ಕಾನೂನು

10ರೂ ನಾಣ್ಯವನ್ನು, ಅಂಗಡಿಯವ ಮುಲಾಜಿಲ್ಲದೆ ತಿರಸ್ಕರಿಸಿದಕ್ಕೆ, ಅವನಿಗಾದ ಶಿಕ್ಷೆ ಏನು ಗೊತ್ತಾ..?

716

ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.

ಯಾಕೆಂದು ಕೇಳಿದ್ರೆ 10ರೂ ನಾಣ್ಯವನ್ನು ಸರ್ಕಾರ ನಿಷೇದಿಸಿದೆ ಎಂದು ಹೇಳುತ್ತಾರೆ.ಹಾಗಾದ್ರೆ ಈ 10ರೂ ನಾಣ್ಯ ನಿಜವಾಗಲು ಬ್ಯಾನ್ ಆಗಿದೆಯಾ..?

ಇಲ್ಲ, ಯಾಕೆ ಗೊತ್ತಾ?ಇದೇ ರೀತಿ ಮಧ್ಯಪ್ರದೇಶದ ಅಂಗಡಿ ಮಾಲೀಕನೊಬ್ಬ ಈ ನಾಣ್ಯವನ್ನು ಸ್ವೀಕರಿಸದೆ ಪೇಚಿಗೆ ಸಿಲುಕಿದ್ದಾನೆ.
ಹೌದು, 10 ರುಪಾಯಿ ಮೌಲ್ಯದ ನಾಣ್ಯವನ್ನು ಸ್ವೀಕರಿಸದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜುರಾ ಪಟ್ಟಣದಲ್ಲಿ ಕರವಸ್ತ್ರವನ್ನು ಪಡೆದ ಗಿರಾಕಿ ಅಂಗಡಿ ಮಾಲೀಕನಿಗೆ 10 ರುಪಾಯಿಯ ಎರಡು ನಾಣ್ಯಗಳನ್ನು ನೀಡಿದ್ದಾನೆ.

 

ಆದ್ರೆ ಅಂಗಡಿ ಮಾಲೀಕ ನಾಣ್ಯವನ್ನು ಸ್ವೀಕರಿಸದೇ ತಿರಸ್ಕರಿದ್ದಾನೆ.ಹೀಗಾಗಿ ಖರೀದಿಸಲು ಬಂದ ಗಿರಾಕಿಯು ಅಂಗಡಿಯವನ ಮೇಲೆ ಕೇಸ್ ದಾಖಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಐಸಿಪಿ ಸೆಕ್ಷನ್ 188ರ ಅಡಿಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಮಾಲೀಕನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ