ಸುದ್ದಿ

ತಾಜ್​ಮಹಲ್​ಗಿಂತಲೂ ಹೆಚ್ಚು ಫೇಮಸ್​ ಆಗಿದೆ ಮುಂಬೈನ ಸ್ಲಂ! ವಿಚಿತ್ರವಾದರೂ ಇದು ಸತ್ಯ…!!

61

ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂದ ಕೆಟ್ಟ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಪಬ್ಲಿಸಿಟಿ ಸಿಗುತ್ತದೆ. ಇದೀಗ ಪ್ರಪಂಚದ ಏಳನೇ ಅದ್ಭುತ ಎನ್ನಿಸಿರುವ ದೆಹಲಿಯ ತಾಜ್​ಮಹಲ್​ ವಿಚಾರದಲ್ಲೂ ಹೀಗೆ ಆಗಿದೆ. ಹೌದು ತಾಜಮಹಲ್​ಗಿಂತ ಮುಂಬೈನ ಧಾರವಿ ಸ್ಲಂಗೆ ಹೆಚ್ಚಿನ ಮಹತ್ವ ಸಿಗತೊಡಗಿದ್ದು, ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ

ಹಿಂದೆ ಮುಂಬೈನಲ್ಲಿರುವ ಧಾರವಿ ಸ್ಲಂಗೆ ಜನ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೀಗಾ ಇದೇ ಧಾರವಿ ಸ್ಲಂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು ತಾಜ್ ಮಹಲ್ ನನ್ನೇ ಸೆಡ್ಡು ಹೊಡೆದು ಕೊಳಚೇರಿ ಧಾರವಿ ಭಾರತದ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. ಎಂದು ವಿಶ್ವದ ಅತೀದೊಡ್ಡ ಟ್ರಾವೆಲ್ ಸೈಟ್ ಎಂದು ಕರೆಸಿಕೊಳ್ಳುವ ಟ್ರಿಪ್ ಅಡ್ವೈಸರ್ ಈ ವಿಚಾರವನ್ನು ಬಹಿರಂಗಪಡಿಸಿದೆ.

ಜೊತೆಗೆ ಭಾರತದ ಟ್ರಾವೆಲರ್ಸ್ ಚಾಯ್ಸ್ ಎಕ್ಸ್‌ಪೀರಿಯನ್ಸ್ 2019 ಸಾಲಿನಲ್ಲಿ ಇಂಡಿಯಾದ ಧಾರವಿ ಅಗ್ರಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ದೆಹಲಿಯ ಬೈಕ್​ ಟೂರ್​ ಆಫ್​ ಓಲ್ಡ್​​ ಡೆಲ್ಲಿ ಇದೆ. ಹಾಗೂ ಮೂರನೇ ಸ್ಥಾನವನ್ನು ತಾಜ್​ ಮಹಲ್​ ಪಡೆದುಕೊಂಡಿದೆ. ಈ ಮೂಲಕ ಧಾರವಿ ಸ್ಥಳ ಭಾರತಕ್ಕೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರ ಮೋಸ್ಟ್​ ಫೇವರೀಟ್​ ಸ್ಥಳವಾಗಿದೆ.

ಅಲ್ಲದೆ 2019ರ ಏಷ್ಯಾದ ಟಾಪ್​ ಟೆನ್​​ ಟ್ರಾವೆಲರ್​​ ಚಾಯ್ಸ್​ ಆಫ್​ ಎಕ್ಸ್‌ಪೀರಿಯನ್ಸ್​​ನಲ್ಲಿಯೂ ಧಾರವಿ 10ನೇ ಸ್ಥಾನ ಪಡೆದಿದ್ದು, ತಾಜ್ ಮಹಲ್ ಗೆ ಸ್ಥಾನವೇ ದೊರೆಯದಂತಾಗಿದೆ.ಧಾರವಿ ಕೊಳಗೇರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕಾರಣವೆನೆಂದರೆ ಅಲ್ಲಿ ವಾಸಿಸುವ ನಿವಾಸಿಗಳ ಜೀವನದ ಬಗ್ಗೆ ತಿಳಿದುಕೊಳ್ಳಲು ಹಾಗೂ ಕುಂಬಾರಿಕೆ, ಕುಶಲಕರ್ಮಿಗಳು ಪ್ರದರ್ಶಿಸುವ ವ್ಯಾಪಾರ ಕೇಂದ್ರ ಹಾಗೂ ಚರ್ಮದ ಅಂಗಡಿಗಳನ್ನು ನೋಡಲು ವಿದೇಶಿ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ