ಸುದ್ದಿ

ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ಮಾದರಿಯಾದ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

By admin

March 15, 2018

ಚುನಾಯಿತರಾದ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಎಷ್ಟರ ಮಟ್ಟಿಗೆ ಭೇಟಿ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ ಇಲ್ಲೊಬ್ಬರು ಶಾಸಕರಿದ್ದಾರೆ.. ತಮ್ಮ ಕ್ಷೇತ್ರದ ಜನರ ಜೊತೆ ಸಾಮಾನ್ಯ ಜನರಂತೆ ಬೆರೆತು ಕ್ಷೇತ್ರದ ಹಾಗು ಹೋಗುಗಳ ಬಗ್ಗೆ ಸ್ವತಃ ತಾವೇ ಖುದ್ದಾಗಿ ವಿಚಾರಿಸುತ್ತಿರುತ್ತಾರೆ..

ಹೌದು ಇವರು ಮತ್ಯಾರು ಅಲ್ಲ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

ಈಗಾಗಲೇ ಪ್ರತಿಭೆಗಳಿಗಾಗಿ ತಮ್ಮ ಕ್ಷೇತ್ರದಲ್ಲಿ ಮಾಡಿಕೊಟ್ಟಿರುವ ಅನುಕೂಲಗಳು ಲೆಕ್ಕವಿಲ್ಲ.. ಶಾಸಕರ ಅನುದಾನ ದಲ್ಲಿ 7.75 ಕೋಟಿ ಹಣವನ್ನು ಶಿಕ್ಷಣದ ಉದ್ದೇಶಕ್ಕಾಗಿ ಖರ್ಚು ಮಾಡಿರುವುದು ಇವರ ಕೆಲಸಕ್ಕೊಂದು ಕೈಗನ್ನಡಿ ಎನ್ನಬಹುದು..

 

ಇದೀಗ ಸರ್ಕಾರಿ ಶಾಲೆಯ ಮಕ್ಕಳನ್ನು ಭೇಟಿ ಮಾಡಿ ಶಾಲೆಯ ಸೌಲಭ್ಯಗಳ ಕುರಿತು ಸಂವಾದ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ..‌ ಯಾವ ಅಧಿಕಾರಿಗಳಿಗೂ ಕೆಲಸ ವಹಿಸದೆ.. ಸ್ವತಃ ತಾವೇ ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳ ವಿಧ್ಯಾಭ್ಯಾಸದ ಕುರಿತು ವಿಚಾರಿಸಿ.. ಸೌಲಭ್ಯಗಳ ಬಗ್ಗೆ ಮಕ್ಕಳ ಬಳಿಯೇ ಸಂವಾದ ನಡೆಸಿದ್ದಾರೆ..

ಡಾ. ಅಶ್ವತ್ಥ್ ನಾರಾಯಣ್ ರವರು ಮಾಡುತ್ತಿರುವ ಈ ಪ್ರಶಂಸನೀಯ ಕೆಲಸವನ್ನು ಬಯೋಕಾನ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಕಿರಣ್ ಮಜುಮ್ದಾರ್ ಶಾ ರವರು ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ..

 

ಈಗಾಗಲೇ ಅಂತರಾಷ್ಟ್ರೀಯ ಮಟ್ಟದ ಅನೇಕ ಸ್ಟೇಡಿಯಂಗಳು ಮಲ್ಲೇಶ್ವರಂ ನಲ್ಲಿ ತಲೆ ಎತ್ತಿ ನಿಂತಿದೆ.. ಆಗಿಂದಾಗ್ಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಕೂಡ ಅಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ..

ಡಾ.ಅಶ್ವತ್ಥ್ ನಾರಾಯಣ್ ರವರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಯ ಮೇಲಿರುವ ಕಾಳಜಿಗೆ ನಮ್ಮ ಕಡೆಯಿಂದ ಧನ್ಯವಾದಗಳು..