ಜ್ಯೋತಿಷ್ಯ

ನೀವು ಹುಟ್ಟಿದ ದಿನದ ಪ್ರಕಾರ ಯಾವ ತರಹದ ಉದ್ಯೋಗ ಮಾಡಿದ್ರೆ ಒಳ್ಳೆಯದು ಗೊತ್ತಾ..?ತಿಳಿಯಲು ಈ ಲೇಖನ ಓದಿ…

1440

ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇಲ್ಲಿ ತಿಳಿದು ಕೊಳ್ಳಿ..

4, 13, 22, 31 ನೇ ತಾರೀಕು:-

ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ.

1, 10, 19, 28ನೇ ತಾರೀಕು:-

ನೀವೊಂಥರ ಹುಟ್ಟುತ್ತಾನೆ ನಾಯಕರು. ಯಾವದಕ್ಕೂ ಆಗಲ್ಲ ಅಂತ ಹೇಳದೆ ಇಲ್ಲ. ನೀವು ಸುಲಭವಾಗಿ ರಿಸ್ಕ್ ತೊಗೊಳಕ್ಕೆ ರೆಡಿ ಆಗ್ತೀರಿ. ನಿಮಗೆ ಬಿಸಿನೆಸ್ ಸರಿಯಾದ ಕೆಲಸ. ಅಂಬಾನಿ, ಟಾಟಾ, ಬಿಲ್ ಗೇಟ್ಸ್ ಎಲ್ಲ ಈ ದಿನಾಂಕಕ್ಕೆ ಸೇರಿದೋರು.

2, 11, 20, 29 ನೇ ತಾರೀಕು:-

ನೀವು ಕ್ರಿಯೇಟಿವ್ ಜನ. ಕಲೆ, ನೃತ್ಯ, ಆಕ್ಟಿಂಗ್ ಇದ್ರಲ್ಲಿ ನೀವು ಹೋದ್ರೆ ನಿಮಗೆ ಒಳ್ಳೆ ಭವಿಷ್ಯ ಇರತ್ತೆ. ಗಣೇಶ್, ಎಂ.ಪಿ ಶಂಕರ್ ಇವ್ರೆಲ್ಲ ಇದೆ ದಿನಾಂಕಕ್ಕೆ ಸೇರಿದೋರು.

5, 14, 23 ನೇ ತಾರೀಕು:-

ಸಿಕ್ಕಾಪಟ್ಟೆ ಹುಮ್ಮಸ್ಸು ನಿಮಗೆ.ಒಳ್ಳೆ ಮಾತಾಡ್ತೀರಿ ನೀವು. ಪಟ-ಪಟ ಅಂತ ಮಾತಾಡ್ತೀರಿ. ಶೇರ್ ಮಾರ್ಕೆಟ್, ಮಾರ್ಕೆಟಿಂಗ್, ಸ್ಪೋರ್ಟ್ಸ್ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಇರತ್ತೆ.

3, 12, 21, 30 ನೇ ತಾರೀಕು:-

ನಿಮಗೆ ಲೆಕ್ಕ ಅಂದ್ರೆ ನೀರ್ ಕುಡಿದಷ್ಟು ಸುಲಭ. ನಿಮಗೆ ಫೈನಾನ್ಸ್, ಬ್ಯಾಂಕ್, ರಿಟೈಲ್ ಕೆಲಸ ಸಿಕ್ಕಾಪಟ್ಟೆ ಸರಿಹೊಂದತ್ತೆ.

6, 15, 24 ನೇ ತಾರೀಕು:-

ನಿಮ್ಮ ವ್ಯಕ್ತಿತ್ವ ಹೆಂಗೆ ಅಂದ್ರೆ ಯಾರಾದ್ರೂ ನಿಮ್ಮನ್ನ ನೋಡಿದರೆ “ವಾವ್” ಅಂತ ಅನ್ನದೆ ಸುಮ್ಮನೆ ಇರಲ್ಲ. ನಿಮಗೆ ದೊಡ್ಡ ಹೋಟೆಲ್, ಸಿನೆಮಾ ಕ್ಷೇತ್ರ ಸಕತ್ತಾಗಿ ಹೊಂದಿಕೊಳ್ಳತ್ತೆ.

9, 18, 27 ನೇ ತಾರೀಕು:-

ನೀವು ಸಕತ್ ಫಿಟ್. ಸ್ಪೋರ್ಟ್ಸ್ ಕ್ಷೇತ್ರಕ್ಕೆ ಹೋಗಬಹುದು. ಇಲ್ಲ ಅಂತ ಅಂದ್ರೆ ನಿಮಗೆ ಡಿಫೆನ್ಸ್, ಕೆಮಿಕಲ್, ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಸಕತ್ತಾಗಿ ಹೊಂದತ್ತೆ .

7, 16, 25 ನೇ ತಾರೀಕು:-

ನೀವ್ ಸಿಕ್ಕಾಪಟ್ಟೆ ಟಾಲೆಂಟೆಡ್. ನಿಮಗೆ ಸಿಕ್ಕಾಪಟ್ಟೆ ಬುದ್ದಿವಂತಿಕೆ ಇದೆ. ಆದಷ್ಟು ನೀವು ಜಾಸ್ತಿ ಓದಿನ ಕ್ಷೇತ್ರಕ್ಕೆ ಹೋಗ್ಬೇಕು. ರಿಸರ್ಚ್, ವಿಜ್ಞಾನ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಸಿಗತ್ತೆ .

8, 17, 26 ನೇ ತಾರೀಕು:-

ನಿಮಗೆ ಹೆಚ್ಚು ಕಮ್ಮಿ 35ನೇ ವರ್ಷ ಆಗೋತನಕ ಸ್ವಲ್ಪ ಕಷ್ಟ ಇದ್ದೆ ಇರತ್ತೆ. ನೀವು ಶ್ರಮ ಜೀವಿ ಅದಕ್ಕೆ ನಿಮಗೆ ಯಾವತ್ತೂ ಮೋಸ ಆಗಲ್ಲ, ನಿಧಾನ ಆದ್ರೂ 35ರ ನಂತರ ಗೆದ್ದೇ ಗೆಲ್ತೀರಿ. ರಾಜಕೀಯ, ಕಬ್ಬಿಣದ ಕಾಮಗಾರಿ, ರಿಯಲ್ ಎಸ್ಟೇಟ್ ನಿಮಗೆ ಕೈ ಹಿಡಿಯೋ ಕ್ಷೇತ್ರಗಳು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ