inspirational, ಆಧ್ಯಾತ್ಮ, ದೇವರು, ದೇವರು-ಧರ್ಮ

ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ

222

ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ…‌‌‌ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ..

ರೈತನೊಬ್ಬ ಉರುಳಿಗೆ ತಲೆಕೊಟ್ಟಾಗ…….‌,
ಗೃಹಿಣಿಯೊಬ್ಬಳು ಬೆಂಕಿಗೆ ಆಹುತಿಯಾದಾಗ………,
ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………,
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ……….,
ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾದಾಗ…………‌‌,
ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ………………,
ವಂಚಕರು ವಿಧಾನಸೌಧ – ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ…………,

ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ……‌..,
ಭ್ರಷ್ಟ ರು ಅಧಿಕಾರ ನಡೆಸುವಾಗ……….,
ಕಾಮಿಗಳು ಕಾವಿ ತೊಟ್ಟಿರುವಾಗ……….,
ಅನ್ನ ತಿನ್ನುವವರು ದೇಶದ್ರೋಹಿಗಳಾದಾಗ…….‌…‌,
ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ………,
ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ…………,
ತಿನ್ನುವ ಆಹಾರಕ್ಕೆ ಕಲಬೆರಕೆ ಮಾಡುತ್ತಿರುವಾಗ……..,
ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ…………,
ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ……..,
ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ – ಜಾಗರಣೆ ಮಾಡುತ್ತಿರುವಾಗ…..‌,

ನೆನಪಾಗುವೆ ನೀನು ಶಿವ…….ಆದರೆ,………….
ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ…..
ಅಥವಾ,ನೀನು ಬರುವೆಯೆಂದು ಶತಶತಮಾನಗಳಿಂದ ಕಾಯುತ್ತಿರುವ ಮೂರ್ಖ ನಾನೋ……….

ಒಂದಂತು ನಿಜ…ನೀನು ಪ್ರತ್ಯಕ್ಷವಾಗುವವರೆಗೂ, ನಿನ್ನನ್ನು ನಂಬುವುದಿಲ್ಲ.
ನೀನು ಎಷ್ಟೇ ದೊಡ್ಡವನಾಗಿರು, ನೀನು ಎಷ್ಟೇ ಎತ್ತರದಲ್ಲಿರು, ನೀನು ಎಷ್ಟೇ ಶಕ್ತಿವಂತನಾಗಿರು,
ನೀನು ಎಷ್ಟೇ ಬುದ್ದಿವಂತನಾಗಿರು, ನನ್ನಂತ ಸಾಮಾನ್ಯನ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಿ ಸರಳವಾಗಿ ಸಹಜವಾಗಿ ಮಾರ್ಗದರ್ಶನ ಮಾಡುವವರೆಗೂ ,

ನೀನೊಂದು ಭ್ರಮೆ, ನೀನೊಂದು ಕಲ್ಪನೆ, ನೀನೊಂದು ಶಿಲೆ, ನೀನೊಂದು ಗೊಂಬೆ, ನೀನೊಂದು ಭಾವ,
ನೀನೊಂದು ತರ್ಕ, ನೀನೊಂದು ಸಂಕೇತ, ನೀನೆಂದಿಗೂ ವಾಸ್ತವವಾಗಲಾರೆ.
ಎಚ್ಚರಿಕೆ…

( ಇದು ಕೇವಲ ಶಿವನಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳ ಎಲ್ಲಾ ದೇವರೆಂಬ ಭಾವಗಳಿಗೂ ಅನ್ವಯ.)
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಪಾರು’ ಧಾರಾವಾಹಿಯ ನಟಿ ಮೋಕ್ಷಿತಾ ಪೈ ಮಾಡಿದ ಕೆಲಸಕ್ಕೆ ಎಲ್ಲರು ಮೆಚ್ಚಲೇಬೇಕು…

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು‘ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್. ಧಾರಾವಾಹಿಯಲ್ಲಿ ಮನೆ ಕೆಲಸದವಳ ಪಾತ್ರದಲ್ಲಿ ಕಾಣಿಸಿಕೊಂಡ ಮೋಕ್ಷಿತಾಗೆ ಇತ್ತೀಚೆಗೆ ನಡೆದ ‘ಜೀ ಕುಟುಂಬ ಅವಾರ್ಡ್ಸ್‌’ನಲ್ಲಿ ಬೆಸ್ಟ್ ಲೀಡ್ ಫಿಮೇಲ್ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೆ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಭಾರೀ ಜನಮನ್ನಣೆ ಕೂಡ ಲಭಿಸಿತ್ತು. ಪಾರು ಪಾತ್ರಧಾರಿ ಮೋಕ್ಷಿತಾ ಪೈ ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸರ್ಜಾಪುರದಲ್ಲಿರುವ ‘ತಾಯಿಮನೆ’ ಅನಾಥಾಶ್ರಮದಲ್ಲಿ 100ಕ್ಕೂ ಅಧಿಕ ಮಕ್ಕಳಿಗೆ ಬೆಳಿಗ್ಗಿನ ತಿಂಡಿಯನ್ನು ತಮ್ಮ ಕೈಯ್ಯಾರೆ ಬಡಿಸಿ ಖುಷಿಯಿಂದ ಬರ್ತಡೇ ಆಚರಿಸಿಕೊಂಡಿದ್ದಾರೆ….

  • inspirational

    ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..

    ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರುಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ತಿಳಿದುಕೊಂಡ ಶುದ್ದೋಧನನು ತನ್ನ ಮಗನು ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ‌. ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ…

  • ಸುದ್ದಿ

    ಇನ್ನಷ್ಟು ಸುರಕ್ಷಿತವಾದ ಎಂ-ಆಧಾರ್‌ ಆ್ಯಪ್‌ ಬಿಡುಗಡೆ,ಇದರ ವಿಶೇಷತೆಯಾದರು ಏನು ಗೊತ್ತಾ,.!

    ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಎಂ-ಆಧಾರ್‌ ಆ್ಯಪ್‌ ಅನ್ನು ಮತ್ತಷ್ಟು ಸುರಕ್ಷಿತಗೊಳಿಸಿರುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಹೊಸ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆಮಾಡಿದೆ.ಹಿಂದಿನ ಆವೃತ್ತಿಯನ್ನು ಅಳಿಸಿ,ನೂತನ ಆವೃತ್ತಿಯನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ನೂತನ ಆವೃತ್ತಿಯ ಎಂ-ಆಧಾರ್‌ನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಿವೆ. ಆಧಾರ್‌ ಕಾರ್ಡ್‌ ಡೌನ್‌ಲೋಡ್‌, ಆಫ್‌ಲೈನ್‌ ಇಕೆವೈಸಿ, ವಿಳಾಸ ಪರಿಷ್ಕರಣೆ, ಇ-ಮೇಲ್‌ ಪರಿಶೀಲನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಎಂ-ಆಧಾರ್‌ನಿಂದ ಪಡೆಯಬಹುದಾಗಿದೆ. ಗುರುತು ಖಾತ್ರಿಗಾಗಿ ಆಧುನಿಕ ಬಯೋಮೆಟ್ರಿಕ್‌ ವ್ಯವಸ್ಥೆಯನ್ನುನೂತನ ಆವೃತ್ತಿಯಲ್ಲಿ ಬಳಸಲಾಗಿದ್ದು, ಇದರಿಂದ ಆಧಾರ್‌ ಆ್ಯಪ್‌ಅನ್ನು ಲಾಕ್‌…

  • ಸಿನಿಮಾ

    ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಜಯಪ್ರದಾ!

    ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಶನಿವಾರ ರಾತ್ರಿ ವಿಧಿವಶರಾಗಿದ್ದು, ಆ ಕ್ಷಣದಿಂದ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿಯೊಂದು ಹಂತದಲ್ಲೂ ಕರ್ನಾಟಕ ಪೊಲೀಸರು ಸಂಯಮ ತೋರಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ನಿಂತು ತಮ್ಮ ಅಧೀನ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಂಸದೆ ಜಯಪ್ರದಾ, ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಅಣ್ಣಾಮಲೈ ಅವರ ವಿರುದ್ಧ ಆಕ್ರೋಶ…

  • ಕರ್ನಾಟಕದ ಸಾಧಕರು

    ‘ತಿಮ್ಮಪ್ಪ ನಾಯಕ’ ಕನಕದಾಸರಾಗಿದ್ದು ಹೇಗೆ ಎಂದು ತಿಳಿಯ ಬೇಕಾ..!ಹಾಗದ್ರೆ ಈ ಲೇಖನ ಓದಿ..

    ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.