ಆಧ್ಯಾತ್ಮ

ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

18

ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ.

ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ ಜೀವನವು ಒತ್ತಡದಿಂದ ಕೂಡಿದೆ. ಎಲ್ಲರೂ ಯಂತ್ರಗಳAತೆ ಕೆಲಸ ಮಾಡುತ್ತಿದ್ದಾರೆ. ಇದರ ಫಲವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಅನೇಕ ಅನಾರೋಗ್ಯಗಳನ್ನು ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವೆಂದರೆ ದಿನದಲ್ಲಿ ಸ್ವಲ್ಪ ಸಮಯವಾದರೂ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದರು.

ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ಆತ್ಮವಿಶ್ವಾಸದಿಂದ ಉತ್ತಮವಾದ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ. ಪ್ರಾಣಾಯಾಮವನ್ನು ಮಾಡುವುದರಿಂದ ಏಕಾಗ್ರತೆ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ರವರು ಮಾತನಾಡಿ ಕೈವಾರ ತಾತಯ್ಯನವರು ಯೋಗಸಾಧಕರು. ಯೋಗ ಸಾಧನೆಯ ಮಹತ್ವ ಹಾಗೂ ವಿವರಗಳನ್ನು ತಾತಯ್ಯನವರು ಕೀರ್ತನೆ, ಶತಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಉತ್ತಮ ಯೋಗ ಸಾಧಕರಾಗಲೂ ಕೈವಾರ ತಾತಯ್ಯನವರ ಯೋಗಸಾಧನ ವಿಧಾನವು ಸಹಕಾರಿಯಾಗಿದೆ. ಯೋಗಾಭ್ಯಾಸಿಗಳು ಇದರ ಅಧ್ಯಯನವನ್ನು ಮಾಡಬೇಕು ಎಂದು ಹೇಳುತ್ತಾ ಕೈವಾರ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಟ್ಟರು.

ಬೆಂಗಳೂರಿನಿಂದ ಬಂದಿದ್ದ ಯೋಗಬಂಧುಗಳು ಶ್ರೀಕ್ಷೇತ್ರ ಕೈವಾರದಲ್ಲಿರುವ ಶ್ರೀಅಮರನಾರೇಯಣಸ್ವಾಮಿ, ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯಗಳನ್ನು ದರ್ಶಿಸಿ, ಕೈವಾರ ಬೆಟ್ಟದ ಚಾರಣವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ಭಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಯೋಗಿನಾರೇಯಣ ಮಠದ ಆಡಳಿತಾಧಿಕಾರಿ ಕೆ.ಲಕ್ಷಿ÷್ಮÃನಾರಾಯಣ, ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು,ವಾಹನ ಸವಾರರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ…!

    ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ಸುದ್ದಿ

    ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ವಿಜಯವನ್ನು ಸಾಧಿಸಿದ ಎಂ,ಟೆಕ್ ಪದವೀಧರ,..ಇದನ್ನೊಮ್ಮೆ ಓದಿ..?

    ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ. ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ…

  • ಆರೋಗ್ಯ

    ಎಳನೀರಿನ ವಿಶಿಷ್ಟತೆ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ….

    ಎಳನೀರು ಹಾಲಿಗಿಂತ ಕಡಿಮೆ ಕೊಬ್ಬಿನಾಂಶ ಹೊಂದಿದೆ, ಕೊಲೆಸ್ಟ್ರಾಲ್ ಅಂಶದಿಂದ ಸಂಪೂರ್ಣ ಮುಕ್ತವಾಗಿದ್ದು, ಶರೀರಕ್ಕೆ ಅಗತ್ಯವಿರುವ HDL ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಎಳನೀರಿನಲ್ಲಿ ಯಾವುದೇ ಹೊರಗಿನ ಅಂಶಗಳು ಸೇರ್ಪಡೆಯಾಗಲು ಅವಕಾಶವಿಲ್ಲದ ಕಾರಣ ನಿಸರ್ಗದತ್ತವಾಗಿ ಶೇಖರವಾಗಿದ್ದುದರಿಂದ ಇದು ನಿಶ್ಕಲ್ಮಷ. ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್, ಇತರೆ ಖನಿಜಾಂಶಗಳನ್ನು ಹೊಂದಿರುವುದರಿಂದ ಆರೋಗ್ಯದಾಯಕ ಟಾನಿಕ್ ಇದಾಗಿದೆ.