಬಳಸಲಾಗಿದೆ. ಸುಮಾರು 450 ಕಿಲೋಗ್ರಾಂ ತೂಕವಿರುವ ಈ ಬೈಕ್ ಜಿಪಿಎಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಎಂಬ ಆಯ್ಕೆಗಳನ್ನು ಸಹ ಅಳವಡಿಸಲಾಗಿದೆ.