ರಾಜಕೀಯ

20 ವರ್ಷಗಳಿಂದ ಯಾವ ಪಕ್ಷವೂ ಸೋಲಿಸಲಾಗದ ಮುಖ್ಯಮಂತ್ರಿ..!ಇವರು ಭಾರತದ ಪರಿಶುದ್ಧ ಬಡ ಮುಖ್ಯಮಂತ್ರಿ..!

5993

ಈ ರಾಜ್ಯದ ಮುಖ್ಯಮಂತ್ರಿ ಇದುವರೆಗೂ ಅಧಿಕಾರ ಕಳೆದುಕೊಂಡಿಲ್ಲ , ತಿಂಗಳಿಗೆ 5 ಸಾವಿರ ಪಡಿಯುವ ಭಾರತದ ಅತ್ಯಂತ ಭರವಸೆ ಮೂಡಿಸಿದ ಮುಖ್ಯಮಂತ್ರಿ ಇವರೇ ಮಾಣಿಕ್ ಸರ್ಕಾರ್.

“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ ಪೂರ್ವಕ್ಕೆ ಅಸ್ಸಾಂ ಮತ್ತು ಮಿಝೊರಾಮ್‌ಗಳಿವೆ.

ಮಾಣಿಕ್ ಸರ್ಕಾರ್ ಇವರು 1998 ರಿಂದ ಇಲ್ಲಿಯ ವರೆಗೂ ಸೋತಿದ್ದೆ ಇಲ್ಲ ಮತ್ತು ಅಧಿಕಾರದಿಂದ ಕೆಳಗೆ ಇಳಿದೇಯಿಲ್ಲ ತನಗೆ ಬರುವ ಸಂಭಳವನ್ನು ಪಕ್ಷಕ್ಕೆ ನೀಡಿ ಪಕ್ಷದಿಂದ ಕೊಡುವ 5 ಸಾವಿರ ರೂಪಾಯಿಗಳಿಂದ ಜೀವನ ನಡೆಸುತ್ತಿರುವ ಇವರು ಭಾರತ ದೇಶದ 3ನೇ ಸಣ್ಣ ರಾಜ್ಯ ತ್ರಿಪುರಾದ ಮುಖ್ಯಮಂತ್ರಿ.

ಇವರು ಕಮ್ಯುನಿಸ್ಟ್ (Marxist) ಪಾರ್ಟಿಯವರು, 2013 ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು 4ನೇ ಭಾರಿಗೆ ಮುಖ್ಯಮಂತ್ರಿ ಆದರು.

ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನ:-

ಮಾಣಿಕ್ ಸರ್ಕಾರ್ 1949 ಜನವರಿ 22 ರಂದು, ರಾಧಕಿಶೋರ್ ಪುರದಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಅಮೂಲ್ಯ ಸರ್ಕಾರ್ ಒಬ್ಬ ಟೈಲರ್. ತಾಯಿ ಅಂಜಲಿ ಸರ್ಕಾರ್ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದರು. ಮಾಣಿಕ್ ಸರ್ಕಾರ್ ಎಮ್ ಬಿ ಬಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಅವರು ವಿದ್ಯಾರ್ಥಿ ಜೀವನದಲ್ಲಿ ವಿಧ್ಯಾರ್ಥಿ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಎಮ್ ಬಿ ಬಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಎಸ್ ಎಪ್ ಐ (ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಸಂಘಟನೆಯ ಅಖಿಲ ಭಾರತ ಉಪಾದ್ಯಕ್ಷರಾಗಿದ್ದರು.

ತನ್ನ 19 ನೇ ವಯಸ್ಸಿನಲ್ಲೇ ಅಂದರೆ 1968 ರಲ್ಲಿ ಸಿಪಿಐ(ಎಂ) ಪಕ್ಷದ ಸದಸ್ಯರಾದರು. 1972 ರಲ್ಲಿ ತನ್ನ 23ನೇ ವಯಸ್ಸಿನಲ್ಲಿ, ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯರಾದರು. ರಾಜ್ಯ ಸಮಿತಿ ಸದಸ್ಯರಾದ 6 ವರ್ಷಗಳ ನಂತರ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದರು. ತಮ್ಮ 31 ನೇ ವಯಸ್ಸಿನಲ್ಲಿ ಅಂದರೆ, 1980 ರಲ್ಲಿ, ಅಗರ್ತಲಾ ಕ್ಷೇತ್ರದಿಂದ ವಿದಾನ ಸಭೆಗೆ ಆಯ್ಕೆಯಾದರು. 1993 ರಲ್ಲಿ ರಾಜ್ಯದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ, ಸರ್ಕಾರ್, ಪಕ್ಷದ ರಾಜ್ಯ ಕಾರ್ಯದರ್ಶಿಯಾದರು. 1998 ರಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಮಾಣಿಕ್ ಸರ್ಕಾರ್ ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾದರು. ಆಗ ಅವರ ವಯಸ್ಸು 49 ವರ್ಷ. ಅದೇ ವರ್ಷದಲ್ಲಿ ಅವರು ಸಿಪಿಐ(ಎಂ) ಪಕ್ಷದ ಪೊಲಿಟ್ ಭ್ಯೂರೋ ಸದಸ್ಯರಾದರು.

ಸರಳ ಜೀವನ:-

ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನವನ್ನು ನೋಡಿದರೆ ಮತ್ತಷ್ಟು ಅಚ್ಚರಿಗೊಳಗಾಗುತ್ತೇವೆ! ಭಾರತದ ಪರಿಶುದ್ಧ ಮತ್ತು ಅತಿ ಬಡ ಮುಖ್ಯಮಂತ್ರಿ (ಬಹುಶಃ ಬಡ ರಾಜಕಾರಣಿ!) ಮಾಣಿಕ್ ಸರ್ಕಾರ್! ಅವರು ಘೋಷಿಸಿಕೊಂಡಿರುವ ಆಸ್ತಿಯ ಒಟ್ಟು ಮೌಲ್ಯ ಎರಡೂವರೆ ಲಕ್ಷಕ್ಕಿಂತಲೂ ಕಡಿಮೆ. ಅದರಲ್ಲಿ ಅವರ ತಾಯಿಯಿಂದ ಬಂದ ಒಂದು ಮನೆ ಕೂಡ ಸೇರಿದೆ. 2013ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಅವರ ಬಳಿಇದ್ದ ಹಣ 1080 ಮಾತ್ರ, ಬ್ಯಾಂಕಿನಲ್ಲಿದ್ದ ಠೇವಣಿ 9720/-! ದೇಶದಲ್ಲಿ ಅತಿ ಕಡಿಮೆ ಸಂಬಳ (9200/-) ಪಡೆಯುತ್ತಿರುವ ಮಾಣಿಕ್ ಸರ್ಕಾರ್ ಆ ಸಂಬಳವನ್ನೂ ಪಕ್ಷಕ್ಕೆ ನೀಡಿ ಪಕ್ಷದ ಇತರೆ ಕಾರ್ಯಕರ್ತರಂತೆ ಐದು ಸಾವಿರ ರುಪಾಯಿಗಳನ್ನು ಪಡೆಯುತ್ತಿದ್ದಾರೆ.

ಇನ್ನು ಮುಖ್ಯಮಂತ್ರಿಯ ಜೀವನ ನಿರ್ವಹಣೆ ನಡೆಯುತ್ತಿರುವುದು ಸರಕಾರಿ ಕೆಲಸದಲ್ಲಿದ್ದ ಅವರ ಮಡದಿ ನಿವೃತ್ತರಾದಾಗ ಬಂದ ಪಿಎಫ್ ಮತ್ತಿತರ ಹಣವನ್ನು (24 ಲಕ್ಷ) ಬ್ಯಾಂಕಿನಲ್ಲಿ ಠೇವಣಿರೂಪದಲ್ಲಿಟ್ಟು ಅದರಿಂದ ಬರುವ ಬಡ್ಡಿಯಿಂದ!

ಈ ರಾಜ್ಯದ ಅಧಿಕಾರ ಅವಧಿ 2018ಕ್ಕೆ ಮುಗಿಯುವುದರಿಂದ ಕರ್ನಾಟಕದ ಜೊತೆಯಲ್ಲಿಯೇ ಚುನಾವಣೆ ಬರಬಹುದು. ಮಾಣಿಕ್ ಸರ್ಕಾರ್ ಅವರ ಸರ್ಕಾರವನ್ನು ಸೋಲಿಸುವ ಪ್ರಯತ್ನ ಅಲ್ಲಿನ ಪ್ರತಿಪಕ್ಷಗಳಿಗೆ ಬಾರಿ ಕಷ್ಟದ ಕೆಲಸವಾಗಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಶೇಷ ಲೇಖನ

    ಸಣ್ಣ ಸಣ್ಣ ವಿಚಾರಕ್ಕೆ ಹೆಚ್ಚು ಕಣ್ಣೀರು ಹಾಕುವವರು ಇದನ್ನೊಮ್ಮೆ ಓದಿ…!

    ನಮ್ಮ ಜನರು ಅಳುವವರನ್ನ ದುರ್ಬಲರು ಕೈಲಾಗದವರು ಎಂದು ತಿಳಿಯುತ್ತಾರೆ ಅದು ತಪ್ಪು ಎಂಬುದು ಕೆಲವರಿಗೆ ಮಾತ್ರ ಗೊತ್ತು. ಇನ್ನು ಕೆಲವರು ಆಳುವವರಿಗೆ ಯಾವಾಗಲು ಬೈಯುತ್ತಾರೆ, ಸಣ್ಣ ಸಣ್ಣ ವಿಚಾರಕ್ಕೆ ಆಳುವವರಿಗೆ ಕಣ್ಣಿನ ತುದಿಯಲ್ಲೇ ಇರತ್ತೆ ನೀರು, ನಿನ್ನ ಕಣ್ಣಲ್ಲಿ ಕಾವೇರಿನೇ ಇದಾಳೆ. ಅಳುಮುಂಜಿ ನೀನು, ಹುಡುಗರು ಅತ್ತರೆ ನೀನೇನು ಹೆಂಗುಸ್ರುತರ ಅಳ್ತಿಯಲ ಅಂತ ಹೇಳುತ್ತಾರೆ ಹೀಗೆ ವಿವಿಧ ಬಗೆಯ ನಾಮಕರಣ ಮಾಡಿ ಆಳುವವರಿಗೆ ಮುಜುಗರವಾಗುವಂತೆ ಮಾಡುತ್ತಾರೆ.

  • ಸುದ್ದಿ

    ಅಮ್ಮ ನೀನು ಎಲ್ಲಿರುವೆ.?ನಿನ್ನ ಕಂದ ಜೀವಂತವಾಗಿರುವನು..ನನ್ನ ಬಳಿಗೆ ಬಾ..ಮುಂದೆ ಓದಿ ಆ ತಾಯಿಗೆ ತಲಪುವವರೆಗೂ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಾವು ಮನುಷ್ಯರು ಇಷ್ಟೊಂದು ಕ್ರೂರಿಗಳಾಗಿ ಬಿಟ್ಟಿದ್ದೇವೆಯೇ.?ಯಾಕಂದ್ರೆ ಇಲ್ಲೊಬ್ಬ ಮಹಾ ತಾಯಿ ತನ್ನ ಹಸುಗೂಸು ಕಂದಮ್ಮನನ್ನು, ಕರುಣೆಯಿಲ್ಲದೆ  ಜೀವಂತವಾಗಿಯೇ ಮಣ್ಣಲ್ಲಿ ಮುಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಮಕ್ಕಳಿಲ್ಲದೆ, ಮಕ್ಕಳಿಗಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ.ಆದರೆ ಸಂತಾನ ಭಾಗ್ಯ ಇರುವ ಕೆಲವರು ಹೀಗೆ ಮಕ್ಕಳನ್ನು ಮಣ್ಣಲ್ಲಿ ಹುತು ಬಿಡುವುದೋ, ಎಲ್ಲೋ ಬಿಸಾಡಿ ಹೋಗುವುದೋ ಮಾಡುತ್ತಾರೆ. ಅಮ್ಮ ನಿನಗೆ ಕರುಣೆನೇ ಇಲ್ವ..? ಆಗತಾನೆ ಕಣ್ಬಿಟ್ಟ ನನಗೆ ನಿನ್ನ ನೋಡೋ ಆಸೆ…

  • ಆಧ್ಯಾತ್ಮ

    ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು.

    ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…

  • ಸುದ್ದಿ

    ಈ ಸಲದ ಮೋದಿ ಬಜೆಟ್’ನಲ್ಲಿ ಜಾಸ್ತಿಯಾಗಿದ್ದೇನು..?ಕಡಿಮೆಯಾಗಿದ್ದೇನು..?ಇಲ್ಲಿದೆ ಸಂಪೂರ್ಣ ಮಾಹಿತಿ…ನೋಡಿ ನಿಮ್ಮ ಅನಿಸಿಕೆ ತಿಳಿಸಿ…

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.

  • Village

    ಕೋಲಾರ ಜಿಲ್ಲೆಯಲ್ಲಿರುವ ಹುಂಗೇನಹಳ್ಳಿ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಓದಿ ಈ ಲೇಖನವನ್ನು

    ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…

    Loading

  • ಸುದ್ದಿ

    ಮನೆಗೆ ಹೋದ ದಿವಾಕರ್ ಪತ್ನಿಯಿಂದ ಈ ಸುದ್ದಿ ಕೇಳಿ ಶಾಕ್ ಆದ್ರು..!ಏನದು ಸುದ್ದಿ ಗೊತ್ತಾ..?

    ‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್. ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.