News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
ತಂತ್ರಜ್ಞಾನ

10ನೇ ತರಗತಿ ಬಾಲಕನ 5 ಕೋಟಿ ಒಪ್ಪಂದ !ಈ ಲೇಖನಿ ಓದಿ ಶಾಕ್ ಆಗ್ತೀರಾ…

8673

ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.

ಹರ್ಷವರ್ಧನ್ 14 ವರ್ಷದ  ಬಾಲಕ, ಗುಜರಾತ್’ನಲ್ಲಿ ನಡೆಯುತ್ತಿರುವ ವೈಬ್ರಂಟ್‌ ಜಾಗತಿಕ ಶೃಂಗಸಭೆಯಲ್ಲಿ ತಾನು ಡಿಸೈನ್ ಮಾಡಿದ ಡ್ರೋನ್ ಅನ್ನು ಪ್ರದರ್ಶನಕ್ಕೆ ತಂದಿದ್ದನು. ಈ ಡ್ರೋನ್  ಕಾರ್ಯವನ್ನು ಗಮನಿಸಿದ ಗುಜರಾತ್ ಸರ್ಕಾರ ತಮಗೆ ಅಂತಹ ಡ್ರೋನ್ ಬೇಕೆಂದು ಆತನ ಜೊತೆ ಬರೊಬ್ಬರಿ 5 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ.

ಈ ಡ್ರೋನ್ ಮಾಡುವ ಕೆಲಸ :- ಯುದ್ಧ ಪ್ರದೇಶಗಳಲ್ಲಿ, ಗಡಿ ಪ್ರದೇಶಗಳಲ್ಲಿ ಅಡಗಿಸಿ ಇಟ್ಟಿರುವ ಮದ್ದುಗುಂಡುಗಳನ್ನು ಗುರ್ತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸುವ ಮೂರು ವಿಧದ ಡ್ರೋನ್’ಗಳನ್ನು ಈ ಪುಟ್ಟ ಪೋರ ತಯಾರಿಸಿದ್ದಾನೆ.

ಈ ಆಲೋಚನೆ ಬಂದಿದ್ದು ಹೇಗೆ?

ಕಳೆದ ಒಂದು ವರ್ಷದಿಂದ ತಾನು ಇಂತಹ ಡ್ತೋನ್’ಗಳನ್ನು ನಿರ್ಮಿಸುತ್ತಿದ್ದು, ಟಿವಿ ನೋಡುವಾಗ ತುಂಬಾ ಜನ ಸೈನಿಕರು ಸ್ಪೋಟಕಗಳಿಂದ ಸಾವನ್ನಪ್ಪುವುದು, ತೀವ್ರವಾಗಿ ಗಾಯಗೊಳ್ಳುವುದನ್ನು ನೋಡಿ ಈ ಆಲೋಚನೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಮೂರು ವಿಧದ ಡ್ರೋನ್’ಗಳನ್ನು ತಯಾರಿಸಲು 5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾನೆ.

ಡ್ರೋನ್’ನಲ್ಲಿ ಏನೇನಿದೆ :-

ಈ ಡ್ರೋನ್’ನಲ್ಲಿ ಇನ್‌ಫ್ರಾರೆಡ್, ಆರ್’ಜಿಬಿ ಸೆನ್ಸರ್ ಇರುತ್ತದೆ ಎಂದೂ, ಜೊತೆಗೆ ಥರ್ಮಲ್ ಮೀಟರ್, 21 ಮೇಗಾಪಿಕ್ಸಲ್ ಕ್ಯಾಮರ, ಮೆಕಾನಿಕಲ್ ಷಟ್ಟರ್ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.

ಡ್ರೋನ್ ಕಾರ್ಯ ಹೇಗಿರುತ್ತೆ :-

ಇವುಗಳ ಸಹಾಯದಿಂದ ಹೈ ರಿಜಲ್ಯೂಷನ್ ಫೋಟೋಗಳನ್ನು ತೆಗೆದು ಕಳುಹಿಸುತ್ತದೆ ಎಂದು ವಿವರಿಸಿದ. ಭೂಮಿಯಿಂದ 2 ಅಡಿ ಗುರುತನ್ನು, 8 ಚದರ ಮೀಟರ್ ಪರಿಧಿಯಲ್ಲಿರುವ ಎಲ್ಲಾ ಜಾಗವನ್ನು ಈ ಡ್ರೋನ್ ಕವರ್ ಮಾಡುತ್ತದೆ. ಆ ಜಾಗದಲ್ಲಿ ಎಲ್ಲಿಯಾದರೂ ಸ್ಪೋಟಕಗಳು ಕಂಡು ಬಂದರೆ ತಕ್ಷಣ ಬೇಸ್ ಸ್ಟೇಷನ್’ಗೆ ಕಳುಹಿಸುತ್ತದೆ. ಇದರಲ್ಲಿ 50 ಗ್ರಾಂಗಳು ತೂಕದ ಬಾಂಬ್ ಒಂದು ಇದ್ದು, ಅದು ಸ್ಫೋಟಕಗಳನ್ನು ಧ್ವಂಸ ಮಾಡುತ್ತದೆ. ತನ್ನ ಕಂಪನಿ ಏರೋಬಾಟಿಕ್ಸ್ ಹೆಸರಿನಲ್ಲಿ ಈ ಡ್ರೋನ್ ಅನ್ನು ಈಗಾಗಲೇ ಪೇಟೆಂಟ್ ಸಹ ರಿಜಿಸ್ಟ್ರಾರ್ ಮಾಡಿಸಿದ್ದಾನೆ ಈ ಬಾಲಕ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ