ಜೀವನಶೈಲಿ, ಸೌಂದರ್ಯ

4 ಮೊಮ್ಮಕ್ಕಳ ಈ ಅಜ್ಜಿಯ ಬ್ಯೂಟಿ ಸಿಕ್ರೆಟ್ ಬಗ್ಗೆ ನಿಮಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

1039

ಬಾಲ್ಯ, ಯೌವ್ವನ, ಮುಪ್ಪು ಇವೆಲ್ಲ ಬೇಡ ಅಂದ್ರೂ ನಮ್ಮನ್ನು ಬಿಡೋದಿಲ್ಲ. ವಯಸ್ಸಾದಂತೆ ನಮ್ಮ ದೇಹದಲ್ಲಿ ಬದಲಾವಣೆಗಳು ಸಹಜ. 50 ವರ್ಷ ಆಯ್ತು ಅಂದ್ರೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಳು ಪ್ರಕೃತಿಯ ನಿಯಮಕ್ಕೇ ಸೆಡ್ಡು ಹೊಡೆದಿದ್ದಾಳೆ.

ಕ್ಯಾರೊಲಿನ್ ಹಾರ್ಟ್ಜ್ ಎಂಬ ಮಹಿಳೆಗೆ ಈಗ 70 ವರ್ಷ. ಆದ್ರೆ ಅವಳನ್ನು ನೋಡಿದವರ್ಯಾರೂ ವಯಸ್ಸು 70 ಅಂದ್ರೆ ನಂಬೋದೇ ಇಲ್ಲ. 25ರ ಹರೆಯದ ಯುವತಿಯನ್ನೂ ನಾಚಿಸುವಂತಿದೆ ಇವಳ ಸೌಂದರ್ಯ. ಬೊಜ್ಜು ರಹಿತ ಬಿಕಿನಿ ಬಾಡಿ ನೋಡಿ ಎಲ್ಲರೂ ದಂಗಾಗಿದ್ದಾರೆ.

ಕೇವಲ ಸೌಂದರ್ಯ ಮಾತ್ರವಲ್ಲ ಕ್ಯಾರೊಲಿನ್ ಫಿಟ್ನೆಸ್ ಕೂಡ ಕಾಪಾಡಿಕೊಂಡಿದ್ದಾಳೆ. ಮೊಮ್ಮಕ್ಕಳ ಈ ಅಜ್ಜಿ ಚೆನ್ನಾಗಿ ಡಯಟ್ ಮಾಡ್ತಾಳೆ. ಸಕ್ಕರೆಯಿಂದ ದೂರವಿರ್ತಾಳೆ ಇದೇ ಇವಳ ಬ್ಯೂಟಿ ಸೀಕ್ರೆಟ್. ವರ್ಷಗಳ ಹಿಂದೆ ಕ್ಯಾರೊಲಿನ್ ಗೆ ಮಧುಮೇಹ ಶುರುವಾಗಿತ್ತು. ಆಗ ಸಕ್ಕರೆ ತಿನ್ನೋದನ್ನು ಬಿಟ್ಟಿದ್ದ ಆಕೆಇದುವರೆಗೂ ಮತ್ತೆ ಅದನ್ನು ಸೇವಿಸಿಲ್ಲ.

ಈ ಇಳಿವಯಸ್ಸಿನಲ್ಲೂ ಸಖತ್ತಾಗಿ ಟೆನಿಸ್ ಆಡ್ತಾಳೆ, ವಾಕ್ ಮಾಡ್ತಾಳೆ. ಪ್ರತಿನಿತ್ಯ ಕಡ್ಡಾಯವಾಗಿ 8 ಗಂಟೆ ನಿದ್ರೆ ಮಾಡ್ತಾಳೆ. ಧ್ಯಾನ, ಪ್ರಾಣಾಯಾಮದ ಮೂಲಕ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋ ಕ್ಯಾರೊಲಿನ್ ಸಹಜ ಸುಂದರಿ.

ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಖುಷಿಯಾಗಿದ್ರೆ ಫಿಟ್ ಆಗಿರಬಹುದು ಅನ್ನೋದು ಅವಳ ಅನುಭವದ ಮಾತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ