ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್‍ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು.ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆಗ ಅಂಬರೀಶ್ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಶ್ ವಾರ್ನ್ ಮಾಡಿದ್ದರು. ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು.

ಆದರೆ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಶ್‍ಗೆ ಬೇಜಾರಾಗಿ ಹೋದಲ್ಲಿ ಬಂದಲ್ಲಿ ಯಶ್‍ಗೆ ಗಡ್ಡ ತೆಗೆಯುವಂತೆ ವಾರ್ನ್ ಮಾಡುತ್ತಿದ್ದರು.
ಅಲ್ಲದೇ ಅಂಬರೀಶ್ ಅವರ 66ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಬೆಂಗಳೂರಿನ ಕಲಾವಿದರ ಸಂಘ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಯಶ್ ಅವರು ಹಿರಿಯ ನಟಿ ಸುಮಲತಾ ಅವರ ಅನುಮತಿ ಪಡೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಡ್ಡ ತೆಗೆಯದೇ ಅಂಬಿ ಮುಂದೆ ಹೋದರೇ ಬೈಯುತ್ತಾರೋ ಏನೋ ಎಂದು ಮೊದಲು ನಟಿ ಸುಮಲತಾಗೆ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಂಡು ಯಶ್, ಅಂಬಿ ಸನ್ಮಾನ ಕಾರ್ಯಕ್ರಮಕ್ಕೆ ಹೋಗಿದ್ದರು.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೂ ಅಂಬರೀಶ್ ಈ ಹಿಂದೆ ವಾರ್ನ್ ಮಾಡಿದ್ದರು. ಅಂಬರೀಶ್ ಅವರ 66ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಧ್ರುವ ಅವರ ಮನೆಗೆ ಹೋಗಿದ್ದರು. ಈ ವೇಳೆ ಅಂಬಿಗೆ ವಿಶ್ ಮಾಡಿ ಸ್ವಲ್ಪ ಹೊತ್ತು ಅವರ ಜೊತೆ ಸಮಯ ಕಳೆದಿದ್ದಾರೆ. ಇದೇ ವೇಳೆ ಧ್ರುವ ಸರ್ಜಾ ಒಂದು ಸಿನಿಮಾಗೆ ಕಮಿಟ್ ಆದ ಮೇಲೆ ಮತ್ತೊಂದು ಸಿನಿಮಾಗೆ ಕೈಹಾಕಲ್ಲ.

ಆದ್ದರಿಂದ ಎರಡು ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿಕೊಂಡು ಕೂರಬೇಡ, ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡೋದನ್ನು ಕಲಿ ಅಂತ ಅಂಬಿ ತಮ್ಮ ಸ್ಟೈಲ್ ನಲ್ಲೇ ಧ್ರುವಗೆ ವಾರ್ನ್ ಮಾಡಿದ್ದರು.ಅಂಬರೀಶ್ ಅವರ ಮಾತು ಕೇಳಿ ಅರೆಕ್ಷಣ ಶಾಕ್ ಆದ ಧ್ರುವ ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದರಂತೆ.